ಮದುವೆ ಅನ್ನೋದು ಪ್ರತಿಯೊಬ್ಬರ ಜೀವನ ಕನಸು. ನಾನು ಆಗೇ ಮದುವೆ ಆಗಬೇಕು.. ನನ್ನ ಹುಡುಗ ರೀತಿ ಇರಬೇಕು.. ನನ್ನ ಪತ್ನಿ ಹೀಗೆಯೇ ಇರಬೇಕು ಅಂತಾ ಸಾಕಷ್ಟು ಜನರು ಕನಸು ಕಾಣುತ್ತಾರೆ. ಈ ಇಲ್ಲೊಂದು ರಾಷ್ಟ್ರ ತನ್ನ ದೇಶದ ಯುವಕರಿಗೆ ಮುದುವೆ ಆಗುವಂತೆ ಕರೆಕೊಟ್ಟಿದೆ. ಪ್ಲೀಸ್ ಮದುವೆ ಆಗ್ರೋ ಅಂತಿದೆ ಇಲ್ಲಿನ ಸರ್ಕಾರ. ಮದುವೆಯಾಗಿ ಮಕ್ಳು ಮಾಡ್ಕೋಂಡ್ರೆ ಸಿಗುತ್ತಂತೆ ಬರೋಬ್ಬರಿ 31 ಲಕ್ಷ ರೂಪಾಯಿ. ಸರ್ಕಾರವೇ ಈ ರೀತಿ ಪ್ರಮೋಷನ್ ಕೊಡ್ತೀರೋದಾದ್ರು ಏಕೆ, ಎಲ್ಲಿ? ಅಂತಾ ತಿಳ್ಕೋಬೇಕಾ ಹಾಗಿದ್ರೆ ಈ ವೀಡಿಯೋನ ಮಿಸ್ ಮಾಡ್ದೆ ನೋಡಿ.
ಕೆಲ ತಂದೆ ತಾಯಿ ತಮ್ಮ ಮಕ್ಕಳಿಗೆ ಹಠಕ್ಕೆ ಬಿದ್ದು ಮದುವೆ ಮಾಡಿಸಿದ್ರೆ, ಇನ್ನೂ ಕೆಲ ಪೋಷಕರು ಮಕ್ಕಳ ಆಸೆಯಂತೆ ಸುಮ್ಮನಿರುತ್ತಾರೆ. ಇನ್ನು ನಮ್ಮ ಭಾರತದಲ್ಲಂತೂ ಮದುವೆ ಅಂದ್ರೆನೇ ಆಡಂಬರ. ಹೀಗಾಗಿನೇ ಹಲವರು ಒಂದು ಹೆಜ್ಜೆ ಹಿಂದಿಡುತ್ತಾರೆ. ಆದರೆ ಇಲ್ಲೂಂದು ದೇಶ ಆಶ್ಚರ್ಯಾ ಎಂಬಂತೆ ಮದುವೆ ಮಾಡಿಕೊಳ್ಳಿ ಎಂದಿದೆ. ಅಷ್ಟೇ ಅಲ್ದೇ ಮದ್ವೆಯಾಗಿ ಮಕ್ಳು ಮಾಡಿಕೊಳ್ಳಿ 31 ಲಕ್ಷ ನೀಡ್ತೀವಿ ಅಂತಾ ಹೇಳಿದ್ದಾರೆ.
ನಿಜವಾಗ್ಲೂ ಇದು ಅಚ್ಚರಿಯ ಸಂಗತಿಯಾದ್ರೂ ಸತ್ಯ.. ಯಾಕಂದ್ರೆ ಇಲ್ಲಿ ಸರ್ಕಾರವೇ ತನ್ನ ಪ್ರಜೆಗಳಿಗೆ ಇಂತಹ ಆಫರ್ ಒಂದನ್ನ ನೀಡಿದೆ . ಇಂತಹ ವಿನೂತನ ಆಫರ್ ನೀಡಿರುವ ದೇಶ ದಕ್ಷಿಣ ಕೊರಿಯಾ.. ದಕ್ಷಿಣ ಕೊರಿಯಾದ ಈ ಯೋಜನೆಗೆ ಜಗತ್ತೆ ನಿಬ್ಬೆರಗಾಗಿದೆ. ಈ ರೀತಿಯ ಆಫರ್ ನೀಡಲು ಮುಖ್ಯ ಕಾರಣ ಇಲ್ಲಿ ಜನರು ಮದ್ವೆಯಾಗಲೂ ಆಸಕ್ತಿಯೇ ತೋರಿಸುತ್ತಿಲ್ಲವಂತೆ. ಹೀಗಾಗಿ ಅಲ್ಲಿನ ಸರ್ಕಾರವೇ ಮದುವೆ ಆಗಲು ಪ್ರಚೋದನೆ ನೀಡುತ್ತಿದೆ. ಅಷ್ಟೇ ಅಲ್ಲ 31 ಲಕ್ಷ ನೀಡುವುದಾಗಿ ಭರ್ಜರಿ ಆಫರ್ ಕೂಡ ಘೋಷಣೆ ಮಾಡಿದೆ.
ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ದಕ್ಷಿಣ ಕೊರಿಯಾದ ಯುವಜನರು ಮದುವೆ ಹಾಗೂ ಮಕ್ಕಳ ಬಗ್ಗೆ ಆಸಕ್ತಿ ತೋರಿಸ್ತಿಲ್ವಂತೆ.. ಹೀಗಾಗಿ ಅಲ್ಲಿನ ಜನನ ಪ್ರಮಾಣ ತುಂಬಾನೆ ಕಡಿಮೆಯಾಗಿದ್ಯಾಂತೆ. ಸದ್ಯ 2023ರ ಜನಗಣತಿ ಪ್ರಕಾರ ಅಲ್ಲಿನ ಒಟ್ಟಾರೆ ಜನಸಂಖ್ಯೆ 49.84 ಮಿಲಿಯನ್. ಇದರಿಂದಾಗಿ ದಿಕ್ಕೆಟ್ಟ ಅಲ್ಲಿನ ಸರ್ಕಾರ ಜನನ ಪ್ರಮಾಣವನ್ನ ಸರಿದೂಗಿಸಲು ಹರಸಾಹಸ ಪಡ್ತಾಯಿದೆ.ಭವಿಷ್ಯದಲ್ಲಿ ಎದುರಾಗುವ ಬಹು ದೊಡ್ಡ ಅಪಾಯವನ್ನು ತಪ್ಪಿಸಲು ಸರ್ಕಾರ, ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ ಜಪಾನ್ ದೇಶದಲ್ಲಿಯೂ ಮದುವೆಯಾಗಲು ಇದೇ ತರಹದ ಐಡಿಯಾವನ್ನ ಅಲ್ಲಿನ ಸರ್ಕಾರ ಮಾಡಿತ್ತು .