Friday, September 20, 2024

Latest Posts

ಅಬ್ಬಬ್ಬಾ ಈ ಮರಕುಟಿಗ ಮಾಡಿದ್ದೇನು ಗೊತ್ತಾದ್ರೆ ಬೆಚ್ಚಿಬೀಳ್ತೀರಿ….!

- Advertisement -

ಬೆಂಗಳೂರು(ಫೆ.11): ಮರಕುಟಿಗ..ಈ ಹೆಸ್ರು ಕೇಳಿದ್ದೀರಾ? ಎಸ್ ಖಂಡತಾ ಕೇಳಿರ್ತೀರ..ಈ ಪಕ್ಷಿ ನೋಡೆ ಅಪರೂಪವಾದ್ರು, ತನ್ನ ಹೆಸರಿಗೆ ತಕ್ಕ ಹಾಗೆ ಪುಟಾಣಿ ದೇಹ ಹೊಂದಿರುವ ಪಕ್ಷಿ..ಹೇಗೆ ಬೇಕೋ ಹಾಗೆ ತನ್ನ ಪುಟ್ಟ ದೇಹವನ್ನು ಪಳಗಿಸುವ ಅಪರೂಪದ ಪಕ್ಷಿ..ಇತ್ತೀಚೆಗೆ ಅಲ್ಲಿಲ್ಲಿ ಕಾಣಿಸಿಕೊಳ್ಳುವ ಈ ಪಕ್ಷಿ. ಕ್ಯಾಲಿಫೋರ್ನಿಯಾದಲ್ಲಿ ಈ ಪಕ್ಷಿ ಮಾಡಿದ ಕೆಲಸ ಏನ್ ಗೊತ್ತಾ..? ಈ ಕಥೆ ಓದಿ

ಮರಕುಟಿಗವು ಜಗತ್ತಿನಾದ್ಯಂತ ಸುಮಾರು 200 ತಳಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ, ಕ್ಯಾಲಿಫೋರ್ನಿಯಾದ ಮನೆಯೊಂದರಲ್ಲಿ ಈ ಕುತೂಹಲಕಾರಿ ಘಟನೆ ನಡೆದಿದೆ. ಈ ಮರಕುಟಿಗದ ಶ್ರಮಕ್ಕೆ ನೀವು 700 ಪೌಂಡ್​ ಹಣ ಪಾವತಿಸಬೇಕು ಎಂದು ನೆಟ್ಟಿಗರು ಹೇಳ್ತಾ ಇದ್ದಾರೆ. ಇದು ಪಿಸಿಡೆ ಎಂಬ ಪಕ್ಷಿಕುಟುಂಬಕ್ಕೆ ಸೇರಿದ್ದು. ಇದೊಂದು ಸುಂದರವಾದ ಪಕ್ಷಿ. ಮರದ ಕಾಂಡ, ರೆಂಬೆಗಳನ್ನು ತನ್ನ ಕೊಕ್ಕಿನಿಂದ ಕುಟ್ಟಿ ಅದರೊಳಗಿರು ಕ್ರಿಮಿಗಳನ್ನು ತಿನ್ನುತ್ತದೆ. ಇದರ ಗಟ್ಟಿಮುಟ್ಟಾದ ಕೊಕ್ಕು, ಹರಿತ ಉಗುರುಗಳುಳ್ಳ ಕಾಲುಗಳಿಂದ ನಿಮಿಷಕ್ಕೆ 120 ಕ್ಕಿಂತಲೂ ಹೆಚ್ಚು ಸಲ ಕುಕ್ಕುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

ಇದೀಗ ಈ ಪಕ್ಷಿ ಭಾರೀ ಸುದ್ದಿಯಲ್ಲಿದೆ. ಕ್ಯಾಲಿಫೋರ್ನಿಯಾದ ಮನೆಯೊಂದರೊಳಗೆ ಮರಕುಟಿಗವು ಸುಮಾರು 317 ಕಿ.ಗ್ರಾಂ ನಷ್ಟು ಓಕ್​ಹಣ್ಣುಗಳನ್ನು ಸಂಗ್ರಹಿಸಿಟ್ಟಿದೆ. ಕ್ಯಾಲಿಫೋರ್ನಿಯಾದ ಸಾಂಟಾ ರೋಸಾದಲ್ಲಿರುವ ವ್ಯಕ್ತಿಯೊಬ್ಬ ತನ್ನ ಮನೆಗೆ ಕೀಟನಾಶಕ ಸಿಂಪರಣೆ ಮಾಡಲು ಏಜೆನ್ಸಿಗೆ ಕರೆದಿದ್ದಾನೆ. ಆಗ ಗೋಡೆ, ಕಿಂಡಿಗಳನ್ನು ಸ್ವಚ್ಛ ಮಾಡುವಾಗ ಓಕ್​ಹಣ್ಣುಗಳು ಕೈಗೆ ಸಿಕ್ಕಿವೆ. ಕಿಂಡಿಯೊಳಗೆ ಕೈಹಾಕಿ ಗಂಟೆಗಟ್ಟಲೆ ಇವುಗಳನ್ನು ಹೊರತೆಗೆದಾಗ ಸುಮಾರು 317 ಕಿ.ಗ್ರಾ. ರಾಶಿ ಸೇರಿದೆ.

ಪಾಪ ಆ ಮರಕುಟಿಗವು ಅದೆಷ್ಟು ಶ್ರಮವಹಿಸಿದೆ. ಅವರ ಶ್ರಮಕ್ಕೆ ನೀವು 700 ಪೌಂಡ್​ ಹಣವನ್ನು ಕೊಡಬೇಕು ಎಂದಿದ್ದಾರೆ ನೆಟ್ಟಿಗರು. ಬಡಮರಕುಟಿಗ, ಅದಕ್ಕೆ ಆಹಾರದ ಕೊರತೆಯಾಗಿದೆಯೋ ಏನೋ ಎಂದು ಇನ್ನೊಬ್ಬರು ಹೇಳಿದ್ದಾರೆ. ಅಳಿಲು ಕೂಡ ಹೀಗೆ ಮಾಡಿರುವ ಸಾಧ್ಯತೆ ಇದೆ. ಮರಕುಟಿಗವೇ ಎಂದು ಹೇಗೆ ಹೇಳುತ್ತೀರಿ? ಎಂದು ಮತ್ತೊಬ್ಬರು ಕೇಳಿದ್ದಾರೆ. ನಿಮ್ಮ ಈ ಪೋಸ್ಟ್​ ನೋಡಿದ ಅನೇಕ ಚಾನೆಲ್​​ಗಳು ಇದನ್ನು ವರದಿ ಮಾಡಿವೆ ಎಂದು ಹಲವರು ಹೇಳಿದ್ದಾರೆ.

ನಿಕ್ಸ್​ ಎಕ್ಸ್‌ಟ್ರೀಮ್ ಪೆಸ್ಟ್ ಕಂಟ್ರೋಲ್‌ನ ಮಾಲೀಕ ನಿಕ್ ಕ್ಯಾಸ್ಟ್ರೋ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಟ್ಟು ಎಂಟು ಚೀಲಗಳನ್ನು ಈ ಹಣ್ಣುಗಳಿಂದ ತುಂಬಿಡಲಾಗಿದೆ. ಫೇಸ್​ಬುಕ್​ನ ಈ ಪೋಸ್ಟ್​ಗೆ 1,200 ಜನರು ಲೈಕ್​ ಮಾಡಿದ್ದಾರೆ. ಸುಮಾರು 983 ಜನರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ. 267 ಜನರು ಪ್ರತಿಕ್ರಿಯಿಸಿದ್ದಾರೆ.

- Advertisement -

Latest Posts

Don't Miss