Sunday, April 13, 2025

Latest Posts

ಐಸಿಸಿಆರ್ ನಿಂದ ವಿದೇಶಿಗರಿಗೆ ಹಿಂದಿ ಕೋರ್ಸ್

- Advertisement -

ಬೆಂಗಳೂರು: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಮತ್ತು ಕೇಂದ್ರ ಹಿಂದಿ ನಿರ್ದೇಶನಾಲಯದ ಸಹಯೋಗದೊಂದಿಗೆ ವಿದೇಶಿಗರಿಗಾಗಿ ಹಿಂದಿ ಕಲಿಸಲು ನ.16 ರಿಂದ ಆನ್ ಲೈನ್ ತರಗತಿಯನ್ನು ಪ್ರಾರಂಭಿಸಲಿದೆ. ಈ ತರಗತಿಯಲ್ಲಿ ಹಿಂದಿ ಜಾಗೃತಿಯ ಬೇಸಿಕ್ ಕೋರ್ಸ್ ನ್ನು 3 ತಿಂಗಳು ಆನ್ ಲೈನ್ ಮೂಲಕ ವಾರಕ್ಕೆ 2 ದಿನದಂತೆ ನಡೆಸಲಾಗುವುದೆಂದು ಐಸಿಸಿಆರ್ ಪ್ರಕಟಿಸಿದೆ.

ತರಗತಿಯ ಒಟ್ಟು ಶುಲ್ಕದಲ್ಲಿ ಶೇಕಡ 70ರಷ್ಟು ಐಸಿಸಿಆರ್ ವಿನಾಯಿತಿ ನೀಡಲಿದ್ದು, ಉಳಿದ 30ರಷ್ಟು ನೋಂದನಿ ಮಾಡಿಕೊಂಡ ವಿದ್ಯಾ್ಥಿಗಳು ಭರಿಸಲಿದ್ದಾರೆ. ಅರ್ಹ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ, ದಾಖಲಿಸಿಕೊಳ್ಳುವ, ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡುವ, ಪ್ರಮಣೀಕರಿಸುವ ಕೆಲಸವನ್ನು ಐಜಿಎನ್ಒಯು ಮಾಡುತ್ತದೆ. ತರಗತಿಗೆ ಬೇಕಾದ ಪೂರಕವಾದ ಸೌಕರ್ಯ ಒದಗಿದುವ ಜವಾಬ್ದಾರಿಯನ್ನು ಕೇಂದ್ರ ಹಿಂದಿ ನಿರ್ದೇಶನಾಲಯ ಮಾಡಲಿದೆ. ತರಗತಿಗೆ ಈಗಾಗಲೇ ವಿದೇಶಗಳಿಂದ 226 ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ ಎಂದು ಪ್ರಕಟಣಯಲ್ಲಿ ತಿಳಿಸಿದ್ದಾರೆ. ಹಿಂದಿ ಹೆಚ್ಚು ಮಾತನಾಡುವ ಮೂರನೇ ಭಾಷೆಯಾಗಿದ್ದು, ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಈ ತರಗತಿಗಳನ್ನು ಆರಂಭಿಸಿರುವುದಾಗಿ  ಐಸಿಸಿಆರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಚೆನ್ನೈ – ಮೈಸೂರು ನಡುವಿನ ಪ್ರಾಯೋಗಿಕ ‘ವಂದೇ ಭಾರತ್’ ರೈಲಿನ ಸಂಚಾರ ಪ್ರಾರಂಭ

7ನೇ ವೇತನ ಆಯೋಗ ರಚನೆಗೆ ಸಿಎಂ ಬೊಮ್ಮಾಯಿ ಭರವಸೆ : ಎರಡು ದಿನದಲ್ಲಿ ಆದೇಶ

 

- Advertisement -

Latest Posts

Don't Miss