ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಮತ್ತೆ ಪರಿಷ್ಕೃತಗೊಳಿಸಲಾಗಿದೆ.
ದಿನಾಂಕ 22-04-2022 ರಿಂದ ದಿನಾಂಕ 18-05-2022ರವರೆಗೆ ನಿಗದಿಯಾಗಿದ್ದಂತ ದ್ವಿತೀಯ ಪಿಯುಸಿ ವೇಳಾಪಟ್ಟಿಯನ್ನು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ಬದಲಾದ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಎಲ್ಲಾ ಪೋಷಕರು, ವಿದ್ಯಾರ್ಥಿಗಳು ಇಲಾಖಾ ಅಂತರ್ಜಾಲದಲ್ಲಿಯೂ ವೇಳಾಪಟ್ಟಿ ವೀಕ್ಷಿಸಬಹುದಾಗಿ ಎಂದು ತಿಳಿಸಿದೆ.
ಇನ್ನೂ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಈ ಬದಲಾದ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳ ಗಮನಕ್ಕೆ ತರಲು ತಿಳಿಸಿದೆ. ಜೊತೆಗೆ ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾಯಪಟ್ಟಿಯನ್ನು ಅನುಸರಿಸದೇ ಇಂದು ಪ್ರಕಟಿಸಿದಂತ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಮಾತ್ರ ಅನುಸರಿಸುವಂತೆ ತಿಳಿಸಿದೆ.
ಹೀಗಿದೆ ಪರಿಷ್ಕೃತ ದ್ವಿತೀಯ ಪಿಯುಸಿ ವೇಳಾಪಟ್ಟಿ





