ಕ್ಯಾಟರಿಂಗ್ ಉದ್ಯಮ ಶುರುಮಾಡಲು ಇಲ್ಲಿದೆ ನೋಡಿ ಕೆಲ ಟಿಪ್ಸ್..!

ಇವತ್ತು ನಾವು ಕ್ಯಾಟರಿಂಗ್ ಉದ್ಯಮ, ಅಂದ್ರೆ ಬಾಣಸಿಗರ ಕೆಲಸ ಶುರು ಮಾಡೋದಕ್ಕೆ ಏನೇನು ಬೇಕು..? ಹೇಗೆ ಈ ಉದ್ಯಮವನ್ನ ಶುರು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನೀವು ಕ್ಯಾಟರಿಂಗ್ ಉದ್ಯಮ ಶುರು ಮಾಡುವುದಕ್ಕೂ ಮೊದಲು ಆ ಬಗ್ಗೆ ಕೊಂಚ ಮಾಹಿತಿ ಹೊಂದಿರಬೇಕು. ಯಾರೋ ಹೇಳಿದ್ದನ್ನ ಕೇಳಿ, ಅಥವಾ ನೋಡಿ ಕ್ಯಾಟರಿಂಗ್ ಉದ್ಯಮ ಶುರುಮಾಡಲಾಗುವುದಿಲ್ಲ. ಆದ್ದರಿಂದ ನೀವೂ ಕೂಡ ಯಾವುದಾದರೂ ನಿಮಗೆ ಪರಿಚಯವಿರುವ ಕ್ಯಾಟರಿಂಗ್ ಉದ್ಯಮಿಯ ಬಳಿ 2ರಿಂದ 3 ತಿಂಗಳು ಕೆಲಸ ಮಾಡಬೇಕು. ನಂತರ ನೀವು ಈ ಉದ್ಯಮ ಶುರು ಮಾಡಿದ್ರೆ, ಕೆಲಸದ ಅನುಭವದಿಂದ ಲಾಭ ಗಳಿಸಬಹುದು.

ಅಡುಗೆ ಮಾಡಲು ಬೇಕಾಗಿರುವುದು ಪಾತ್ರೆ. ನೀವು ಬಂಡವಾಳ ಹೂಡಿ ಪಾತ್ರೆ ತರಿಸಿಕೊಳ್ಳಬಹುದು. ಅಥವಾ ಒಂದು ದಿನ, ಎರಡು ದಿನ ನೂರು ಇನ್ನೂರು ಸಾವಿರ ಮಂದಿಗೆ ತಕ್ಕಂತೆ ಬಾಡಿಗೆ ನೀಡಿ, ಪಾತ್ರೆ ತೆಗೆದುಕೊಳ್ಳಬಹುದು. ಆಯ್ಕೆ ನಿಮಗೆ ಬಿಟ್ಟಿದ್ದು.

ಎಲ್ಲಕ್ಕಿಂತ ಮುಖ್ಯವಾಗಿ ನೀವು ಕೆಲಸ ಕಲಿತ ಮೇಲೆ, ಕೆಲ ಅಡುಗೆ ಕೆಲಸ ಬರುವಂಥವರನ್ನ ಸೇರಿಸಿ ಒಂದು ಟೀಮ್ ಮಾಡಿಕೊಳ್ಳಬೇಕು. ಕ್ಯಾಟರಿಂಗ್ ಟೀಮ್ ಶುರುವಾದಾಗ ಮೊದಲು ಚಿಕ್ಕ ಚಿಕ್ಕ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡಿ. ಉದಾಹರಣೆಗೆ ಬರ್ತ್‌ಡೇ ಪಾರ್ಟಿ, ಹೆಸರಿಡುವ ಕಾರ್ಯಕ್ರಮಗಳಲ್ಲಿ ಸ್ವಲ್ಪ ಸ್ವಲ್ಪ ಜನರಿಗೆ ಅಡುಗೆ ಮಾಡಿ ಬಡಿಸಿ. ಇಂಥ ಅನುಭವದಿಂದ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಅಡುಗೆ ಮಾಡಲು ಅನುಕೂಲವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಗೃಹಪ್ರವೇಶ, ಬರ್ತ್‌ಡೇ ಪಾರ್ಟಿ, ನಾಮಕರಣದ ಕಾರ್ಯಕ್ರವನ್ನೂ ಭರ್ಜರಿಯಾಗಿ ಮಾಡಲಿಚ್ಛಿಸುತ್ತಾರೆ. ಅಂಥವರು ಅಡುಗೆ ಕೆಲಸವನ್ನ ಕ್ಯಾಟರಿಂಗ್‌ನವರಿಗೇ ವಹಿಸಿಬಿಡುತ್ತಾರೆ. ಆದ್ದರಿಂದ ಇಂಥ ಕಾರ್ಯಕ್ರಮಗಳಲ್ಲಿ ಒಳ್ಳೆಯ ಅಡುಗೆ ಮಾಡುವ ಎಕ್ಸ್‌ಪಿರಿಯನ್ಸ್ ಸಿಗುತ್ತದೆ.

ಇನ್ನು ಎರಡನೇಯದಾಗಿ ನಿಮ್ಮ ಕ್ಯಾಟರಿಂಗ್ ಉದ್ಯಮ ಪಸರಿಸಲು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಳ್ಳಿ. ನೀವು ಒಳ್ಳೆಯ ಅಡುಗೆ ಮಾಡಿ ಉಣಬಡಿಸಿದರೆ, ಪುನಃ ಅವರ ಮನೆಯ ಸಮಾರಂಭಗಳಿಗೆ ನಿಮ್ಮನ್ನೇ ಕರೆಯುತ್ತಾರೆ. ಹೀಗೆ ಆ ಕಾರ್ಯಕ್ರಮಗಳಿಗೆ ಬಂದವರಲ್ಲಿ ಕೆಲವರ ಪರಿಚಯ ಮಾಡಿಕೊಂಡು ವಿಸಿಟಿಂಗ್ ಕಾರ್ಡ್ ಕೊಟ್ಟು, ನಿಮ್ಮ ಉದ್ಯಮವನ್ನ ಪ್ರಮೋಟ್ ಮಾಡಿಕೊಳ್ಳಬಹುದು.

ಇಷ್ಟೇ ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಶ್ರೀಮಂತರು ತಮ್ಮ ಮನೆಯ ಮದುವೆ ಮುಂಜಿ ಸಮಾರಂಭಗಳಲ್ಲಿ ಕೆಲಸಕ್ಕಿಂತ ಎಂಜಾಯ್ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ಎಲ್ಲ ಕೆಲಸವನ್ನೂ ಮದುವೆ ಮುಂಜಿ ನೋಡಿಕೊಳ್ಳುವ ತಂಡದವರಿಗೇ ನೀಡಿಬಿಡುತ್ತಾರೆ. ಇವರನ್ನ ವೆಡ್ಡಿಂಗ್ ಪ್ಲಾನರ್ ಅಂತಾರೆ.

ಈ ಟೀಮ್‌ನಲ್ಲಿ ಬಾಣಸಿಗರು, ಮಧುಮಗಳಿಗೆ ಮೇಕಪ್ ಮಾಡುವವರು, ಕಾರ್ಯಕ್ರಮದಲ್ಲಿ ಫರ್ನಿಚರ್‌ಗಳನ್ನ ಸೆಟ್ ಮಾಡುವವರು, ಮೆಹಂದಿ ಹಾಕುವವರು, ಊಟ ತಿಂಡಿ ಬಡಿಸುವವರು ಸೇರಿ ಮದುವೆ ಮನೆಯಲ್ಲಿ ಎಲ್ಲ ಕೆಲಸ ಮಾಡುವವರು ಈ ಟೀಮ್‌ನಲ್ಲಿರುತ್ತಾರೆ. ಇಂಥ ಟೀಮ್‌ಗೆ ನೀವು ಸೇರಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಕ್ಯಾಟರಿಂಗ್‌ನಲ್ಲಿ ಸ್ವಚ್ಛತೆ, ಸ್ವಾದಿಷ್ಟ ಆಹಾರವನ್ನ ಎಲ್ಲರೂ ಬಯಸುತ್ತಾರೆ. ಅದರಲ್ಲೂ ಊಟ ಬಡಿಸುವವರು ನಿಮ್ಮ ತಂಡದವರೇ ಆಗಿದ್ದರೆ, ಅವರ ಬಿಹೇವಿಯರ್ ಕೂಡಾ ನಿಮ್ಮ ಲಾಭ ನಷ್ಟಗಳಿಗೆ ಕಾರಣವಾಗುತ್ತದೆ. ಹಾಗಾಗಿ ಆಹಾರದ ಜೊತೆ ನಿಮ್ಮ ಮಾತು, ನಡುವಳಿಕೆ ಕೂಡ ಮನಸ್ಸಿಗೆ ಮುದ ನೀಡುವಂತಿರಬೇಕು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author