Thursday, December 12, 2024

Latest Posts

ಐಹೊಳೆಯ ಚರಿತ್ರೆ ಸಾರುವ ‘ಐಹೊಳೆ’ ಚಿತ್ರದ ಹಾಡುಗಳು

- Advertisement -

ಬೆಂಗಳೂರು: ರವೀಂದ್ರನಾಥ ಸಿರಿವರ ನಿರ್ದೇಶನದಲ್ಲಿ ಚಾಲುಕ್ಯರ ಪ್ರಥಮ ರಾಜಧಾನಿ ಎಂದೇ ಖ್ಯಾತವಾಗಿರುವ  ಐಹೊಳೆಯ ಚರಿತ್ರೆಯನ್ನು ಸಾರುವ ‘ಐಹೊಳೆ’ ಚಿತ್ರದ ಹಾಡುಗಳು, ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ‌ಸಾಹಿತಿ ಹಾಗೂ ಸಂಗೀತ ನಿರ್ದೇಶಕ ಡಾ.ಹಂಸಲೇಖ, ಲತಾ ಹಂಸಲೇಖ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಮನೋಜ್ ಕುಮಾರ್, ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಆಂಟೊನಿ ದಾಸ್ ಹಾಗೂ ಮಾಜಿ ಶಾಸಕ ಲಕ್ಷ್ಮೀನಾರಾಯಣ  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಐದನಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.

ಐಆರ್ ಸಿ, ಶಾರೀಕ್ ಕೃತ್ಯವನ್ನು ಸಮರ್ಥಿಸಿಕೊಂಡದ್ದರ ಬಗ್ಗೆ ಅಲೋಕ್ ಕುಮಾರ್ ಪ್ರತಿಕ್ರಿಯೆ

ಕರ್ನಾಟಕದ ಭವ್ಯ ಪರಂಪರೆಯನ್ನು ಬಿಂಬಿಸುವ, ಚಾಲುಕ್ಯರ ಮೊದಲ ರಾಜಧಾನಿ ಎಂದೇ ಖ್ಯಾತವಾಗಿರುವ ಸ್ಥಳ ‘ಐಹೊಳೆ’.ಈ ಚಾರಿತ್ರಿಕ ಸ್ಥಳದ ಕುರಿತಾದ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ಕೊಡುವಂತಹ ‘ಐಹೊಳೆ’ ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಸುಂದರವಾಗಿ ಮೂಡಿಬಂದಿದೆ. ಇನ್ನು ನಿರ್ದೇಶಕ ರವೀಂದ್ರನಾಥ ಸಿರಿವರ ಮಾತನಾಡಿ, ನಾನೇ ಚಿತ್ರವನ್ನು ನಿರ್ದೇಶಿಸಿದ್ದೇನೆ, ಸಿರಿವರ ಕ್ರಿಯೇಷನ್ಸ್ ಅರ್ಪಿಸುವ ಹಾಗೂ ಎಂ.ಕೆ.ಬಿ ಸ್ಟುಡಿಯೋ ಮೂಲಕ ನಾನು ಸೇರಿ ಎಂಟು ಜನ ಮಿತ್ರರು ಚಿತ್ರವನ್ನು ನಿರ್ಮಿಸಿದ್ದೇವೆ. ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ ಈ ಚಿಕ್ರಕ್ಕಿದ್ದು, ಮನೋಜ್ ಕುಮಾರ್ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಚಿತ್ರ ಕಥೆಯನ್ನು ಮಂಜುನಾಥ್ ಬರೆದಿದ್ದಾರೆ. ಸಂಭಾಷಣೆ ಶಂಕರ್ ಪಾಗೋಜಿ ಅವರದು. ರೇವಂತ್ ಮಾಳಿಗೆ, ಪ್ರಗತಿ ಸುರ್ವೆ, ಬಿರಾದಾರ್, ಡ್ರಾಮ ಜ್ಯೂನಿಯರ್ ಮಂಜು ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ನಿರ್ದೇಶಕ ರವೀಂದ್ರನಾಥ ಅವರು ಧನ್ಯವಾದ ತಿಳಿಸಿದರು.

ಟಿವಿ ಚಾನೆಲ್ ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ ಟ್ರಾಯ್

ನವೆಂಬರ್ ಕನ್ನಡ ಮಾಸ ಎಂದೇ ಖ್ಯಾತಿ. ಅಂತಹ ಮಾಸದಲ್ಲಿ ಸ್ನೇಹಿತ ರವೀಂದ್ರನಾಥ್ ಸಿರಿವರ ಒಳ್ಳೆಯ ಕೆಲಸ ಮಾಡಿದ್ದಾರೆ. ಕರ್ನಾಟಕ ಭವ್ಯ ಪರಂಪರೆಯನ್ನು ಸಾರುವ,  ‘ಐಹೊಳೆ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರಲಿದ್ದಾರೆ. ನಾನು ಈ ಚಿತ್ರಕ್ಕೆ ಹಾಡುಗಳನ್ನು ಬರೆದು, ಸಂಗೀತ ನೀಡಿದ್ದೀನಿ. ‘ಐಹೊಳೆ’ ಸೇರಿದಂತೆ ಕರ್ನಾಟಕದ ಅನೇಕ ಐತಿಹಾಸಿಕ ಸ್ಥಳಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಿ, ಹೆಚ್ಚಿನ ಜನರು ಅಲ್ಲಿಗೆ ಬರುವ ಹಾಗೆ ಮಾಡಬೇಕೆಂದು ಸರ್ಕಾರವನ್ನು ವಿನಂತಿಸಿಕೊಳ್ಳುತ್ತೇನೆ ಎಂದ ಹಂಸಲೇಖ ಹೇಳಿದರು.

ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದ ನಟ ಉಪೇಂದ್ರ : ಆತಂಕದಲ್ಲಿದ್ದ ಅಭಿಮಾನಿಗಳು

ಕನ್ನಡ ಹಾಗೂ ರಾಜ್ಯೋತ್ಸವ ಅಂದರೆ ಕೇವಲ ಸಾಹಿತ್ಯ ಮತ್ತು ಪುಸ್ತಕ ಪ್ರಪಂಚ ಅಷ್ಟೇ ಅಲ್ಲ. ಕನ್ನಡದಲ್ಲಿ ಸಾವಿರಾರು ಸಂಗತಿಗಳು ಅಂತರ್ಗತವಾಗಿದೆ. ಅದರಲ್ಲಿ ಶಿಲ್ಪಕಲೆಯೂ ಒಂದು. ಹಂಸಲೇಖ ಅವರು ಹೇಳಿದಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಐತಿಹಾಸಿಕ ಪ್ರವಾಸಿ ಸ್ಥಳಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿ. ಸಾಕಷ್ಟು ಜನರು ಅಲ್ಲಿಗೆ ಬರುವಂತಾಗಲಿ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಮಾಜಿ ಶಾಸಕ ಲಕ್ಷ್ಮೀನಾರಾಯಣ, ಜೀ ವಾಹಿನಿಯ ಆಂಟೊನಿ ದಾಸ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಮನೋಜ್ ಕುಮಾರ್ ಸಹ ಚಿತ್ರದ ಕುರಿತು ಮಾತನಾಡಿ, ತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲಿ ಅಭಿನಯಿಸಿರುವ ಮಂಜು, ರೇವಂತ್ ಮಾಳಿಗೆ ಸೇರಿದಂತೆ ಅನೇಕ ಕಲಾವಿದರು, ನಿರ್ಮಾಪಕರು, ಹಾಡು ಹಾಡಿರುವ ಗುರುಕಿರಣ್, ಅಂಕಿತ ಕುಂಡು ಮತ್ತು ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಾನ್ಸೂನ್ ಸಮಯದಲ್ಲಿ ನಿಮ್ಮ ಪಾದಗಳನ್ನು ಫಂಗಲ್ ಸೋಂಕಿನಿಂದ ರಕ್ಷಿಸಿ..!

ಐಆರ್ ಸಿ, ಶಾರೀಕ್ ಕೃತ್ಯವನ್ನು ಸಮರ್ಥಿಸಿಕೊಂಡದ್ದರ ಬಗ್ಗೆ ಅಲೋಕ್ ಕುಮಾರ್ ಪ್ರತಿಕ್ರಿಯೆ

- Advertisement -

Latest Posts

Don't Miss