ಈ 10 ಗುಣಗಳು ನಿಮ್ಮಲ್ಲಿದ್ದಲ್ಲಿ, ಜನ ನಿಮಗೆಂದೂ ಗೌರವ ನೀಡುವುದಿಲ್ಲ..- ಭಾಗ 1

ಪ್ರತಿಯೊಬ್ಬರಿಗೂ ತಮ್ಮದೇ ಆದ ಆತ್ಮಗೌರವವಿರುತ್ತದೆ. ಅದು ಬೇರೆಯವರಿಂದ ನಮಗೆ ಸಿಗದಿದ್ದಾಗ, ಏನೋ ಒಂದು ರೀತಿಯ ಬೇಸರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಮೊದ ಮೊದಲು ಎಲ್ಲರೂ ಒಳ್ಳೆಯ ರೀತಿಯಲ್ಲೇ ಇರುತ್ತಾರೆ. ನಂತರ ಬರು ಬರುತ್ತ ಜಗಳವಾಡುತ್ತಾರೆ. ಮುನಿಸಿಕೊಳ್ಳುತ್ತಾರೆ. ಮೊದಲಿದ್ದ ಪ್ರೀತಿ, ಕಾಳಜಿ, ಗೌರವ ಈಗಿರುವುದಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೆಯ ಗುಣ. ಕಾಳಜಿಯ, ಪ್ರೀತಿ ತೋರಿಸುವ ಗುಣವನ್ನು ಬದಲಿಸುವುದು. ಕೆಲವರು ಹೇಗಿರುತ್ತಾರೆಂದರೆ, ನೀವು ಒಬ್ಬರೇ ಇದ್ದಾಗ, ಅಥವಾ ನೀವು ಅವರ ಜೊತೆ ಇದ್ದಾಗ, ನಿಮ್ಮ ಬಗ್ಗೆ ತುಂಬಾ ಕಾಳಜಿ, ಪ್ರೀತಿ ತೋರುತ್ತಾರೆ. ನಿಮ್ಮ ಬಳಿ ಮಾಡಿಕೊಳ್ಳಬೇಕಾದ ಕೆಲಸಗಳನ್ನು ಮಾಡಿಕೊಳ್ತಾರೆ. ಅದೇ ಮನೆಗೆ ಯಾರಾದರೂ ಬಂದಾಗ, ಅಥವಾ ನಿಮ್ಮಿಬ್ಬರನ್ನು ಬಿಟ್ಟು ಮೂರನೆಯವರೂ ನಿಮ್ಮ ಜೊತೆ ಇದ್ದಾಗ, ನಿಮ್ಮ ಬಗ್ಗೆ ತಮಾಷೆ ಮಾಡುವುದು, ಸುಳ್ಳು ಹೇಳುವುದು, ನಿಮ್ಮನ್ನು ಅವಮಾನಿಸುತ್ತಾರೆ. ಹೀಗೆ ಮಾಡುವುದರಿಂದ ಅವರ ಮೇಲಿದ್ದ ಗೌರವ ಕಡಿಮೆಯಾಗುತ್ತದೆ. ಯಾಕಂದ್ರೆ ನೀವು ಸಮಯಕ್ಕೆ ತಕ್ಕಂತೆ, ಮುಖವಾಡ ಬದಲಿಸುವವರು ಅನ್ನೋದು ಅವರಿಗೆ ಗೊತ್ತಾಗಿರುತ್ತೆ.

ಎರಡನೆಯ ಗುಣ. ಸುಳ್ಳು ಹೇಳುವುದು. ಹಿಂದಿನಿಂದ ಮೂದಲಿಸಿ ಮಾತನಾಡುವುದು. ಮತ್ತು ಮಾತು ಬದಲಿಸುವ ಗುಣ. ಯಾರಿಗೂ ಕೂಡ ಸುಳ್ಳು ಹೇಳುವವರನ್ನು ಕಂಡ್ರೆ ಇಷ್ಟವಾಗುವುದಿಲ್ಲ. ಹಾಗಾಗಿ ನೀವು ನಿಜವಾದ ಮಾತು ಆಡಿದ್ರು ಕೂಡ, ಅದನ್ನ ಎದುರಿಗಿರುವವರು ಸುಳ್ಳು ಅಂತಾನೇ ಭಾವಿಸುತ್ತಾರೆ. ಹಾಗಾಗಿ ಸುಳ್ಳು ಹೇಳುವುದು ಕೆಟ್ಟ ಗುಣ. ಇನ್ನು ಹಿಂದಿನಿಂದ ಬೈಯ್ಯುವುದು, ಎದುರಿಗೆ ಬಂದಾಗ ನಗುತ್ತ ಮಾತನಾಡಿಸುವ ಗುಣ. ಇದರಷ್ಟು ಹೊಲಸ್ಸು ಗುಣ ಮತ್ತೊಂದಿಲ್ಲ.

ಯಾಕಂದ್ರೆ ನಿಮ್ಮ ಈ ಗುಣವನ್ನು ಮೂರನೆಯವರು ನೋಡುತ್ತಿರುತ್ತಾರೆ. ಹಾಗಾಗಿ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಗೌರವ ಮೂಡಲು ಸಾಧ್ಯವೇ ಇಲ್ಲ. ಇನ್ನು ಮಾತು ಬದಲಿಸುವ ಗುಣ. ಮುಂದೆ ಒಂದು ಮಾತನಾಡುವುದು, ಹಿಂದೆ ಇನ್ನೊಂದು ಮಾತನಾಡುವುದು. ಅಥವಾ ಇಲಿ ಬಂದಿರುವ ವಿಷಯವನ್ನು ಹುಲಿ ಬಂದಿತ್ತು ಅನ್ನೋ ರೀತಿ, ಬಣ್ಣ ಹಚ್ಚಿ ಹೇಳುವುದೆಲ್ಲ, ಉತ್ತಮ ಗುಣವಲ್ಲ. ಇಂಥ ಗುಣ ಉಳ್ಳವರನ್ನು ಯಾರೂ ಗೌರವಿಸುವುದಿಲ್ಲ.

ಮೂರನೆಯ ಗುಣ. ಬೆನ್ನು ಬಿದ್ದು ಸಾರಿ ಕೇಳುವುದು. ತಪ್ಪು ಮಾಡಿದಾಗ, ಕ್ಷಮೆ ಕೇಳುವುದು ಉತ್ತಮ ಗುಣ. ಇನ್ನು ತಪ್ಪು ಮಾಡದಿದ್ರೂ ಸಂಬಂಧ ಉಳಿಸಿಕೊಳ್ಳಲು ಕ್ಷಮೆ ಕೇಳುವುದು ಇನ್ನೂ ಉತ್ತಮ ಗುಣ. ಹಾಗಂತ, ಸಾರಿ ಸಾರಿ ಎಂದು ಅವರ ಬೆನ್ನು ಬಿದ್ದು ಕ್ಷಮೆ ಕೇಳುವುದು ಉತ್ತಮವಲ್ಲ. ಇದರಿಂದ ಎದುರಿಗಿರುವವರಿಗೆ ನಿಮ್ಮ ಮೇಲೆ ಗೌರವ ಕಡಿಮೆಯಾಗುತ್ತದೆ. ಕೆಲವರು ನಿಮ್ಮ ಈ ಗುಣವನ್ನು ತಮಾಷೆ ಮಾಡಿ, ಮಜಾ ತೆಗೆದುಕೊಳ್ತಾರೆ.

ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

About The Author