- Advertisement -
Dharwad News: ಧಾರವಾಡ: ಜೋಡೆತ್ತುಗಳು 26 ಎಕರೆ ಹತ್ತಿ ಬೆಳೆಯಲ್ಲಿ ಕೇವಲ 10 ಗಂಟೆ ಸಮಯದಲ್ಲಿ ಎಡೆಕುಂಟೆ ಹೊಡೆಯುವ ಮೂಲಕ ಎಲ್ಲರ ಗಮನಸೆಳೆದಿವೆ.
ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಪ್ರಗತಿಪರ ರೈತ ಹಾಗೂ ಮಾಜಿ ಪೈಲ್ವಾನರಾದ ಸೋಮಣ್ಣ ನಾಯ್ಕರ್ ಎಂಬುವವರ ಜೋಡೆತ್ತುಗಳೇ ಈ ಸಾಧನೆ ಮಾಡಿವೆ.
26 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಹತ್ತಿ ಬೆಳೆಯಲ್ಲಿ ಕೇವಲ ಎರಡು ಕುಂಟಿಗಳನ್ನು ಕಟ್ಟಿ 10 ಗಂಟೆ ಅವಧಿಯಲ್ಲಿ 26 ಎಕರೆ ಪ್ರದೇಶದಲ್ಲಿ ಎಡೆಕುಂಟೆ ಹೊಡೆಯಲಾಗಿದೆ. ಈ ವಿಶೇಷ ಸಾಧನೆ ಮಾಡಿದ ಎತ್ತುಗಳಿಗೆ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.
- Advertisement -