ಬಿಗ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಬಿಗ್ ಹೌಸ್ ಎಕ್ಸಿಟ್ ಬಾಗಿಲು ತಟ್ಟಿದ್ದಾರೆ ಅಶ್ವಿನಿ ಗೌಡ, ಈಗ ಎಲ್ಲರಲ್ಲಿ ಕಾಡ್ತಿರೋ ಪ್ರಶ್ನೆ ಮನೆಯಿಂದ ಹೊರಗೆ ಬರ್ತಾರಾ ಅಶ್ವಿನಿ ಗೌಡ, ಇದನ್ನೆಲ್ಲಾ ನೋಡ್ತಿದ್ರೆ ಸೀಸನ್ 10ರ(Seasn 10) ಬಿಗ್ ಬಾಸ್ ನಲ್ಲಿ ವಿನಯ್ ಗೌಡ ಅವ್ರು ಕೂಡ ಹಿಂಗೇ ಒಂದ್ಸಲ ಆಡ್ತಿದ್ರು, ಅದೇ ನೆನಪಾಗುತ್ತೆ, ಆದ್ರೆ ನಿಮ್ಮೆಲರಿಗೂ ಗೊತ್ತೇ ಇದೆ ಆಗ ವಿನಯ್ ಗೌಡ(Vinay Gowda) ಹೊರಗೆ ಬಂದಿರ್ಲಿಲ್ಲ,ಆದ್ರೆ ಅಶ್ವಿನಿ ಗೌಡ(Ashwini Gowda) ಯಾವಾಗ ಹೆಂಗ್ ಇರ್ತಾರೆ ಅನ್ನೋದೇ ಗೊತ್ತಾಗಲ್ಲ, ಅದ್ರಲ್ಲೂ ಈ ಸೀಸನ್ expect the unexpected ಅನ್ನೋ ರೀತಿನೇ ನಡ್ಕೊಂಡು ಬರ್ತಿದೆ, ಹಾಗಿದ್ರೆ ಇವತ್ತು ನಿಜವಾಗ್ಲೂ ಅಶ್ವಿನಿ ಗೌಡಾಗಾಗಿ ಬಿಗ್ ಬಾಸ್(Bigg Boss) ಮನೆಯ ಬಾಗಿಲು ತೆರೆಯುತ್ತಾ ? ಕಾದು ನೋಡಬೇಕಾಗಿದೆ….
ಬಿಗ್ ಬಾಸ್ ಮನೆಯಲ್ಲಿ ಜಗಳ, ಕಿತ್ತಾಟ ಕಾಮನ್, ಅದ್ರಲ್ಲೂ ಈ ಸೀಸನ್ ಅಲ್ಲಿ ಜಗಳ ಅಂದ್ರೆ ಅಲ್ಲಿ ಅಶ್ವಿನಿ ಗೌಡ ಹೆಸರೇ ಮುಂದಿರುತ್ತೆ, ಜಗಳ ಮಾಡೋಕೆ ಇವರಿಗೆ ಕಾರಣ ಇಲ್ಲ ಅಂದ್ರೂ ಕಾರಣ ಹುಡುಕಿ ಜಗಳ ಮಾಡ್ತಾರೆ, ಅಶ್ವಿನಿ ಗೌಡ ಇಂತವರ ಜೊತೆ ಜಗಳ ಮಾಡಿಲ್ಲ ಅನ್ನೋ ಹಾಗೆ ಇಲ್ಲ, ಎಲ್ಲರ ಜೊತೆನೂ ಒಂದಲ್ಲ ಒಂದು ಕಾರಣಕ್ಕೆ ಕೋಪ , ಜಗಳ ಮಾಡ್ಕೊಂಡಿದಾರೆ, ಆದ್ರೆ ಈಗ ಕ್ಯಾಪ್ಟನ್ ರಘು(Raghu) ಮತ್ತು ಅಶ್ವಿನಿ ಗೌಡ ನಡುವೆ ನಡೆದ ಗಲಾಟೆ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಮನೆಯ ಫಸ್ಟ್ ಅಂಡ್ ದಿ ಬೆಸ್ಟ್ ಕ್ಯಾಪ್ಟನ್(Captain) ಅಂತ ಹೆಸರು ಮಾಡಿದ್ದ ರಘು, ಅಶ್ವಿನಿಯ ವರ್ತನೆಗೆ ಸಹನೆ ಕಳೆದುಕೊಂಡು ಕೂಗಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಅಶ್ವಿನಿ ಗೌಡ ಅವರ Attitude ಮತ್ತು ಸಿಟ್ಟಿನ ಮಾತುಗಳು ಜಗಳಕ್ಕೆ ಮತ್ತಷ್ಟು ತೀವ್ರತೆ ತಂದಿವೆ.
ಕ್ಯಾಪ್ಟನ್ ಆಗಿ ಕೆಲಸ ಹೇಳಲು ಬಂದ ರಘುಗೆ, ಅಶ್ವಿನಿ ‘ಬ್ಯಾಕ್ ಪೇನ್ ಇದೆ, 10 ನಿಮಿಷ ಆದ್ಮೇಲೆ ಮಾಡ್ತೀನಿ’ ಅಂತ ಹೇಳ್ತಾರೆ. ಅದಕ್ಕೆ ರಘು ‘10 ನಿಮಿಷದಲ್ಲಿ ಬ್ಯಾಕ್ ಪೇನ್ ಹೋಗುತ್ತಾ?’ ಎಂದು ಪ್ರಶ್ನಿಸೋವಷ್ಟರಲ್ಲಿ ಅಶ್ವಿನಿ ಕೆರಳಿ ‘ಮಾಡಲ್ಲ ಹೋಗ್ರಿ’ ಅಂತ ತಿರುಗಿ ಬೀಳ್ತಾರೆ. ಅದಕ್ಕೆ ರಘು ಕೂಡ ‘ಮಾಡ್ಬೇಡ, ಹೋಗು’ ಅಂತ ಹೇಳೋದ್ರಿಂದ ಜಗಳ ತೀವ್ರವಾಗುತ್ತದೆ. ಕೈ ತೋರಿಸಿದ ಅಶ್ವಿನಿಗೆ ರಘು ಸಿಟ್ಟುಗೊಂಡು ‘ಕೈ ತೋರಿಸ್ಬೇಡ’ ಅಂತಾ ಗಟ್ಟಿ ಎಚ್ಚರಿಕೆ ಕೊಡ್ತಾರೆ.
ಜಗಳ ಮನೆ ತುಂಬ ಹಬ್ಬುತ್ತಿದ್ದಂತೆ ಸೂರಜ್ ಮತ್ತು ಧನುಷ್(Dhanush Gowda) ಇವರ ಮಧ್ಯ ಪ್ರವೇಶಿಸಿ ನಿಲ್ಲಿಸೋಕೆ ಪ್ರಯತ್ನಿಸುತ್ತಾರೆ. ಈ ನಡುವೆ ಅಶ್ವಿನಿ ಅವ್ರು ಕಣ್ಣೀರು ಹಾಕಿ ‘ನಾನು ಇಂಥ ದೊಡ್ಡ ಮನೆಯಲ್ಲಿ ಇರೋದೇ ಇಲ್ಲ, ಬಿಗ್ ಬಾಸ್ ಕರೆಸಿ, ಮನೆ ಬಿಟ್ಟು ಹೋಗ್ತೀನಿ’ ಅಂತಾ ಹೇಳಿಕೊಂಡು ಮೇನ್ ಡೋರ್ ತಟ್ಟೋಕೆ ಹೋಗ್ತಾರೆ, ಈಗ ಮುಂದೆ ಅದೇನಾಗುತ್ತೆ ಅನ್ನೋದನ್ನ ನಾವೆಲ್ರೂ ಇವತ್ತಿನ ಎಪಿಸೋಡ್ ನೋಡೇ ತಿಳ್ಕೊಬೇಕಾಗಿದೆ, ಕ್ಯಾಪ್ಟನ್ ರಘು ಅವ್ರು ಬಂದ ಮೊದಲ ದಿನಾನೇ ಇವ್ರಿಬ್ರ ಜಗಳ ಸಕ್ಕತ್ತಾಗೆ ನಡೆದಿತ್ತು, ಆದ್ರೆ ಬಿಗ್ ಬಾಸ್ ಮನೆ ಬಿಟ್ಟು ಹೊರಗೆ ಹೋಗೋ ನಿರ್ಧಾರ ತಗೋಳೋವಷ್ಟರ ಮಟ್ಟಿಗೆ ಅಶ್ವಿನಿ ಅವ್ರು ಬಂದಿದ್ದಾರೆ ಅಂದ್ರೆ ಇದು ಅವರ ಹೊಸ ಗಿಮಿಕ್ ಅಂತ ನೋಡುಗರು ಅಭಿಪ್ರಾಯ ಪಡ್ತಿದ್ದಾರೆ, ಇನ್ನೂ ಕೆಲವರಂತೂ ಮೊದ್ಲು ಆಯಮ್ಮನ್ನ ಹೊರಗೆ ಕಳಿಸ್ಬಿಡಿ ಬಿಗ್ ಬಾಸ್ ಅಂತಿದಾರೆ….
ವರದಿ : ಗಾಯತ್ರಿ ಗುಬ್ಬಿ

