ನೀರಾವರಿ ವಿಚಾರದಲ್ಲಿ ಕೇಂದ್ರದಿoದ ರಾಜ್ಯಕ್ಕೆ ನಿರ್ಲಕ್ಷೆ. ಎಚ್ ಡಿ ಕುಮಾರಸ್ವಾಮಿ

ನೀರಾವರಿ ವಿಚಾರದಲ್ಲಿ ಎಚ್‌ಡಿ ಕುಮಾರಸ್ವಾಮಿ ಯಾವಾಗಲು ಮುಂಚೂಣಿಯಲ್ಲಿರುತ್ತಾರೆ. ಒಂದಲ್ಲ ಒಂದು ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಮತ್ತೊಂದು ಹೇಳಿಕೆಯನ್ನು ನೀಡಿ ಸಂಚಲನವನ್ನು ಸೃಸ್ಟಿಸಿದ್ದಾರೆ.ಜಲಧಾರೆ ಯಾತ್ರೆಯ ಮೂಲಕ ನೀರಾವರಿ ಯೋಜನೆಗೆ ಸಂಬಂಧಿಸಿ ಕೇಂದ್ರದ ಅನ್ಯಾಯ ಹಾಗೂ ಕಿರುಕುಳದ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಘೋಷಿಸಿದ್ದಾರೆ.

ಜಲಧಾರೆ ಯಾತ್ರೆ ಎಂಬ ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಯಾತ್ರೆ ಕೈಗೊಳ್ಳಲಾಗುವುದು. ಇದರ ಮೂಲಕ ನೀರಾವರಿ ಕುರಿತ ಕೇಂದ್ರ ಸರ್ಕಾರದ ಅನ್ಯಾಯ, ಹಾಗೂ ಕಿರುಕುಳದ ಬಗ್ಗೆ ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ. ಕಳೆದ 75 ವರ್ಷಗಳಲ್ಲಿ ಹಲವಾರು ನದಿಗಳು ರಾಜ್ಯದಲ್ಲಿ ಹುಟ್ಟಿ ಹರಿಯುತ್ತಿವೆ. ಕೇಂದ್ರ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮನ್ನು ನಿರ್ಲಕ್ಷಿಸಿವೆ.ಮುಂದಿನ ದಿನಗಳಲ್ಲಿ ನಾವು ಸುಮ್ಮನಿರುವುದಿಲ್ಲ ನಾವು ಸಹ ಪಾದಯಾತ್ರೆಯನ್ನು ಕೈಗೊಳ್ಳುತ್ತೇವೆ, ಮತ್ತು ರೈತರಿಗಾಗಿ ದಿಟ್ಟತನದಿಂದ ಜಲಧಾರೆಯ ಬಗ್ಗೆ ತಿಳಿಸಿಕೊಡುತ್ತೇವೆ ಎಂದು ಕಿಡಿಕಾರಿದ್ದಾರೆ.

About The Author