ಬಾಗೇಪಲ್ಲಿ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಮೂಡಿಸುವಂತೆ, ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ನೂ ಒಂದೇ ತಿಂಗಳಲ್ಲಿ ನಾನು ಬಾಗೇಪಲ್ಲಿ ಶಾಸಕನಾಗುತ್ತೇನೆ. ಈಗಿನ ಶಾಸಕ ಸುಬ್ಬಾರೆಡ್ಡಿ ಸಚಿವನಾಗುವ ಕನಸು ಕಾಣ್ತಿದ್ದಾರೆ ಆದರೆ ನಾನು ಶಾಸಕನಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ಮುನಿರಾಜು ಅವರು ಬಾಗೇಪಲ್ಲಿ ಶಾಸಕ S.N. ಸುಬ್ಬಾರೆಡ್ಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುಬ್ಬಾರೆಡ್ಡಿ ಒಂದು ತಿಂಗಳಲ್ಲಿ ಅನರ್ಹರಾಗುವುದು ಖಚಿತ. ಚುನಾವಣೆಯಲ್ಲಿ ಅವರು ನೀಡಿರುವ ದಾಖಲೆಗಳಲ್ಲಿ ಅಕ್ರಮಗಳಿರುವ ಕುರಿತು ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ತಮ್ಮ ಪರವಾಗಿ ನಡೆಯುತ್ತಿದೆ ಎಂದು ಮುನಿರಾಜು ವಿಶ್ವಾಸ ವ್ಯಕ್ತಪಡಿಸಿದರು. ತೀರ್ಪು ಕೂಡ ನನ್ನ ಪರವಾಗಿಯೇ ಬರಲಿದೆ ಎಂದು ಹೇಳಿದರು.
ದೇವರ ದಯೆಯಿಂದ ನಾನು ಎಂಎಲ್ಎ ಆಗಲಿದ್ದೇನೆ. ಸುಬ್ಬಾರೆಡ್ಡಿ ಅವರನ್ನು ಅನರ್ಹಗೊಳಿಸಿ ನನಗೆ ಶಾಸಕ ಸ್ಥಾನ ನೀಡುವಂತೆ ಕೇಸ್ ದಾಖಲಿಸಿದ್ದೆ. ಸುಪ್ರಿಂ ಕೋರ್ಟ್‌ನಲ್ಲಿ ಎರಡು ಬಾರೀ ಸುಬ್ಬಾರೆಡ್ಡಿ ಪ್ರಕರಣ ವಜಾ ಆಗಿದೆ. ಇದೇ ತಿಂಗಳ 11 ರಂದು ತೀರ್ಪು ಇದೆ. ನನ್ನನ್ನು ಶಾಸಕನನ್ನಾಗಿಸುವ ಅವಕಾಶ ಸಂವಿಧಾನದಲ್ಲಿ ಇದೆ. ಅಂಬೇಡ್ಕರ್ ಸಂವಿಧಾನದಲ್ಲಿ ಶಾಸಕನಾಗುವ ಅವಕಾಶ ಇದೆ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ

