www.karnatakatv.net :ರಾಯಚೂರು: ನಗರದ ಹೃದಯ ಭಾಗದಲ್ಲಿ ಇರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಶುಲ್ಕ ಜಾಸ್ತಿಯಾಗಿದ್ದು, ಕಾಲೇಜಿನ ಅವ್ಯವಸ್ಥೆ ಕಂಡುಬರುತ್ತಿದೆ. ಈ ಕಾಲೇಜಿಲ್ಲಿ ಖಾಸಗಿ ಕಾಲೇಜಗಿಂತ ಸರ್ಕಾರಿ ಕಾಲೇಜು ಗಳಲ್ಲಿ ಶುಲ್ಕ ಜಾಸ್ತಿ ಇದೆ.
ಪ್ರಥಮ ವರ್ಷದ ವಿದ್ಯಾರ್ಥಿನಿಯರು 2021 ನೇ ಸಾಲಿನಲ್ಲಿ ಕಲಾ ವಿಭಾಗಕ್ಕೆ 500 , ವಾಣಿಜ್ಯ ವಿಭಾಗ ಕ್ಕೆ 119, ವಿಜ್ಞಾನ ವಿಭಾಗಕ್ಕೆ 62 ,ವಿದ್ಯಾರ್ಥಿಗಳು ದಾಖಲಗಿವೆ . ಆದರೆ ಆಡ್ಮಿಷನ್ ಮಾಡಿಸಲು ಬಂದ ವಿದ್ಯಾರ್ಥಿನಿಯರಿಗೆ 1000 , 1500 , 2000 , ಕೊಟ್ಟರೆ ದಾಖಲಾತಿ ಮಾಡಿಕೊಳ್ಳುವುದು, ಇಲ್ಲ ಅಂದರೆ ಆಡ್ಮಿಷನ್ ಇಲ್ಲ ಅಂತರೆಂತೆ ಇಲ್ಲಿನ ಪ್ರಾಂಶುಪಾಲರು .
ಸರ್ಕಾರದ ನಿಯಮ ಅನುಸಾರ ಪ್ರಥಮ ವರ್ಷದ ಪದವಿ ಪೂರ್ವ ಕಾಲೇಜಿನ ಶುಲ್ಕ 225 ರೂಪಾಯಿಗಳು ಮಾತ್ರ .ಆದರೆ ಈ ಕಾಲೇಜುನಲ್ಲಿ ಓದಬೇಕಾದರೆ ಪ್ರಾಂಶುಪಾಲರು ಹೇಳಿದ ಶುಲ್ಕ ಕೊಟ್ಟರೆ ಈ ಕಾಲೇಜು, ಇಲ್ಲ ಅಂದರೆ ಪ್ರಾಂಶುಪಾಲರು ಸಿಟು ಇಲ್ಲಾ ಅಂತ ಹೇಳುತ್ತಾರಂತೆ.
ಇಲ್ಲಿ ಉಪನ್ಯಾಸಕರನ್ನು ಕೇಳಿದರೆ ನಮ್ಮ ಪ್ರಾಂಶುಪಾಲರು ಎಷ್ಟು ಹೇಳುತ್ತಾರೆ ಅಷ್ಟು ತೆಗೆದು ಕೊಳುತ್ತೆವೆ ಅಂತಾರೆ. ಹಾಗಾದರೆ ಇದು ಸರ್ಕಾರಿ ಕಾಲೇಜೋ ಅಥವಾ ಖಾಸಗಿ ಕಾಲೇಜೋ ಎಂದು ವಾತಾವರಣದಲ್ಲಿ ಅನುಮಾನ ಕಾಡುತ್ತಿವೆ .
ಇನ್ನೂ ಪ್ರಂಶುಪರಿಗೆ ಕೇಳಿದರೆ ನಾವು ಪಾಲಕರಲ್ಲಿ ಹಣ ಕೇಳುತ್ತವೆ ಆದರೆ ಆ ಹಣ ಸಂಗ್ರಹಿಸಿ ಸರ್ಕಾರಿ ಕಾಲೇಜು ಅಭಿವೃದ್ಧಿಗಾಗಿ ಖರ್ಚು ಮಾಡುತ್ತೆವೆ ಎಂದು ಸಮಜಾಯಿಷಿ ಹೇಳುತ್ತಾರೆ .ಹಾಗೆ ಅಭಿವೃದ್ಧಿ ಮಾಡಬಯಸುವ ಪ್ರಾಚಾರ್ಯರು ಪಾಲಕರಿಂದಲೂ ದೇಣಿಗೆ ಅಂತ ಡೆಸ್ಕ್, ಚೇರ್, ಫ್ಯಾನ್, ಫೊಟೋ ಪಡೆದಿಲ್ಲ. ಕಂಡಿಷನ್ ಮಾಡಿ ಇಷ್ಟು ಫೀಸ್ ಕೊಟ್ರೇನೇ ಅಡ್ಮಿಷನ್ ಕೊಡೋದು ಅಂತ ಹಣ ತೆಗೆದುಕೊಳ್ಳುತ್ತಿದ್ದಾರೆ.
ಅಡ್ಮಿಷನ್ ಆದಮೇಲೆ ರಸಿದಿ ಕೇಳಿದರೆ ಇಲ್ಲ ಅಂತಾರೆ. ಇನ್ನೂ 40 , 50 ಕಿಲೋಮೀಟರ್ ನಿಂದ ಸರ್ಕಾರಿ ಕಾಲೇಜ್ ಗೆ ಬರುವ ವಿದ್ಯಾರ್ಥಿಗಳು ತಮ್ಮ ಕಷ್ಟದಲ್ಲಿ ಕಲಿಸುತ್ತಿದ್ದು ಇತ್ತ ಕಾಲೇಜಿನ ಪ್ರಾಂಶುಪಾಲರು ಕರುಣೆ ಇಲ್ಲದೆ ಬಡ ವಿದ್ಯಾರ್ಥಿಗಳ ಜೆಬಿಗೆ ಕತ್ತರಿ ಹಾಕುತ್ತಿದ್ದರೆ . ಇನ್ನಾದರು ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಾರ ಅಂತ ಕಾದು ನೋಡ ಬೇಕು .
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು