Thursday, October 17, 2024

Latest Posts

ಬಿಜೆಪಿಯವರು ಪ್ರತಿಭಟನೆ ಮಾಡಿದರೆ ಮಾಡಿಕೊಳ್ಳಲಿ ಬಿಡಿ: ಸಚಿವ ಮಧು ಬಂಗಾರಪ್ಪ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಳೇ ಹುಬ್ಬಳ್ಳಿ ಕೋಸ್ ವಾಪಸ್ ಪಡೆದ ಪ್ರಕರಣದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.

ಬಿಜೆಪಿಯವರು ಪ್ರತಿಭಟನೆ ಮಾಡಿದರೆ ಮಾಡಕೊಳ್ಳಿ ಬಿಡ್ರಿ. ಕೋರ್ಟ್ಗೆ ಹೋಗಲಿ, ಕೋರ್ಟ್ ಇರೊದೇ ಅದಕ್ಕೆ. ಬಿಜೆಪಿಯವರು ಮೂಡಾ ಕೇಸಲ್ಲಿ ಪಾದಯಾತ್ರೆ ಮಾಡಿದ್ರು. ಬಿಜೆಪಿಯವರ‌ ಎಷ್ಟು ಜನರ ಮೇಲೆ ಎಫ್ಐಆರ್ ಇದೆ..? ಕೇಂದ್ರದ ಸಚಿವರ ಮೇಲೆಯೇ 39% ಕೇಸ್ ಇವೆ. ಅವರನ್ನ ಒಳಗೆ ಹಾಕಬೇಕಿತ್ತು. ಅವರನ್ನ ರಾಜೀನಾಮೆ ಹೇಳಬೇಕಿತ್ತು. ಯಾರು ಪಾದಯಾತ್ರೆ ಮಾಡಿದ್ದರೋ, ಅವರ ಎಲೆಕ್ಷನ್ ಅಫಿಡೆವಿಟ್ ನೋಡಿ. ನಮ್ಮ ದೇಶದಲ್ಲಿ ಕಾನೂನಿದೆ, ಕಾನೂನಿ ರಕ್ಷಣೆ ಪಡೆಯುವ ಅಧಿಕಾರ ಎಲ್ಲರಿಗೆ‌ ಇದೆ. ಅದನ್ನ ಎಲ್ಲರೂ ಮಾಡ್ತಾರೆ ,‌ ಮಾಡಿಕೊಳ್ಳಲಿ.

ಹುಬ್ಬಳ್ಳಿ ಗಲಭೆ ಇರಲಿ,‌ಮೂಡಾ ಇರಲಿ, ಯಾವುದೇ ಇರಲಿ. ಯಾವುದೇ ಪಕ್ಷ ಅನ್ನೊದು ಬೇರೆ ಕಡೆ ಇರಲಿ. ನಮ್ಮ ದೇಶದಲ್ಲಿ ಕಾನೂನು ಗೆಲ್ಲಬೇಕು, ಅದಕ್ಕೆ ಅವಕಾಶ ಕೊಡಬೇಕು, ಅವಕಾಶ ತಗೊತಾರೆ. ಅದಕ್ಕೆ ಎಲ್ಲರಿಗೂ ಅವಕಾಶ ಇದೆ.. ನಮ್ಮ ಸರ್ಕಾರ ಹುಬ್ಬಳ್ಳಿ ಕೆಸ್ ವಾಪಸ್ ಪಡೆಯುತಿದೆ ಅದನ್ನ ತಪ್ಪು ಎಂದು ಹೇಳೊಕೆ ಆಗುತ್ತಾ.? ಸದ್ಯ ಕೇಸ್ ನಡೆದಿದೆ. ಎಷ್ಟೊ ಕೇಸ್ ಗಳಲ್ಲಿ ಅಮಾಯಕರನ್ನ ಒಳಗೆ ಹಾಕಿರತಾರೆ. ಮನೆ ಹುಡುಕಿಕೊಂಡು ಬಂದು ಕೇಸ್ ಹಾಕಿರೊದು ಉದಾಹರಣೆ‌ ಇವೆ. ಅವರ ಅಡ್ರೆಸ್ ಕೂಡಾ ಅಲ್ಲಿ ಇರಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಖರ್ಗೆ ಕುಟುಂಬ ಸೈಟ್ ವಾಪಸ್ ಕೊಟ್ಟ ಪ್ರಕರಣದ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ,  ಅದು ಅವರ ದೊಡ್ಡ ಗುಣ. ಖುಷಿ ಆಗಬೇಕು ಅದಕ್ಕೆ ,ರಾಜೀನಾಮೆ ಯಾಕೆ ಕೊಡಬೇಕು? ಪ್ರೇರಣಾ ಟ್ರಸ್ಟಗೆ ದುಡ್ಡು ಬಂದ ಮೇಲೆ ಕೂಡಾ ಯಡಿಯೂರಪ್ಪ ಅವರಿಗೆ ಸಿಎಂ ಮಾಡಿದ್ರು. ಯಾಕೆ ಮಾಡಿದ್ದು ಅಂದರೆ, ಅವರ ಬಳಿ‌ ವಾಶಿಂಗ್ ಮಷಿನ್ ಇದೆ. ಅದರಲ್ಲಿ ಹಾಕಿದ ತಕ್ಷಣ ಎಲ್ಲರೂ ಬೆಳ್ಳಗೆ ಆಗ್ತಾರೆ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ.

ಸಿಎಂ ಜೊತೆ ಹೈಕಮಾಂಡ್ ಇದೆ, ವೇಣುಗೋಪಾಲ ಕೂಡಾ ಇದನ್ನ ಹೇಳಿದಾರೆ. ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕಾಗಿ‌ ಬೇಡಿಕೆ ಹಿನ್ನೆಲೆ. ಅದು ಹೆಚ್ಚು ಮಾಡಬೇಕಿದೆ. ಸಿಎಂ ಜೊತೆ ಮಾತಾಡಿದ್ದೆನೆ. ಉಪನ್ಯಾಸಕರ ವೇತನ ಹೆಚ್ಚಳ ಮಾಡಿದ್ದಾರೆ. ನಮ್ಮವರು ಮಾಡ್ತಾರೆ. ಯಾಕಂದ್ರೆ ಶ್ರಮ‌ ಪಟ್ಟು ನಮ್ಮವರು ಕೆಲಸ ಮಾಡ್ತಾರೆ. ಬಿಸಿಯೂಟ ಸಹಾಯಕರದು ಮಾಡಬೇಕು ಎಂದು ಸಿಎಂ ಬಳಿ ಹೇಳಿದ್ದೆನೆ. ಉಪಚುನಾವಣೆ ಬರುತ್ತಿರುವ ಹಿನ್ನೆಲೆ. ಹೈಕಮಾಂಡ್ ಒಳ್ಳೆ‌ ನಿರ್ಮಾನ ತಗೊತಾರೆ, ನಾವು ಹೋಗಿ ಚುನಾವಣೆ ಗೆಲ್ಲಿಸಿಕೊಂಡು ಬರಬೇಕು ಅಷ್ಟೇ. ನಾವು ಪ್ರಯತ್ನ ಪಟ್ಟು ಗೆಲ್ಲಸುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

- Advertisement -

Latest Posts

Don't Miss