Policy: ಟರ್ಮ್ ಇನ್ಶೂರೆನ್ಸ್ ಪಾಲಿಸಿ. ಕೆಲವರ ಪ್ರಕಾರ, ಭವಿಷ್ಯದಲ್ಲಿ ಹಣದ ಸಮಸ್ಯೆ ಬರಬಾರದು ಎಂಬ ರಕ್ಷಣೆಗೆ ಇರುವ ಕವಚ. ಇನ್ನು ಕೆಲವರ ಪ್ರಕಾರ, ಸುಮ್ಮನೆ ದುಡ್ಡು ವೇಸ್ಟ್ ಮಾಡುವ ಕೆಲಸ. ಆದರೆ ಟರ್ಮ್ ಇನ್ಶೂರೆನ್ಸ್ ಪಾಲಿಸಿ, ಅದೆಷ್ಟೋ ಜನರ ಸಂಕಷ್ಟಕ್ಕೆ ಪರಿಹಾರವಾಗಿದೆ. ಹಾಗಾಗಿಯೇ ಭಾರದಲ್ಲಿ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಭಾರತದಲ್ಲಿ ಶೇ.50ರಷ್ಟು ಸ್ವಯಂ ಉದ್ಯೋಗಿಗಳು, ಶ್ರೀಮಂತ ಉದ್ಯಮಿಗಳು ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಟರ್ಮ್ ಇನ್ಶೂರೆನ್ಸ್ ಎಂದರೇನು..?
ಟರ್ಮ್ ಇನ್ಶೂರೆನ್ಸ್ ಎಂದರೆ, ನೀವು ಎಲ್ಲಿಯವರೆಗೂ ದುಡ್ಡು ಕಟ್ಟುತ್ತೀರೋ, ಅಲ್ಲಿಯವರೆಗೂ ಮಾತ್ರ ನಿಮಗೆ ಲಾಭ ಸಿಗುತ್ತದೆ. ಇಷ್ಟು ದಿನಗಳವರೆಗೆ ನೀವು ಇನ್ಶೂರೆನ್ಸ್ ತೆಗೆದುಕೊಂಡು, ಮುಂದಿನ ತಿಂಗಳಿಂದ ದುಡ್ಡು ಕಟ್ಟುವುದು ಬಿಟ್ಟರೆ, ನಿಮಗೆ ಈ ತಿಂಗಳವರೆಗೆ ಕಟ್ಟಿದ ಹಣದ ಲಾಭ ಸಿಗುತ್ತದೆ. ಮುಂದೆ ಸಿಗುವುದಿಲ್ಲ. ಇದನ್ನೇ ಟರ್ಮ್ ಇನ್ಶೂರೆನ್ಸ್ ಪಾಲಿಸಿ ಎನ್ನುತ್ತಾರೆ.
ಇನ್ನು ಯಾರೂ ಈ ಟರ್ಮ್ ಇನ್ಶೂರೆನ್ಸ್ ಪಾಲಿಸಿ ಮಾಡಿಸಬೇಕು ಎಂದರೆ, ಮನೆಯ ಯಜಮಾನ. ಆ ವ್ಯಕ್ತಿಗೆ ಪತ್ನಿ ಮಕ್ಕಳಿದ್ದು, ಅಥವಾ ತಂದೆ ತಾಯಿ ಇದ್ದು, ಆ ಜನರು ಈ ವ್ಯಕ್ತಿಗೆ ಸಿಗುವ ಸಂಬಳದ ಮೇಲೆ ಅವಲಂಬಿತರಾಗಿದ್ದು, ನಾಳೆ ಆ ವ್ಯಕ್ತಿಗೆ ಏನಾದರೂ ಆಗಿ, ಆ ವ್ಯಕ್ತಿ ಇನ್ನಿಲ್ಲ ಎಂದಾದರೆ, ಆ ಕುಟುಂಬಸ್ಥರಿಗೆ ಯಾರೂ ದಿಕ್ಕಿಲ್ಲದಂತಾಗುತ್ತದೆ. ಹಾಗಾಗಬಾರದು ಅಂದ್ರೆ, ಆ ವ್ಯಕ್ತಿ ಮನೆ ಜನರ ಮುಂದಿ ಭವಿಷ್ಯವನನ್ನು ಗಮನದಲ್ಲಿ ಇಟ್ಟುಕೊಂಡು, ಟರ್ಮ್ ಇನ್ಶೂರೆನ್ಸ್ ಪಾಲಿಸಿ ಮಾಡಿಸಿ, ಪ್ರತೀ ತಿಂಗಳು ಇಂತಿಷ್ಟು ದುಡ್ಡು ತುಂಬಿದರೆ, ಆತನ ನಿಧನದ ಬಳಿಕ, ಅಥವಾ ಆತನ ದೇಹ ಸ್ವಾಧೀನ ಕಳೆದುಕೊಂಡಾಗ, ಮನೆ ಪರಿಸ್ಥಿತಿ ನಿಭಾಯಿಸಲು, ಆತ ಕಟ್ಟಿದ ಹಣದ ಲಾಭ ಬರುತ್ತದೆ. ಈ ದುಡ್ಡು ಲಕ್ಷ, ಕೋಟಿಯಲ್ಲಿ ಇರುತ್ತದೆ. ಅದು ನೀವೆಷ್ಟು ದುಡ್ಡು ಪಾವತಿಸುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ.
ಪಾಲಿಸಿ ಬಜಾರ್ ವರದಿ ಹೇಳಿದ್ದೇನು..?
ಪಾಲಿಸಿ ಬಜಾರ್ ಎಂಬ ವಿಮಾ ಕಂಪನಿ ಈ ಬಗ್ಗೆ ವರದಿ ಮಾಡಿದ್ದು, ಯುವ ಉದ್ಯಮಿಗಳು, ಹೆಚ್ಚು ವಿಮೆ ಮಾಡಿಸಿಕೊಳ್ಳುತ್ತಿದ್ದು, ತಮ್ಮ ಕುಟುಂಬದ ಮುಂದಿನ ಭವಿಷ್ಯದ ರಕ್ಷಣೆಯ ಬಗ್ಗೆ ಇಂದೇ ಈ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪಾಲಿಸಿ ಬಜಾರ್ ಟರ್ಮ್ ಇನ್ಶೂರೆನ್ಸ್ ಮುಖ್ಯಸ್ಥ ರಿಷಬ್ ಗಾರ್ಗ್, ಸ್ವಯಂ ಉದ್ಯೋಗಿಗಳಲ್ಲಿ ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳುತ್ತಿರುವುದು ಹೆಚ್ಚಿತ್ತಿರುವ ಆರ್ಥಿಕ ಅರಿವಿನ ಸ್ಪಷ್ಟ ಸೂಚಕವಾಗಿದೆ. ಈಗ ಲಭ್ಯವಿರುವ ವಿಶೇಷ ಯೋಜನೆಗಳೊಂದಿಗೆ. ಸ್ವಯಂ ಉದ್ಯೋಗಿಗಳು, ಯುವ ಪೀಳಿಗೆಯವರು, ತಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಸುಲಭವಾಗಿದೆ ಎಂದಿದ್ದಾರೆ.
ಇನ್ನು ಈ ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳಲು ಹೆಚ್ಚು ದಾಖಲಾತಿಯ ಅವಶ್ಯಕತೆ ಇಲ್ಲದ ಕಾರಣ, ಯಾರೂ ಬೇಕಾದರೂ ಇನ್ಶೂರೆನ್ಸ್ ಮಾಡಿಸಿಕೊಳ್ಳಬಹುದು. ಇಂದಿನ ಕಾಲದಲ್ಲಿ ಮರಣ ಯಾವಾಗ ಸಂಭವಿಸುತ್ತದೆ ಅಂತಾ ಹೇಳಲು ಬರುವುದಿಲ್ಲ. ಮೊದಲೆಲ್ಲ ವಯಸ್ಸಾದವರು ಮರಣಕ್ಕಾಗಿ ಕಾಯುತ್ತಿದ್ದರು. ಈತ್ತೀಚೆಗೆ ಗಟ್ಟಿಮುಟ್ಟಾಗಿರುವ ವ್ಯಕ್ತಿ ಕುಳಿತಲ್ಲೇ ಮರಣ ಹೊಂದುತ್ತಿದ್ದಾನೆ. ಹಾಗಾಗಿ ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಲವರು ಟರ್ಮ್ ಲೈಫ್ ಇನ್ಶೂರೆನ್ಸ್ ಮಾಡಿಸಿಕೊಳ್ಳುತ್ತಿದ್ದಾರೆ.