ಕ್ಯಾಂಡಲ್ ಉದ್ಯಮ.. ಮಿಡಲ್ ಕ್ಲಾಸ್ ಜನರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಈ ಬ್ಯುಸಿನೆಸ್‌ನಲ್ಲಿ ಲಾಭ ಕಾಣುತ್ತಿದ್ದಾರೆ. ಬಾಲಿವುಡ್‌ನ ಕೆಲ ಸೆಲೆಬ್ರಿಟಿಗಳು ಪಾರ್ಟ್‌ಟೈಮ್ ಬ್ಯುಸಿನೆಸ್ ಅಂತಾ ಪರ್ಫ್ಯೂಮ್ ಕ್ಯಾಂಡಲ್ ಉದ್ಯಮ ಮಾಡ್ತಿದ್ದಾರೆ. ಮತ್ತು ಭರ್ಜರಿ ಲಾಭವೂ ಕಾಣ್ತಿದ್ದಾರೆ.

ಈ ರೀತಿ ಲಾಭ ಕಾಣೋಕ್ಕೆ ಕಾರಣವೇನು ಗೊತ್ತಾ..? ಹಿಂದೂಗಳು ಊದುಬತ್ತಿ ಬಳಸೋ ರೀತಿ, ಕ್ರಿಶ್ಚಿಯನ್ನರು ಕ್ಯಾಂಡಲ್ ಬಳಸುತ್ತಾರೆ. ಅಲ್ಲದೇ ಧ್ಯಾನ ಕೇಂದ್ರ, ಧಾರ್ಮಿಕ ಕೇಂದ್ರ, ದೇವಸ್ಥಾನ ಮನೆಗಳಲ್ಲಿ ಊದುಬತ್ತಿ ಬಳಸೋ ರೀತಿ. ದೊಡ್ಡ ದೊಡ್ಡ ಹೊಟೇಲ್, ರೆಸ್ಟೊರೆಂಟ್‌ಗಳಲ್ಲಿ, ಚರ್ಚ್, ಪಾರ್ಟಿ, ಫಂಕ್ಷನ್, ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿಯೂ ಕ್ಯಾಂಡಲ್ ಉಪಯೋಗ ಕಡ್ಡಾಯವಾಗಿದೆ. ಅಲ್ಲದೇ, ವಿದೇಶಿಗರು ಕ್ಯಾಂಡಲ್ ಬಳಸೋದು ಕಾಮನ್.
ಇನ್ನು ಶ್ರೀಮಂತರು ತಮ್ಮ ಮನೆ ಪಾರ್ಟಿಗಳಲ್ಲಿ ಕ್ಯಾಂಡಲ್‌ನಿಂದಾನೇ ಮನೆಯನ್ನ ಶೃಂಗಾರ ಮಾಡ್ತಾರೆ. ಇದರಿಂದ ಮಂದವಾದ ಬೆಳಕಿನ ಜೊತೆ ಪಾರ್ಟಿ ಮೂಡ್‌ಗೆ ಬೇಕಾಗಿರೋ ಪರ್ಫ್ಯೂಮ್ ಸ್ಮೆಲ್ ಎಲ್ಲರ ಗಮನ ಸೆಳೆಯುತ್ತೆ.
ಅಲ್ಲದೇ, ಮ್ಯಾರೇಜ್ ಆ್ಯನಿವರ್ಸರಿಗೆ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಅರೇಂಜ್ ಮಾಡಿರ್ತಾರೆ. ಇದಕ್ಕೆಲ್ಲ ಕ್ಯಾಂಡಲ್ ಅವಶ್ಯಕತೆ ಬಹುಮುಖ್ಯವಾಗಿರುತ್ತದೆ.
ಇನ್ನು ಕ್ಯಾಂಡಲ್ ಉದ್ಯಮ ಶುರು ಮಾಡೋಕ್ಕೆ ಎಷ್ಟು ಬಂಡವಾಳ ಹೂಡಬೇಕು..? ಯಾವ ಯಾವ ವಸ್ತುಗಳನ್ನ ಕ್ಯಾಂಡಲ್ ಮಾಡಲು ಬಳಸಬೇಕು..?ದೊಡ್ಡ ಮಟ್ಟದಲ್ಲಿ ಇದನ್ನ ಮಾರ್ಕೆಟಿಂಗ್ ಮಾಡೋದು ಹೇಗೆ ಅನ್ನೋದರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಈ ಉದ್ಯಮವನ್ನ ಮೊದಲು ಸಣ್ಣಮಟ್ಟದಲ್ಲೇ ಶುರು ಮಾಡಿ. 2ರಿಂದ 3 ಸಾವಿರ ರೂಪಾಯಿ ಬಂಡವಾಳ ಹೂಡಿ ಕ್ಯಾಂಡಲ್ ಉದ್ಯಮ ಶುರು ಮಾಡಬಹುದು.
ಕ್ಯಾಂಡಲ್ ಮಾಡಲು ಪ್ಯಾರಾಫೈನ್ ವ್ಯಾಕ್ಸ್ ಅಂದ್ರೆ ಮೇಣದ ಅವಶ್ಯಕತೆ ಇರುತ್ತದೆ. ಅಲ್ಲದೇ, ಕ್ಯಾಂಡಲ್‌ಗೆ ಬೇಕಾಗಿರುವ ದಾರ, ಪರ್ಫ್ಯೂಮ್, ಕಲರ್, ಮೋಲ್ಡ್, ಕ್ಯಾಂಡಲ್‌ಗೆ ಬಳಸೋ ಪರ್ಫ್ಯೂಮ್ ಬೇಕಾಗುತ್ತದೆ. ಜೊತೆ ತವ್ವಾ ಮತ್ತು ಒಂದು ಪಾತ್ರೆಯ ಅವಶ್ಯಕತೆ ಇರುತ್ತದೆ.
ಮೊದಲು ಪ್ಯಾರಾಫೈನ್ ವ್ಯಾಕ್ಸ್ ಚೆನ್ನಾಗಿ ಪುಡಿ ಮಾಡಿ, ಪಾತ್ರೆಗೆ ಹಾಕಿ. ಈಗ ಗ್ಯಾಸ್ ಆನ್ ಮಾಡಿ ತವ್ವಾ ಬಿಸಿ ಮಾಡಿ ಅದರ ಮೇಲೆ ಪಾತ್ರೆ ಇಟ್ಟು ಮೇಣವನ್ನ ಕರಗಿಸಿ. ಈಗ ಯಾವ ಕಲರ್ ಕ್ಯಾಂಡಲ್ ಮಾಡಲು ಇಷ್ಟವೋ ಆ ಕಲರನ್ನ ಮೇಣಕ್ಕೆ ಹಾಕಿ. ಯಾವ ವೆರೈಟಿ ಪರ್ಫ್ಯೂಮ್ ಇಷ್ಟವೋ ಆ ವೆರೈಟಿ ಪರ್ಫ್ಯೂಮ್ ಬಳಸಿ. ಈಗ ನಿಮಗೆ ಇಷ್ಟವಾದ ಮೋಲ್ಡ್‌ನಲ್ಲಿ ಮೇಣದ ಬತ್ತಿಗೆ ಬೇಕಾದ ದಾರ ಹಾಕಿ, ಮೇಣದ ಮಿಶ್ರಣ ಹಾಕಿ, ಒಣಗಲು ಬಿಡಿ. ಈ ಕ್ಯಾಂಡಲ್ ರೆಡಿ.
ಒಂದು ಕ್ಯಾಂಡಲ್ ಮಾಡೋಕ್ಕೆ ನಿಮಗೆ 20ರಿಂದ 25 ರೂಪಾಯಿ ಖರ್ಚಾಗುತ್ತದೆ. ಆದ್ರೆ ನೀವಿದನ್ನ ಆನ್‌ಲೈನ್‌ನಲ್ಲಿ ಅಥವಾ ಮಾರ್ಕೆಟ್‌ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.