Thursday, May 30, 2024

Latest Posts

ಮುಂದಿನ ದಿನಗಳಲ್ಲಿ ಮತದಾರರೇ ಅಗ್ರಗಣ್ಯ ನಾಯಕರನ್ನು ತೆಗೆದು ಹಾಕಲಿದ್ದಾರೆ: ದಿಂಗಾಲೇಶ್ವರ ಶ್ರೀ

- Advertisement -

Political News: ಹುಬ್ಬಳ್ಳಿ: ಡಾ.ಬಿ‌.ಆರ್.ಅಂಬೇಡ್ಕರ್ ಅವರ ಆದರ್ಶಗಳು ಸೂರ್ಯ ಚಂದ್ರ ಇರೋವರೆಗೆ ಇರುತ್ತವೆ. ಆದರೆ ಕೆಲವರು ಅವರ ತತ್ವಸಿದ್ದಾಂತಗಳನ್ನು ತೆಗೆದುಹಾಕುವ ಹುಚ್ಚು ಸಾಹಸಕ್ಕೆ ತಯಾರಾಗಿದ್ದಾರೆ ಎಂದು ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳು ಕಿಡಿಕಾರಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ 133 ನೇ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಅಂಬೇಡ್ಕರ್ ರಸ್ತೆಯಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸಂವಿಧಾನ ಬದಲಾವಣೆ ಮಾಡುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದಾರೆ. ಅವರೇ ಬದಲಾವಣೆ ಆಗುವ ಸನ್ನಿಹ ಬಂದಿದೆ. ವೇದಿಕೆಯಲ್ಲಿ ಅಂಬೇಡ್ಕರ್ ಹೊಗಳಿ ಮನಸ್ಸಿನಲ್ಲಿ ಒಂದು, ಬಾಯಲ್ಲಿ ಒಂದು ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ಮತದಾರರೇ ಅಗ್ರಗಣ್ಯ ನಾಯಕರನ್ನು ತೆಗೆದು ಹಾಕಲಿದ್ದಾರೆ ಎಂದರು.

ಈಗಾಗಲೇ ಮತದಾರರಲ್ಲಿ ಜಾಗೃತ ಸಭೆಯನ್ನು ಮಾಡುತ್ತಿದ್ದೇನೆ. ಅದರಂತೆ ಇಂದು ಸವಣೂರು, ಶಿಗ್ಗಾಂವಿಯಲ್ಲಿ ಮತದಾರರ ಸಭೆ ನಡೆಸುತ್ತಿದ್ದೇನೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಮೋದಿ ಗ್ಯಾರಂಟಿ, ಶಾಶ್ವತ ಗ್ಯಾರಂಟಿ: ಜನರ ಅಭಿಪ್ರಾಯಗಳನ್ನು ಪಡೆದು ಜವಾಬ್ದಾರಿಯಿಂದ ನಾವು ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಮತ್ತೊಮ್ಮೆ ಅದನ್ನು ಜನರ ಮುಂದಿಟ್ಟು ಚರ್ಚಿಸಲಾಗುವುದು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆ ವಿಶ್ವಾಸದ ಮೇರೆಗೆ ಜವಾಬ್ದಾರಿಯಿಂದ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆ ಸೂಚನೆಗಳನ್ನು ಪಡೆದು ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಅದರಲ್ಲಿ ಏನೇನಿದೆ ಎಂದು ಜನರ ಮುಂದಿಟ್ಟು, ಚರ್ಚಿಸುತ್ತೇವೆ. ಕೆಲವರು ಬೇಜವಾಬ್ದಾರಿಯಿಂದ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ ಎಂದು ಮೂದಲಿಸಿದರು. ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಗ್ಯಾರಂಟಿ ಶಾಶ್ವತ ಗ್ಯಾರಂಟಿ, ದೇಶ ಕಟ್ಟುವ ಗ್ಯಾರಂಟಿ, ಬದುಕು ಕಟ್ಟುವ ಗ್ಯಾರಂಟಿ, ಸಾಮಾಜಿಕ ನ್ಯಾಯ ನೀಡುವ ಗ್ಯಾರಂಟಿ ಎಂದು ಹೇಳಿದರು.

ಸ್ತ್ರೀವಾದದ ಬಗ್ಗೆ ನನಗೆ ನಂಬಿಕೆ ಇಲ್ಲ: ನಟಿ ನೂರಾ ಫತೇಹಿ

ಅಯೋಧ್ಯೆ ಮಂದಿರ ಮತ್ತು ರಾಮಲಲ್ಲಾ ಇರುವ ಬೆಳ್ಳಿ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ..

ಹೆಲ್ತ್ ಡ್ರಿಂಕ್ ಪಟ್ಟಿಯಿಂದ ಬೋರ್ನ್‌ವೀಟಾ ತೆಗೆದು ಹಾಕಲು ಕೇಂದ್ರ ಸರ್ಕಾರ ಆದೇಶ

- Advertisement -

Latest Posts

Don't Miss