Saturday, July 27, 2024

Latest Posts

ಐಸಿಸಿ ಟಿ-20 ವಿಶ್ವಕಪ್ ಬೆಳ್ಳಿ ಪರದೆಯಲ್ಲಿ

- Advertisement -

2021 ನೇ ಇಸವಿ, ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಬಡಿಸೋ ವರ್ಶವಾಗಿದೆ. ಈಗಾಗಲೇ ಐಪಿಎಲ್ ಮುಗಿದಿದ್ದು, ಮುಂದೆ ಟಿ-20 ವಿಶ್ವಕಪ್ ಕ್ರೇಜ್ ಈಗಾಗಲೇ ಶುರುವಾಗಿದೆ. ಆಕ್ಟೋಬರ್ 17ರಿಂದ ಕ್ರಿಕೆಟ್ ಟೂರ್ನಿ ಶುರುವಾಗ್ತಿದೆ, ಅಂದಹಾಗೆ ಟಿ-20 ಕಪ್ ಭಾರತದಲ್ಲೇ ಶುರುವಾಗಬೇಕಿತ್ತು, ಆದ್ರೆ ಕೊರೋನಾ ಕಾರಣದಿಂದಾಗಿ ಯುಎಇ ಮತ್ತು ಓಮಾನ್‌ನಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದೆ. ಈ ಮಧ್ಯೆ ಕ್ರಿಕೆಟ್ ಪ್ರೇಮಿಗಳಿಗೆ ಐಸಿಸಿ ಒಂದು ಗುಡ್ ನ್ಯೂಸ್ ನೀಡಿದೆ.
ಎಸ್, ಭಾರತದ ಮಲ್ಟಿಪ್ಲೆಕ್ಸ್ ಮ್ಯಾನೆಂಜ್‌ ಮೆಂಟ್ ಐನಾಕ್ಸ್ ಸಂಸ್ಥೆ ,ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡುವ ಎಲ್ಲಾ ಪಂದ್ಯಗಳನ್ನೂ ಬೆಳ್ಳಿ ಪರದೆಯಲ್ಲಿ ಪ್ರದರ್ಶಿಸೋದಕ್ಕೆ ನಿರ್ಧಾರ ಮಾಡಿದೆ. ಇದಕ್ಕಾಗಿ ಈಗಾಗಲೇ ಐನಾಕ್ಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ದೇಶದ 70ನಗರಗಳಲ್ಲಿ 56 ಮಲ್ಟಿಪ್ಲೆಕ್ಸ್ ಗಳ 658 ಸ್ಕ್ರೀನ್ ಗಳಲ್ಲಿ ವರ್ಲ್ಡ್ ಕಪ್ ಟೂರ್ನಿಯಲ್ಲಿ ಭಾರತ ಆಡುವ ಎಲ್ಲಾ ಪಂದ್ಯಗಳನ್ನು ನೋಡುವ ಅವಕಾಶ ಮಾಡಿ ಕೊಡಲಿದೆ.
ಇನ್ನು ಆಕ್ಟೋಬರ್ 24ರಂದು ಭಾರತ ತನ್ನ ಸಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಇನ್ನು ಬೆಳ್ಳಿ ಪರದೆ ಮೇಲೆ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಟಿಕೆಟ್ ದರವನ್ನೂ ನಿಗದಿಪಡಿಸಲಾಗಿದೆ. ಥಿಯೇಟರ್ ನ ನಾನಾ ಕ್ಲಾಸ್ ಗಳಲ್ಲಿ ಪಂದ್ಯ ವೀಕ್ಷಣೆಗೆ 200ರಿಂದ 500 ರೂಪಾಯಿ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಕ್ರಿಕೆಟ್ ಅಭಿಮಾನಿಗಳು ಯಾವುದೆ ಆಡೆ-ತಡೆಗಳಿಲ್ಲದೆ ಆರಾಮಾಗಿ ಇನ್ನು ಮುಂದೆ ಬಿಗ್ ಸ್ಕ್ರೀನ್ ನಲ್ಲಿ ಕ್ರಿಕೆಟ್ ಪಂದ್ಯವನ್ನು ಎಂಜಾಯ್ ಮಾಡಬಹುದಾಗಿದೆ.
ಮಂಜುನಾಥ್ ದೇವಾಂಗ್ ಶೆಟ್ಟಿ, ಸ್ಫೋರ್ಟ್ಸ್ ಬ್ಯೂರೋ ಕರ್ನಾಟಕ ಟಿವಿ

- Advertisement -

Latest Posts

Don't Miss