ಸ್ಮಾರ್ಟ್ ಸಿಟಿ ಕಾಮಗಾರಿ ನಡುವೆ ಫುಟ್ ಪಾತ್ ಅಕ್ರಮ ನಿರ್ವಹಣೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮೊದಲೇ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಹಲವಾರು ರಸ್ತೆಗಳು ಗುಂಡಿಬಿದ್ದ ಸ್ಥಿತಿಯಲ್ಲಿವೆ. ಹೀಗಿರುವಾಗ ಪ್ರತಿಷ್ಠಿತ ಅಂಗಡಿಗಳ ಮಾಲೀಕರು ಸಾರ್ವಜನಿಕರ ಸಂಚಾರದ ಹಕ್ಕನ್ನು ಉಲ್ಲಂಘಿಸಿ, ಫುಟ್ ಪಾತ್ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ಹುಬ್ಬಳ್ಳಿಯ ಗೋಕುಲರಸ್ತೆಯಲ್ಲಿಯೇ ಫುಟ್ ಪಾತ್ ಒತ್ತುವರಿ ಮಾಡಲಾಗಿದೆ. ಇಲ್ಲಿನ ಮಾಂಗಲ್ಯ ಮಳಿಗೆಯ ಮಾಲೀಕರು ರಾಜಾರೋಷವಾಗಿ ಜನರಿಗೆ ಓಟಾಟಕ್ಕೆ ಬಿಡಲಾಗಿದ್ದ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ.

ಮೊದಲೇ ಗೋಕುಲರಸ್ತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಇಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನಗಳ ಓಡಾಟದ ಜೊತೆಗೆ ವಿಐಪಿ, ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚಾರ ಮಾಡತ್ತಾರೆ. ಹೀಗಿರುವಾಗ ಈ ರಸ್ತೆಯ ಫುಟ್ ಪಾತ್ ನ್ನು ಮಾಂಲಗ್ಯ ಮಳಿಗೆ ಮಾಲೀಕರು ಫುಟ್ ಪಾತ್ ಒತ್ತುವರಿ ಮಾಡಿ ಬ್ಯಾರಿಕೇಡ್ ಗಳನ್ನು ಅಳವಡಿಸಿಕೊಂಡಿದ್ದಾರೆ.

ಈ ದಾರಿಯಲ್ಲಿ ಸಂಚರಿಸುವ ಜನ ಇದನ್ನು ಪ್ರಶ್ನೆ ಮಾಡಿದರೆ ಮಳಿಗೆ ಮಾಲೀಕ ಮಾತ್ರ ತಲೆ‌ ಕೆಡಿಸಿಕೊಂಡಿಲ್ಲ. ಡೋಂಟ್ ಕೇರ್ ಅನ್ನೋ ರೀತಿ ವರ್ತಿಸುತ್ತಿದ್ದಾನೆ. ಇನ್ನು ಮಳಿಗೆ ಮಾಲೀಕ ಇಷ್ಟು ರಾಜಾರೋಷವಾಗಿ ಫುಟ್ ಪಾತ್ ಅನ್ನು ಅತಿಕ್ರಮಿಸಿಕೊಂಡಿದ್ದರು ಕೂಡ ಸ್ಥಳೀಯ ಪಾಲಿಕೆ ಸದಸ್ಯರಾಗಲಿ, ವಲಯ ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ. ಅಧಿಕಾರಿಗಳು, ಸ್ಥಳೀಯ ಪಾಲಿಕೆ ಸದಸ್ಯರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಫುಟ್ ಪಾತ್ ಮೇಲೆ ಬಡ ವ್ಯಾಪಾರಿ ಟೀ ಅಂಗಡಿ ಇಟ್ಟರೆ, ತರಕಾರಿ ವ್ಯಾಪಾರ ಮಾಡಿದ್ರೆ ಅದನ್ನು ರಾತ್ರೋರಾತ್ರಿ ತೆರವು ಮಾಡ್ತಾರೆ. ಆದ್ರೆ ಪ್ರತಿಷ್ಠಿತ ಅಂಗಡಿಗಳ ಮಾಲೀಕರು ಇಂತಹ ಬಹು ದೊಡ್ಡ ಒತ್ತುವರಿ ಮಾಡಿದ್ರು ಕೂಡ ಕಣ್ಣಿಗೆ ಕಾಣಿಸದೆ ಇರೋರು ದೊಡ್ಡ ದುರಂತವೇ ಎನ್ನಬಹುದು.

ವರದಿ : ಲಾವಣ್ಯ ಅನಿಗೋಳ

About The Author