ಬಿಜೆಪಿಯಲ್ಲಿ ಲಂಚ, ಮಂಚದ ಪುರಾಣವಿಲ್ಲದಿದ್ದರೇ ಒಬ್ಬ ಕೇಂದ್ರ ಸಚಿವ, ರಾಜ್ಯ ಸಚಿವರು ರಾಜೀನಾಮೆ ನೀಡಿದ್ದೇಕೆ? – ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಇಂದು ಶಾಸಕ ಪ್ರಿಯಾಂಕ್ ಖರ್ಗೆಯವರು ಯುವತಿಯರು ಸರ್ಕಾರಿ ನೌಕರಿ ಪಡೆಯಬೇಕು ಅಂದ್ರೇ ಮಂಚ ಏರಬೇಕು. ಯುವಕರು ಲಂಚ ಕೊಡಬೇಕು ಎಂಬುದಾಗಿ ಹೇಳಿದ್ದರು. ಈಗ ಮುಂದುವರೆದು ಬಿಜೆಪಿಯಲ್ಲಿ ಲಂಚ, ಮಂಚದ ಪುರಾಣವಿರದಿದ್ದರೆ ಒಬ್ಬ ಕೇಂದ್ರ ಸಚಿವ, ಇನ್ನೊಬ್ಬ ರಾಜ್ಯ ಸಚಿವರು ರಾಜೀನಾಮೆ ನೀಡಿದ್ದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ನಾನು ‘ಲಂಚ ಮಂಚದ ಸರ್ಕಾರ’ ಎಂದಿದ್ದಕ್ಕೆ ಬಿಜೆಪಿಯವರಿಗೆ ಉರಿ ಬಿದ್ದಿದೆ! ಸತ್ಯ ಆ ಮಟ್ಟಿಗೆ ಕಹಿಯಾಗಿರುತ್ತದೆ! ಬಿಜೆಪಿಯಲ್ಲಿ ಲಂಚ, ಮಂಚದ ಪುರಾಣವಿರದಿದ್ದರೆ ಒಬ್ಬ ಕೇಂದ್ರ ಸಚಿವರು, ಇನ್ನೊಬ್ಬ ರಾಜ್ಯ ಸಚಿವರು ರಾಜೀನಾಮೆ ನೀಡಿದ್ದೇಕೆ? ಬಿಜೆಪಿ ಸಂಸದರು, ಮಂತ್ರಿಗಳು,ಶಾಸಕರು ಕೋರ್ಟಿನಲ್ಲಿ ಸಾಲು ಸಾಲು ತಡೆಯಾಜ್ಞೆ ತಂದಿದ್ದೇಕೆ? ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವುದು ಲಂಚ ಮಂಚದ ಬಿಜೆಪಿ ಸರ್ಕಾರ
ದುಡ್ಡು ಕೊಡದಿದ್ದರೆ ಈ 40% ಸರ್ಕಾರದಲ್ಲಿ ಯಾವುದೇ ಕೆಲಸ ಆಗುವುದಿಲ್ಲ. ನೌಕರಿ ಬೇಕು ಎಂದರೆ ಯುವತಿಯರು ಮಂಚ ಹತ್ತಬೇಕು, ಯುವಕರು ಲಂಚ ಕೊಡಬೇಕು. ಇದು ಲಂಚ-ಮಂಚದ ಸರ್ಕಾರವಾಗಿದೆ. ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ್ದು ಶೂನ್ಯ ಸಾಧನೆ ಎಂಬುದಾಗಿ ಬೆಳಿಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.
  • ಪ್ರತಿಯೊಂದು ಪರೀಕ್ಷೆಗಳಲ್ಲಿ ಹೀಗೆ ಅಕ್ರಮ ನಡೆದರೆ ಬಡವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು.?
  • 40% ವ್ಯವಹಾರದಲ್ಲಿ ವಿಧಾನಸೌಧವನ್ನೇ ವ್ಯಾಪಾರ ಸೌಧ ಮಾಡಿಕೊಂಡಿದ್ದಾರೆ.
  • ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ.
  • ಸಿಎಂ ತಾವೊಬ್ಬ ಕಾಮನ್ ಮ್ಯಾನ್ ಎಂದು ಹೇಳುತ್ತಾರೆ, ಇವರ ಅಸಮರ್ಥ ಆಡಳಿತದಿಂದಾಗಿ ಕಾಮನ್ ಮ್ಯಾನ್ ಸಂಕಟಪಡುತ್ತಿದ್ದಾರೆ.
  • ಇದೊಂದು ಅಸಮರ್ಥ ಸರ್ಕಾರವಿದ್ದು ಏನೇ ಅಕ್ರಮ ಮಾಡಿದರೂ ನಡೆಯುತ್ತಿದೆ ಎನ್ನುವುದು ಅಕ್ರಮ ಮಾಡುವವರಿಗೆ ಹಾಗೂ ಮಧ್ಯವರ್ತಿಗಳಿಗೆ ಗೊತ್ತಾಗಿದೆ ಎಂದು ಹೇಳಿದ್ದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ನಿರುದ್ಯೋಗ ಏರಿಕೆಯಾಗುತ್ತಿದೆ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಣೆ, ಪ್ರಧಾನಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ರಾಜ್ಯದ 40% ಸರ್ಕಾರವೂ ಕೂಡಾ ರಾಜ್ಯದಲ್ಲಿ ಹುದ್ದೆ ಸೃಷ್ಠಿಸಿ ನಿರುದ್ಯೋಗಿ ವಿದ್ಯಾವಂತರ ಬಾಳಿಗೆ ಬೆಳಕಾಗಬೇಕಾಗಿತ್ತು. ಆದರೆ ವಿಪರ್ಯಾಸ ಎಂದರೆ ಕಳೆದ 50 ವರ್ಷದಲ್ಲೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕೃತ ಮಾಹಿತಿಯಾಗಿದೆ.
ಇಂತಹ ಭ್ರಷ್ಟಸರ್ಕಾರಕ್ಕೆ ,ಲಂಚ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದು ಒತ್ತಾಯಿಸಿದ್ದರು.

About The Author