ಹುಬ್ಬಳ್ಳಿ:ಮುಖ್ಯಮಂತ್ರಿಗಳು ಮಳೆಹಾನಿ ಬಗ್ಗೆ ವಿಸಿ ಮೂಲಕ ಸಭೆ ನಡೆಸಿ ಚರ್ಚಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ರೈತರ ಜೀವಹಾನಿಯ ಬಗ್ಗೆ ವಿಶೇಷವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯಾದ್ಯಂತ ರೈತರ ಆತ್ಮಹತ್ಯೆಗಳು ಆಗದಂತೆ ತಡೆಗಟ್ಟವುದು ನಮ್ಮ ಉದ್ದೇಶ. ಧಾರವಾಡ ಜಿಲ್ಲೆಯಲ್ಲಿ ಬೆಲಹಾನಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಈ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಸಿಗಬೇಕಿದೆ.ಅದರ ಜೊತೆ ಜಾನುವಾರುಗಳ ಹಾನಿಯಾಗಿದೆ, ರಸ್ತೆಗಳು ಹಾಳಾಗಿವೆ.ಜಿಲ್ಲೆಯಲ್ಲಿ ಯಾವುದೇ ರೀತಿ ಜೀವ ಹಾನಿಯಾಗಿಲ್ಲ.
ಹಲವು ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರ,ನಾಳೆ ಮುಖ್ಯಮಂತ್ರಿಗಳು ಈ ಬಗ್ಗೆ ಶಾಸಕಾಂಗ ಸಭೆ ಕರೆದಿದ್ದಾರೆ.ಈ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಕಚೇರಿ ಉದ್ಘಾಟನೆಯಲ್ಲಿ ಬಾಡೂಟ ವಿಚಾರ,ಬಾಡೂಟ ಮಾಡಿಸಬಾರದೆಂದು ಎಲ್ಲಿ ಇಲ್ಲ.ಊಟ ಮಾಡಿಸಲು ಅನುಮತಿ ಇದೆ, ಬಾಡೂಟಕ್ಕೆ ಏನ್ ಸಮಸ್ಯೆ..? ನಾನ್‌ವೆಜ್ ತಿನ್ನಬಾರದೆಂದು ಎಲ್ಲಿ ಇಲ್ಲ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ವಿರೋಧ ನಾಯಕಿ ಅಧಿಕಾರಿಗಳ ಮಾತು ಕೇಳುತ್ತಿಲ್ಲ ಆರೋಪ ವಿಚಾರ,ಆಡಳಿತ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ.ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತೇವಿ.ಕೆಲವು ಸಂದರ್ಭಗಳಲ್ಲಿ ಅವರು ಮಾತು ಕೇಳಲಿಕ್ಕಿಲ್ಲ.ಈ ವಿಚಾರಗಳ ತಿಳಿಸಿ ಸರಿಮಾಡಲಾಗುತ್ತದೆ.
KRS Dam : ಕೆಆರ್ ಎಸ್ ಡ್ಯಾಂ ನಲ್ಲಿ ಹೆಚ್ಚಾದ ನೀರು…! ಸಂತಸದಲ್ಲಿ ರೈತರು