Hubli News: ಹುಬ್ಬಳ್ಳಿ: ಅಕ್ರಮವಾಗಿ ಯಾವುದೇ ದಾಖಲೆಗಳಿಲ್ಲದೆ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭವರಣ ವಶಪಡಿಸಿಕೊಳ್ಳಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು.
ನಗರದಲ್ಲಿಂದು ಮಾಹಿತಿ ನೀಡಿದ ಅವರು, ವ್ಯಕ್ತಿಯೋರ್ವ ಖಾಸಗಿ ಬಸ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇಲೆ ಧಾರವಾಡ ಎಸ್ ಡಿ ಎಂ ಆಸ್ಪತ್ರೆ ಬಳಿ ದಾಳಿ ಮಾಡಿ
ಓರ್ವ ಆರೋಪಿ ವಶಕ್ಕೆ ಪಡೆಯಲಾಗಿದೆ.
ಅಭಿಷೇಕ್ ಎಂಬಾತನನ್ನು ಬಂಧಿಸಿ ಬಂಧಿತನಿಂದ 1 ಕೆಜಿ 101 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 463 ಗ್ರಾಂ ವಶಪಡಿಸಿಕೊಳ್ಳಲಾಗಿದೆ. ಅಭಿಷೇಕ್ ಮುಂಬಯಿಂದ ಹುಬ್ಬಳ್ಳಿಯ ಕೆಲವು ಬಂಗಾರದ ಅಂಗಡಿಯವರಿಗೆ ಬಿಲ್ ಮತ್ತು ಜಿಎಸ್‌ಟಿ ಇಲ್ಲದೇ ಬಂಗಾರದ ಆಭರಣಗಳನ್ನು ತಯಾರಿಸಿ ಹುಬ್ಬಳ್ಳಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಅಭಿಷೇಕ್ ಮಹಾವೀರ ಕೊರಿಯರ್ ನಲ್ಲಿ ಕೆಲಸ ಮಾಡ್ತಿದ್ದ .
ಎಷ್ಟು ದಿನದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನುವ ಬಗ್ಗೆ ತನಿಖೆಯನ್ನು ನಡೆಸಿದ್ದೇವೆ. ಈ ಕುರಿತಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೇರೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಬೇಕಿದೆ ಎಂದರು.