Hubli News: ಒಬ್ಬ ಅಧಿಕಾರಿ ಪತ್ರ ಬರೆದಿರೋದು ನಾಳೆ ಕಾಂಗ್ರೆಸ್ ಗೂ ಮುಳುವಾಗತ್ತೆ. ಇದು ಅಧಿಕಾರಿಯ ಅಹಂಕಾರಿಯ ಪರಮಾವಧಿ ಅಧಿಕಾರಿಗೆ ಜ್ಞಾನ ಇದ್ರೆ ಕ್ಷಮಾಪಣೆ ಕೇಳಬೇಕು. ನಾವು ಕೇಡರ್ ಕಂಟ್ರೋಲ್ ನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ.ಇದನ್ನು ಯಾವ ಕಾಲಕ್ಕೂ ಒಪ್ಪಲು ಸಾಧ್ಯ ಇಲ್ಲ ಈ ಸರ್ಕಾರವೇ ಖಾಯಂ ಅಧಿಕಾರದಲ್ಲಿ ಇರತ್ತೆ ಅನ್ನೋ ಭ್ರಮೆಯಲ್ಲಿದ್ರೆ ಬೆಲೆ ತೆರಬೇಕಾಗತ್ತೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ..
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೌರವ ಯುತ ಪದ ಬಳಕೆ ಮಾಡೋದು ಅಧಿಕಾರಿ ಕರ್ತವ್ಯ.ನಾನು ನೋಡಿದ ಹಾಗೆ ಕುಮಾರಸ್ವಾಮಿ ಏಕವಚನದಲ್ಲಿ ಮಾತಾಡಿಲ್ಲ. ಆದ್ರೆ ಅಧಿಕಾರಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಅತ್ಯಂತ ಕೆಟ್ಟ ಭಾಷೆ ಬಳಕೆ ಮಾಡಿದಿರೋದು ಆಡಳಿತಕ್ಕೆ ಕೈಗನ್ನಡಿ ರಾಜ್ಯದಲ್ಲಿ ಆಡಳಿತವೇ ಇಲ್ಲ. ಸರ್ಕಾರ ಯಾವದಕ್ಕೂ ಸಹಕರಿಸೋದಿಲ್ಲ ಎಂದರು..
ಇನ್ನೂ ಹಿಂದೆ ಸಿದ್ದರಾಮಯ್ಯ ರಾಜ್ಯಪಾಲರ ಬಗ್ಗೆ ಮಾತಾಡಿರೋದು ವೈರಲ್ ಆಗಿದೆ ನಿಮಗೆ ಮಾನ ಮರ್ಯಾದೆ ಇಲ್ವಾ. ನ್ಯಾಯಾಲಯದ ಆದೇಶ ಕೊಟ್ಟ ಮೇಲೆ ನಾವು ಯಾವತ್ತೂ ಕಾಂಗ್ರೆಸ್ ತರಹ ವರ್ತನೆ ಮಾಡಿಲ್ಲ. ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ದಸರಾ ಬಿಡಿ, ಒಂದು ಸಿಂಪಲ್ ಸಹಿ ಕೂಡಾ ಸಿಎಂ ಮಾಡಬಾರದು. ಸಿದ್ದರಾಮಯ್ಯ ದಪ್ಪ ಚರ್ಮದವರು ಹೀಗಾಗಿ ಅವರಿಗೆ ತಿಳಿದಂತೆ ಮಾಡತ್ತಾರೆ ದಸರಾ ಪವಿತ್ರ ಆಚರಣೆ ದಸರಾ ಉದ್ಘಾಟನೆ ಅಲ್ಲ, ಸಿದ್ದರಾಮಯ್ಯ ಏನೂ ಮಾಡಬಾರದು.
ಸಿದ್ದರಾಮಯ್ಯ ಸೋನಿಯಾ ಗಾಂಧಿ, ಹಾಗೂ ರಾಹುಲ್ ಗಾಂಧಿ ಅವರಿಗೂ ನೀವ ಬೇಲ್ ಮೇಲೆ ಇದೀರಿ ಎಂದು ಹೇಳಿದ್ದಾರೆ.ಸ್ನೇಹಮಯಿ ಕೃಷ್ಣ ವಿರುದ್ದವೂ ದೂರು ನೀಡೋ ವಿಚಾರ. ಇದೆಲ್ಲ ಬ್ಲಾಕ್ ಮೇಲ್ ತಂತ್ರ ಎಂದ ಜೋಶಿ, ದಾವಣಗೆರೆಯಲ್ಲಿ ವಿಜಯೇಂದ್ರ ಹಠಾವೋ ಸಭೆ ವಿಚಾರ ಹರಿಯಾಣ ಚುನಾವಣೆ ಮುಗಿದ ಬಳಿಕ ಎಲ್ಲವೂ ಸರಿ ಆಗತ್ತೆ ಎಂದರು.




