Thursday, August 21, 2025

Latest Posts

‘ಮದುವೆ ಮಾಡಿದರೆ ₹5 ಲಕ್ಷ’ ಯತ್ನಾಳ್ ವಿರುದ್ಧ ಎಫ್‌ಐಆರ್!

- Advertisement -

ಮುಸ್ಲಿಂ ಯುವತಿಯರ ಕುರಿತಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿ ಅಬ್ದುಲ್ ಕಲಾಂ ಎಂಬವರು ನೀಡಿದ ದೂರಿನ ಮೇರೆಗೆ ಬುಧವಾರ ಪೊಲೀಸ್‌ಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆಗಸ್ಟ್ 10ರಂದು ಕೊಪ್ಪಳದಲ್ಲಿ ಕೊಲೆಯಾಗಿದ್ದ ಗವಿಸಿದ್ದಪ್ಪ ಎಂಬ ಯುವಕನ ಕುಟುಂಬವನ್ನು ಭೇಟಿ ಮಾಡಿದ ಸಂದರ್ಭ, ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ₹5 ಲಕ್ಷ ರೂ. ನೀಡಲಾಗುವುದು ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಮುಸ್ಲಿಂ ಜನಾಂಗದ ಕೊಲೆಗಾರರಿಗೆ ಉತ್ತರ ನೀಡಬೇಕಿದೆ, ಈಗ ರಾಜ್ಯದಲ್ಲಿ ಸಾಬರ ಸರಕಾರವಿದೆ ಎಂದೆಲ್ಲಾ ಮಾತನಾಡಿದ್ದರು.

ಈ ಹೇಳಿಕೆ ಹಿಂದೂ–ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಹರಡುವ ಪ್ರಯತ್ನವಾಗಿದ್ದು, ಮಹಿಳೆಯರನ್ನು ಅವಮಾನಿಸುವ ಸಂಕೇತವಾಗಿ ಕಾಣಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸ್ ತನಿಖೆ ಪ್ರಾರಂಭವಾಗಿದೆ. ಆ. 3ರಂದು ಕೊಪ್ಪಳದ ಬಹದ್ದೂರಬಂಡಿ ರಸ್ತೆಯಲ್ಲಿ ಗವಿಸಿದ್ದಪ್ಪ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಈ ಘಟನೆ ಪ್ರೇಮ ಸಂಬಂಧಿತ ದ್ವೇಷದ ಹಿನ್ನೆಲೆಯಲ್ಲಿಯೇ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಈ ಪ್ರಕರಣವನ್ನೂ ಯತ್ನಾಳ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.

ಇದರ ಜೊತೆಗೆ, ಯತ್ನಾಳ್ ವಿಧಾನಸಭೆಯಲ್ಲಿ ತಮ್ಮ ಆಸನದ ವ್ಯವಸ್ಥೆಯ ಮೇಲೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 224 ಶಾಸಕರ ಪೈಕಿ ನಮಗೆ 225 ಮತ್ತು 226ನೇ ಆಸನಗಳ ಹಂಚಿಕೆಯಾಗಿದ್ದು, ಈ ಸಂಖ್ಯೆಗಳ ಆಸನಗಳೇ ಇಲ್ಲ. ಬೋಗಸ್ ವ್ಯವಸ್ಥೆ ಮಾಡಲಾಗಿದೆ, ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ, ಜನಾರ್ಧನ ರೆಡ್ಡಿ ಅವರು ಬಿಜೆಪಿಯೊಂದಿಗೆ ಇದ್ದರೂ ಮೊದಲ ಸಾಲಿನಲ್ಲಿ ಸ್ಥಾನ ನೀಡಲಾಗಿದೆ, ಆದರೆ ನಮಗೆ ಹಿಂಬದಿಯ ಆಸನ? ಇದು ತಾರತಮ್ಯದ ದೋಷದ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss