Hubli News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಯಾವುದೇ ಅಧಿಕಾರಿಗಳ ಭಯವಿಲ್ಲದೇ ಫ್ಲಾಸ್ಟಿಕ್ ಮಾರಾಟವಾಗುತ್ತಿದ್ದು, ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ರಾಜಾರೋಷವಾಗಿ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಮಾರುತ್ತಿದ್ದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಪ್ಲಾಸ್ಟಿಕ್ #Plastic ಎಂಬ ಪೆಡಂಭೂತ ಇಡೀ ವಿಶ್ವವನ್ನೇ ತಿಂದು ಹಾಕುತಿದೆ. ಈ ಸಮಸ್ಯೆಯಿಂದ ಹೊರ ಬರಲು ಅನೇಕ ದೇಶಗಳು ಹೆಣಗಾಡುತ್ತಿವೆ. ಅನೇಕ ಕ್ರಮಗಳನ್ನು ಸರ್ಕಾರ, ಸಂಘಸಂಸ್ಥೆಗಳು, ಎನ್‌ಜಿಓಗಳು ತೆಗೆದುಕೊಳ್ಳುತ್ತಲೇ ಇದೆ. ಆದರೆ ಪ್ಲಾಸ್ಟಿಕ್ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ಛೋಟಾ ಬಾಂಬೆ ಖ್ಯಾತಿಯ ಹುಬ್ಬಳ್ಳಿಯಲ್ಲಿ ಏಕ ಬಳಕೆ ಫ್ಲಾಸ್ಟಿಕ್‌ಗಳನ್ನು ಬ್ಯಾನ್ ಮಾಡಿ ವರ್ಷಗಳೇ ಕಳೆದಿದೆ. ಆದರೆ ಮಾತ್ರ ಪ್ಲಾಸ್ಟಿಕ್ ಇನ್ನೂ ಓಡಾಡುತ್ತಿದೆ…!
ಈ ಬ್ಯಾನ್ ಕೇವಲ ಹೆಸರಿಗೆ ಮಾತ್ರ ಎನ್ನುವಂತೆ ಕಾಣುತ್ತಿದೆ. ಯಾಕೆಂದರೆ ನಗರದಲ್ಲಿ ಯಾವುದೇ ಅಧಿಕಾರಿಗಳ ಕಾರ್ಖಾನೆಗಳಲ್ಲಿ ಫ್ಲಾಸ್ಟಿಕ್ ಭಯವಿಲ್ಲದೇ ತಯಾರಾಗುತ್ತಿದ್ದು, ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಏನೋ ಕಾಟಾಚಾರಕ್ಕೆ ಒಂದು ಎರಡು ಫ್ಯಾಕ್ಟರಿಗಳಲ್ಲಿ ದಾಳಿ ಮಾಡಿ ಮತ್ತೆ ಒಂದ ವರ್ಷ ಸುಮ್ನೆ ಕುಳಿತುಕೊಳ್ಳುತ್ತಾರೆ.
ಹೌದು, ರಾಜ್ಯದಲ್ಲಿ ಸುಮಾರು ವರ್ಷಗಳ ಹಿಂದೆ ಪ್ಲಾಸ್ಟಿಕ್ ಬ್ಯಾನ್ ಆಗಿತ್ತು. ಇನ್ನು ಸಿಂಗಲ್ ಯೂಸ್ ಪ್ಲಾಸ್ಟಿಕ್‌ಗಳನ್ನ ಬಳಕೆ ಮಾಡಿದರೆ ಫೈನ್ ಹಾಕುವುದಾಗಿ ಅಧಿಕಾರಿಗಳು ಹೇಳಿದ್ದರು. ಇನ್ನು ಸಣ್ಣ-ಪುಟ್ಟ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸಿದ್ರೆ ಪೌರುಷ ತೋರಿಸುವ ಅಧಿಕಾರಿಗಳು ರಾಜಾರೋಷವಾಗಿ ಕಾರ್ಖಾನೆಗಳಲ್ಲಿ ಪ್ಲಾಸ್ಟಿಕ್ ತಯಾರಾಗುತ್ತಿದ್ದರೂ ಹಾಗೂ ಮಾರುಕಟ್ಟೆಗಳಲ್ಲಿ ಓಪನ್ ಆಗೀ ಮಾರಾಟ ಮಾಡುತ್ತಿದ್ದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ .
ಸರಕಾರಿ ಪರಿಸರ ಕಾಯ್ದೆ 1986 ವಿಧದಿ 5ರಲ್ಲಿನ ಅಧಿಕಾರ ಚಲಾಯಿಸಿ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ ಮಾರಾಟ ನಿಷೇಧಿಸಿ 2016 ಏ 1 ರಿಂದ ರಾಜ್ಯಾದಾಂತ್ಯ ಆದೇಶ ಹೊರಡಿಸಿದೆ. ಆದರೆ ಪರಿಣಾಮಕಾರಿಯಾಗಿ ಅನುಷ್ಟಾನವಾಗಿಲ್ಲ. ಕಾಯ್ದೆ ಪ್ರಕಾರ 50 ಮೈಕ್ರಾನ್‌ಗಿಂತ ಕಡಿಮೆ ಗಾತ್ರವಿರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ತಟ್ಟೆ ಬಾವುಟ, ಚಮಚ, ಪ್ಲಾಸ್ಟಿಕ್ ಹಾಳೆ ಬಳಕೆಗೆ ನಿಷೇಧ ವಿಧಿಸಿದೆ. ಆದೇಶಗಳಿಗೆ ವರ್ಷಗಳಿಂದ ಗೆದ್ದಲು ಹಿಡಿಯುತಿದ್ದು, ಇನ್ನು ಮುಂದೆ ಆದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜಾಗೃತಿ ಮೂಡಿಸುತ್ತಾರೆ ಇಲ್ವೋ. ಮಾರುಕಟ್ಟೆಗಳಲ್ಲಿ ಇರುವ ದೊಡ್ಡ ದೊಡ್ಡ ಪ್ಲಾಸ್ಟಿಕ್ ಅಂಗಡಿಗಳನ್ನು ಬಂದ ಮಾಡಿಸುತ್ತಾರೋ ಇಲ್ವೋ ಮತ್ತೆ ಯಥಾಸ್ಥಿತಿ ಕಾಪಾಡಿಕೊಳ್ಳುತ್ತಾರೋ ಎಂಬುದನ್ನ ಕಾದು ನೋಡಬೇಕಿದೆ.
ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ