ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿ ಇರುವಾಗ್ಲೇ, ಕೇಂದ್ರ ಸಚಿವ ಸಚಿವ ಪ್ರಹ್ಲಾದ್ ಜೋಶಿ ಬಿಗ್ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಸಿಎಂ ಆಗಲು ಬಿಡಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಏನೂ ಸರಿಯಿಲ್ಲ. ಸಿದ್ದರಾಮಯ್ಯ ತಮ್ಮ ಮನಸ್ಸಿನ ಮಾತುಗಳನ್ನು ಯತೀಂದ್ರ ಮೂಲಕ ಹೇಳಿಸಿದ್ದಾರೆ. ಇದರಿಂದ ಸಿಎಂ ಮತ್ತು ಡಿಸಿಎಂ ನಡುವೆ ಕಿತ್ತಾಟ ಜೋರಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗೋಕೆ ಈ ಸಿದ್ದರಾಮಯ್ಯ ಬಿಡಲ್ಲ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಕ್ರಾಂತಿ ಬರುತ್ತದೆ. ಕರ್ನಾಟಕ ಶಾಂತಿಯ ನಾಡು, ಆದರೆ ಕಾಂಗ್ರೆಸ್‌ನ ದರಿದ್ರ ಆಡಳಿತವನ್ನು ಇಲ್ಲಿ ಮಾಡಬೇಡಿ ಎಂದು ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.
ಕಾಂಗ್ರೆಸ್‌ನೊಳಗೆ ಮುಖ್ಯಮಂತ್ರಿ ಸ್ಥಾನಕ್ಕೇರಲು ಪೈಪೋಟಿ ಶುರುವಾಗಿದೆ. ಯಾರು ಮೋದಿ ಅವರಿಗೆ, ಆರ್‌ಎಸ್‌ಎಸ್‌ಗೆ ಬೈತಾರೋ ಅವರಿಗೆ ಅಧಿಕಾರ ಕೊಡ್ತಾರೆ ಅನ್ನೋ ಮಾನಸಿಕತೆ ಕಾಂಗ್ರೆಸ್‌ನೊಳಗೆ ಇದೆ. ಹೀಗಾಗಿಯೇ ಬಾಯಿಗೆ ಬಂದಂತೆ ಮಾತಾಡ್ತಾರೆ. ಸಾರ್ವಜನಿಕ ಜೀವನ ಮಟ್ಟದ ಘನತೆಯನ್ನೂ ಕಾಪಾಡದಂತೆ ಸಿಎಂ ಸ್ಥಾನ ಉಳಿಸಿಕೊಳ್ಳಲು ಪೈಪೋಟಿಯನ್ನು ಕೊಟ್ಟಿದ್ದಾರೆ.
ಆ ಸ್ಥಾನಕ್ಕೆ ಬರುವುದಕ್ಕೆ ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಬೈಯೋದಕ್ಕೆ ಕಾಂಗ್ರೆಸ್‌ನಲ್ಲಿ ಸ್ಪರ್ಧೆ ಇದೆ. ಕನಿಷ್ಠ ಮಟ್ಟಕ್ಕೆ ನೀವು ಮುಟ್ಟಿದ್ದೀರಿ. ಸದ್ಯ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಇದ್ದೀರಿ. ಇನ್ನೂ ಬುದ್ಧಿ ಬರಲಿಲ್ಲ ಅಂದ್ರೆ, ನಿಮ್ಮನ್ನು ಜನರು ಆ ಮೂರೂ ರಾಜ್ಯಗಳಿಂದಲೂ ಕಿತ್ತುಹಾಕಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ. ಹೀಗಂತ ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ಜೋಶಿ ವ್ಯಂಗ್ಯವಾಡಿದ್ದಾರೆ.
ಬಿ.ಕೆ. ಹರಿಪ್ರಸಾದ್ ಗಣೇಶನ ಹಬ್ಬದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಾರ್ಟಿಯೊಳಗೆ ಮುಸಲ್ಮಾನರ ವೋಟ್‌ಗಾಗಿ ಹಿಂದೂಗಳನ್ನು ಬೈಯ್ಯೋದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಏನ್ ಬೇಕಾದ್ರೂ ಮಾಡ್ತಾರೆ. ಆತ ಸಿದ್ದರಾಮಯ್ಯ ಅವರ ಚಡ್ಡಿಯನ್ನು ನೋಡಲು ಹೊರಟಿದ್ರು. ಲುಂಗಿ ಒಳಗಿರುವ ಚಡ್ಡಿ ಯಾವುದು ಅನ್ನೋದನ್ನು ನೋಡೋದಕ್ಕೆ ಹೊರಟಿದ್ರು. ಚಡ್ಡಿ ನೋಡೋರ ಬಗ್ಗೆ ನಾವು ರಿಯಾಕ್ಷನ್ ಕೊಡ್ಬೇಕಾ ಎಂದು ಪ್ರಶ್ನಿಸುತ್ತಲೇ ಟಾಂಗ್ ಕೊಟ್ಟಿದ್ದಾರೆ.

