ಕರ್ನಾಟಕ ಟಿವಿ : ತೀವ್ರ ನೆರೆಯಿಂದ ಹಾನಿಗೀಡಾಗಿರುವ ಬೆಳಗಾವಿಯಲ್ಲಿ ಪೊಲಿಟಿಲ್ ಹೈಡ್ರಾಮಾ ಸಹ ತೀವ್ರ ಸ್ವರೂಪ ಪಡೆಯುತ್ತಿದೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ನಿರಂತರ ಪ್ರವಾಸ ಕೈಗೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಶಪಥ ಮಾಡಿದ್ದಾರೆ. ಕರ್ನಾಟಕದಲ್ಲಿ ತೀವ್ರ ನೆರೆಯಿಂದ ಜೀವ ಹಾನಿ, ಬೆಳೆ ಹಾನಿ ಸಂಭವಿಸಿದ್ರು ಮೋದಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ರಾಜ್ಯದ ಬಿಜೆಪಿ ನಾಯಕರಿಗೆ ಪರಿಹಾರ ತರುವ ಸಾಮರ್ಥ್ಯ ಇಲ್ಲ. ಹೀಗಾಗಿ ನಾನು ಬೆಂಗಳೂರಿನಲ್ಲಿ ಗೋಕಾಕ್ ಜನರಿಗಾಗಿ ಭಿಕ್ಷೆ ಬೇಡಿ ಹಣ ತಂದು ನೆರೆ ಸಂತ್ರಸ್ತರಿಗೆ ನೆರವಾಗ್ತೀನಿ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಶಪಥ ಮಾಡಿದ್ದಾರೆ. ಇತ್ತ ಗೋಕಾಕ್ ನ ಸಾಹುಕಾರ್ ಅನರ್ಹತೆ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಬಿಎಸ್ ವೈ ಸಂಪುಟದಲ್ಲಿ ಸಚಿವರಾಗಿ ಉಪಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್ ಬಹಿರಂಗವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಜನರ ವಿಶ್ವಾಸ ಗಳಿಸೋಕೆ ಮುಂದಾಗಿದ್ದಾರೆ.