Sunday, December 22, 2024

Latest Posts

ಭಾರತ ಹಾಗೂ ಇಂಗ್ಲೆಂಡ್ ಮೂರನೇ ಟೆಸ್ಟ್

- Advertisement -

www.karnatakatv.net : ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಆಗಸ್ಟ್ 25 ಬುಧವಾರದಿಂದ ಲೀಡ್ಸ್​ನಲ್ಲಿ ನಡೆಯಲಿದೆ. ಈಗಾಗಲೇ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಎರಡನೇ ಟೆಸ್ಟ್ ಗೆದ್ದು ಬೀಗಿರುವ ಭಾರತ 1-0 ಯಿಂದ ಮುನ್ನಡೆ ಕಾಯ್ದುಕೊಂಡಿದೆ. 3ನೇ ಕ್ರಮಾಂಕಕ್ಕೆ ಸೂಕ್ತವಾಗಿರುವ ಆಟಗಾರನನ್ನು ಟೀಮ್ ಇಂಡಿಯಾ ಆಯ್ಕೆ ಮಾಡಬಹುದು. ಪೂಜಾರ ಸ್ಥಾನ ತಪ್ಪಿದ್ದೇ ಆದಲ್ಲಿ ಸೂರ್ಯಕುಮಾರ್ ಯಾದವ್ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತ.

 ಗೆಲುವಿನ ವಿಶ್ವಾಸದಲ್ಲಿರುವ ಟೀಮ್ ಮುಂದಿನ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಭಯ ತಂಡಗಳಿಗೆ ಮೂರನೇ ಪಂದ್ಯ ಮುಖ್ಯವಾಗಿರುವುದರಿಂದ ಕೊಹ್ಲಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವುದು ಖಚಿತ. ಮೊದಲ ಹಾಗೂ ಎರಡನೇ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ ಚೇತೇಶ್ವರ್ ಪೂಜಾರ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಇಂಗ್ಲೆಂಡ್​ನಲ್ಲಿ ಪೂಜಾರ ಬ್ಯಾಟ್ ಈವರೆಗೆ ಅಷ್ಟೊಂದು ಸದ್ದು ಮಾಡಿಲ್ಲ. ಆಡಿದ 12 ಟೆಸ್ಟ್​ನಲ್ಲಿ ಇವರು ಗಳಿಸಿದ್ದು ಒಟ್ಟು 593 ರನ್​ಗಳನ್ನಷ್ಟೆ. ಇವರ ಸರಾಸರಿ 27ಕ್ಕಿಂತಲೂ ಕಮ್ಮಿಯಿದೆ.

ಎರಡನೇ ಟೆಸ್ಟ್​ನಲ್ಲಿ ಪೂಜಾರ 206 ಎಸೆತಗಳಲ್ಲಿ 45 ರನ್ ಕಲೆಹಾಕಿದರಾದರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಇದು ಸಹಾಯ ಮಾಡುವುದು ಅನುಮಾನ. ಹೀಗಾಗಿ 3ನೇ ಕ್ರಮಾಂಕಕ್ಕೆ ಸೂಕ್ತವಾಗಿರುವ ಆಟಗಾರನನ್ನು ಟೀಮ್ ಇಂಡಿಯಾ ಆಯ್ಕೆ ಮಾಡಬಹುದು. ಪೂಜಾರ ಸ್ಥಾನ ತಪ್ಪಿದ್ದೇ ಆದಲ್ಲಿ ಸೂರ್ಯಕುಮಾರ್ ಯಾದವ್ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತ.

- Advertisement -

Latest Posts

Don't Miss