ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನ ನೀಡಿದೆ. ಮಧ್ಯಮ ವರ್ಗದವರಿಗೆ ನೆಮ್ಮದಿ ತರುವ ಮತ್ತು ಅವರ ಖರೀದಿ ಸಾಮರ್ಥ್ಯ ಹೆಚ್ಚಿಸಲು ವಾರ್ಷಿಕ 15 ಲಕ್ಷದವರೆಗೆ ಆದಾಯವಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆ ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಹೌದು ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ನೀಡೋ ಉದ್ದೇಶದಿಂದ ಈ ಕ್ರಮವನ್ನ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಅಲ್ಲದೇ ಈ ನಿರ್ಧಾರವನ್ನು ಫೆಬ್ರುವರಿಯಲ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಘೋಷಿಸುವ ನಿರೀಕ್ಷೆ ಯಿದೆ ಅಂತಲೂ ಸರ್ಕಾರದ ಮೂಲಗಳು ಹೇಳ್ತೀವೆ.
ಇನ್ನು ಈ ಕ್ರಮದಿಂದ ಲಕ್ಷಾಂತರ ಜನ ತೆರಿಗೆ ಪಾವತಿದಾದರರಿಗೆ ಸಾಕಷ್ಟು ಅನುಕೂಲವಾಗಲಿದೆ. ಅದರಲ್ಲೂ ವಿಶೇಷವಾಗಿ, ದುಬಾರಿ ಜೀವನದ ಖರ್ಚಿನಿಂದಾಗಿ ಒದ್ದಾಡ್ತಿರೋ ಸಿಟಿ ಮಂದಿಗೆ ಈ ಕ್ರಮ ಕೊಂಚ ನೆಮ್ಮದಿ ಕೊಡೋ ನಿರೀಕ್ಷೆ ಹೆಚ್ಚಿದೆ. ಅಲ್ಲದೆ 2020ರ ಟ್ಯಾಕ್ಸ್ ವ್ಯವಸ್ಥೆಯನ್ನ ನೋಡೋದಾದ್ರೆ ಅದ್ರಲ್ಲಿ ಮನೆ ಬಾಡಿಗೆಗಳಂತಹ ವಿನಾಯಿತಿಗಳು ಇರಲಿಲ್ಲ.
ಇನ್ನು ಈ ವ್ಯವಸ್ಥೆಯಲ್ಲಿ ವಾರ್ಷಿಕ ಆದಾಯ 3 ಲಕ್ಷದಿಂದ 15 ಲಕ್ಷದವರೆ ಆದಾಯ ಹೊಂದಿರೋರಿಗೆ ಶೇ.5ರಿಂದ ಶೇ. 20 ರಷ್ಟು ತೆರಿಗೆ ವಿಧಿಸಲಾಗುವುದು . ಇನ್ನೂ ಇದಕ್ಕಿಂದ ಹೆಚ್ಚಿನ ಆದಾಯ ಹೊಂದಿರೋರಿಗೆ ಶೇ. 30 ರಷ್ಟು ತೆರಿಗೆ ವಿಧಿಸಾಗುತ್ತಿದೆ.
ಇನ್ನು ತೆರಿಗೆಯನ್ನ ಎಷ್ಟರ ಮಟ್ಟಿಗೆ ಕಡಿತಗೊಳಿಸಬೇಕು ಅನ್ನೋದು ಇನ್ನು ನಿರ್ಧರಿಸಿಲ್ಲ. ಬಜೆಟ್ ಗೆ ಮುಂಚಿತವಾಗಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಅಂತ ಅಧಿಕಾರಿಯೊಬ್ರು ಮಾಹಿತಿ ನೀಡಿದ್ದಾರೆ. ಅಲ್ಲದೇ ಯಾವುದೇ ತೆರಿಗೆ ಕಡಿತದ ಆದಾಯ ನಷ್ಟದ ಮಾಹಿತಿಯನ್ನ ಮೂಲಗಳು ಹಂಚಿಕೊಂಡಿಲ್ಲ. ಆದ್ರೆ ತೆರಿಗೆ ದರಗಳನ್ನ ಕಡಿಮೆ ಮಾಡೋದ್ರಿಂದ ಹೆಚ್ಚು ಜನರು ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಂತಲೂ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ಕೋರಿದ್ದ ಇ- ಮೇಲ್ ಗೆ ಹಣಕಾಸು ಸಚಿವಾಲಯ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಮಧ್ಯಮ ವರ್ಗದವರ ಕೈಯಲ್ಲಿ ಹೆಚ್ಚು ಹಣ ಹರಿದಾಡುವುದು ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ನೆರವಾಗುತ್ತದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎನಿಸಿಕೊಂಡಿ ಭಾರತವು ಕಳೆದ 7 ವರ್ಷದಿಂದ ,ಜುಲೈ ಹಾಗೂ ಸೆಪ್ಟಂಬರ್ ನಡುವಿನ ಅವಧಿಯಲ್ಲಿ ಅತ್ಯಂತ ನಿಧಾನಗತಿಯ ಪ್ರಗತಿ ದಾಖಲಿಸಿದೆ.
ಇನ್ನು ಹೆಚ್ಚಿನ ಹಣದುಬ್ಬರ ಸಾಬೂನು – ಶಾಂಪೂಗಳಿಂದ ಹಿಡಿದು ಕಾರು -ದ್ವಿಚಕ್ರ ವಾಹನಗಳವರೆಗಿನ ಬೇಡಿಕೆಯನ್ನು ನಗರ ಪ್ರದೇಶಗಳಲ್ಲಿ ಇನ್ನಷ್ಟು ಕುಗ್ಗಿಸಿದೆ.