Sunday, September 8, 2024

Latest Posts

ಬೆಂಗಳೂರಿನಲ್ಲಿ ಹೆಚ್ಚಿದ ಕೊರೊನಾ ಪ್ರಕರಣ

- Advertisement -

www.karnatakatv.net : ಬೆಂಗಳೂರು : ಭಾರತದಲ್ಲಿ 24 ಗಂಟೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳ ಏರಿಳಿತ ಮುಂದುವರಿದಿದೆ. ನಿನ್ನೆ ಕರ್ನಾಟಕದಲ್ಲಿ 506 ಹೊಸ ಪ್ರಕರಣ ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ 500 ಕಿಂತಲೂ  ಕಡಿಮೆ ಪ್ರಕರಣ ವರದಿಯಾಗಿದ್ದವು. ಜು.24ರಂದು 551 ಪ್ರಕರಣ ದಾಖಲಾಗಿತ್ತು. ಈ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 12,26,463ಕ್ಕೆ ಏರಿಕೆಯಾಗಿದೆ.

ಅಂತೆಯೇ ಸೋಂಕಿಗೆ 9 ಮಂದಿ ಬಲಿಯಾಗಿದ್ದು ಈವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 15 852ಕ್ಕೆ ಏರಿಕೆಯಾಗಿದೆ. 257 ಮಂದಿ ಗುಣಮುಖರಾಗಿದ್ದು ಒಟ್ಟು ಗುಣಮುಖರ ಸಂಖ್ಯೆ 12 02 194ಕ್ಕೆ ಏರಿಕೆಯಾಗಿದೆ.

- Advertisement -

Latest Posts

Don't Miss