BREAKING NEWS: ನಾನು ರಾಜೀನಾಮೆ ನೀಡೋದಿಲ್ಲ, ಅಮೂಲಾಗ್ರ ತನಿಖೆಯಾಗಲಿ – ಸಚಿವ ಕೆ.ಎಸ್ ಈಶ್ವರಪ್ಪ ಸ್ಪಷ್ಟನೆ

ಶಿವಮೊಗ್ಗ: ನನ್ನ ವಿರುದ್ಧ ಇದೊಂದು ಷಡ್ಯಂತ್ರವಾಗಿದೆ. ಸಂತೋಷ್ ಬರೆದಿರೋ ವಾಟ್ಸಾಪ್ ದು ಡೆತ್ ನೋಟ್ ಅಲ್ಲವೇ ಅಲ್ಲ. ಈ ಬಗ್ಗೆ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದಾನೆ. ಈ ವಿಚಾರದಲ್ಲಿ ನಾನು ರಾಜೀನಾಮೆ ನೀಡೋದಿಲ್ಲ. ಆಮೂಲಾಗ್ರ ತನಿಖೆಯಾಗಲಿ ಎಂಬುದಾಗಿ ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ.

ಇಂದು ನಗರದಲ್ಲಿ ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸಂತೋಷ್ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅವರು ನಮ್ಮ ಇಲಾಖೆಯ ಕೇಂದ್ರ ಸಚಿವರಿಗೆ ಗುತ್ತಿಗೆ ಕಮೀಷನ್ ಸಂಬಂಧ ದೂರು ಕೊಟ್ಟಿದ್ದಾರೆ. ಆ ದೂರಿಗೆ ನಮ್ಮ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಆ ರೀತಿಯ ಯಾವುದೇ ವರ್ಕ್ ಆರ್ಡರ್ ಇಲ್ಲದಂತ ಕಾಮಗಾರಿ ನೀಡಿಯೇ ಇಲ್ಲ ಎಂಬುದಾಗಿ ಲಿಖಿತವಾಗಿಯೇ ಉತ್ತರಿಸಿ ಸ್ಪಷ್ಟ ಪಡಿಸಿದ್ದಾರೆ ಎಂದು ತಿಳಿಸಿದರು.

ಪಾಪಾ ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಅವರಿಗೆ ಕಾಮಗಾರಿ ಸಂಬಂಧ ಗುತ್ತಿಗೆ ನೀಡುವ ಬಗ್ಗೆ ಮಾಹಿತಿ ಇದ್ದರೂ ಇಲ್ಲದಂತೆ ನನ್ನನ್ನು ರಾಜೀನಾಮೆ ನೀಡುವಂತ ಕೇಳುತ್ತಿದ್ದಾರೆ. ಗಣಪತಿ ಪ್ರಕರಣದಲ್ಲಿ ಡೆತ್ ನೋಟ್ ಅವರೇ ಕೈಯಾರೇ ಬರೆದಿದ್ದರು. ಅದು ಅವರ ದೇಹದ ಹತ್ತಿರವೇ ಇತ್ತು. ಹೀಗಾಗಿ ಜಾರ್ಜ್ ರಾಜೀನಾಮೆ ಪಡೆಯುವಂತೆ ಆಯ್ತು ಎಂದರು.

ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮ ಬಿಜೆಪಿ ರಾಜ್ಯಾಧ್ಯರಾದಂತ ನಳೀನ್ ಕುಮಾರ್ ಕಟೀಲ್ ಗೂ ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ್ದೇನೆ. ಈ ಪ್ರಕರಣ ಕುರಿತಂತೆ ಆಮೂಲಾಗ್ರ ತನಿಖೆಯಾಗಬೇಕು. ಆ ನಂತ್ರ ಈ ಪ್ರಕರಣದ ಹಿಂದಿನ ಸತ್ಯಾಸತ್ಯತೆ ತಿಳಿಯಬೇಕು. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂಬುದಾಗಿ ಹೇಳುವ ಮೂಲಕ, ನಾನು ರಾಜೀನಾಮೆ ನೀಡುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದರು.

About The Author