Friday, July 18, 2025

Latest Posts

ನಾನ್ ವೆಜ್ ಹಾಲು ಭಾರತಕ್ಕೆ ಬೇಡ! ಏನಿದು ವಿವಾದ?

- Advertisement -

ಭಾರತ, ಅಮೆರಿಕ ಎರಡು ದೇಶಗಳು ಮಹತ್ವದ ಆರ್ಥಿಕ ಶಕ್ತಿಗಳು. ಇವುಗಳ ನಡುವೆ 2030ರ ವೇಳೆಗೆ 500 ಬಿಲಿಯನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ಗುರಿಯನ್ನು ಹೊಂದಲಾಗಿದೆ. ಆದರೆ ಈ ಗುರಿಗೆ ತಲುಪುವ ಮಾರ್ಗದಲ್ಲಿ ಹಲವಾರು ಅಡಚಣೆಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಡೈರಿ ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ವಿವಾದ.

ಅಮೆರಿಕಾ ಭಾರತಕ್ಕೆ ತಮ್ಮ ಡೈರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಮೊದಲಾದವುಗಳನ್ನು ನೇರವಾಗಿ ರಫ್ತು ಮಾಡಲು ಬಯಸುತ್ತಿದೆ. ಆದರೆ ಭಾರತದಲ್ಲಿ ಹೈನುಗಾರಿಕೆ ಮಾತ್ರವಲ್ಲದೆ, ಸಂಸ್ಕೃತಿ ಹಾಗೂ ಧರ್ಮಕ್ಕೂ ಹಸುವಿಗೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಹಸುವನ್ನು ಗೋ ಮಾತೆ ಎಂದು ಪೂಜಿಸುತ್ತಾರೆ. ಹೀಗಾಗಿ, ಹಸುವಿನ ಹಾಲಿಗೆ ಭಾರೀ ಪವಿತ್ರತೆ ಇದೆ.

ಆದ್ರೆ ಅಮೆರಿಕಾದಲ್ಲಿ ನಾನ್ ವೆಜ್ ತಿನ್ನುವ ಹಸುಗಳಿವೆ. ಈ ನಾನ್ ವೆಜ್ ಹಸುಗಳು ಬೇರೆ ಹಸುಗಳ ರಕ್ತವನ್ನು ಸಹ ಕುಡಿಯುತ್ತವೆ. ಜೊತೆಗೆ ಅಮೆರಿಕಾದ ಹಸುಗಳು ಮಾಂಸ ತಿನ್ನುತ್ತವೆ. ಹೀಗಾಗಿ ಇವುಗಳನ್ನು ನಾನ್ ವೆಜ್ ಹಸುಗಳು ಅಂತಾನೇ ಕರೆಯಲಾಗುತ್ತೆ. ನಾನ್ ವೆಜ್ ಹಸುಗಳ ಹಾಲನ್ನು ಅಮೆರಿಕಾ ಭಾರತಕ್ಕೆ ರಫ್ತು ಮಾಡಲು ಬಯಸಿದೆ.

ಇಂತಹ ಹಸುಗಳ ಹಾಲನ್ನು ಭಾರತಕ್ಕೆ ರಫ್ತು ಮಾಡುವುದನ್ನು ಭಾರತ ವಿರೋಧಿಸಿದೆ. ಹೀಗೆ ನಾನ್ ವೆಜ್ ಹಾಲು ನಮ್ಮ ಧಾರ್ಮಿಕ, ಸಾಂಸ್ಕೃತಿಕ ನಂಬಿಕೆಗಳಿಗೆ ವಿರುದ್ಧವಾಗಿದೆ. ಹಸುವನ್ನು ಗೋ ಮಾತೆ ಎಂದು ಭಾರತದಲ್ಲಿ ಜನರು ಪೂಜಿಸುತ್ತಾರೆ. ಹಸುವಿನ ಹಾಲಿನ ಬಗ್ಗೆ ಶ್ರದ್ದೆ, ಭಕ್ತಿ, ಗೌರವ ಇದೆ. ದೇವರ ನೈವೇದ್ಯಕ್ಕೂ ಶುದ್ದ ಹಸುವಿನ ಹಾಲು ಬಳಕೆ ಮಾಡಲಾಗುತ್ತೆ. ಆದರೆ ಇದಕ್ಕೆ ಕೇಂದ್ರದ ಮೋದಿ ಸರ್ಕಾರ ಒಪ್ಪಿಲ್ಲ. ಹೀಗಾಗಿ ಭಾರತ- ಅಮೆರಿಕಾ ನಡುವೆ ವ್ಯಾಪಾರ- ವಾಣಿಜ್ಯ ಒಪ್ಪಂದ ಏರ್ಪಟ್ಟಿಲ್ಲ.

ಭಾರತದಲ್ಲಿ 8 ಕೋಟಿ ಜನರು ಡೈರಿ ವಲಯದಲ್ಲಿ ನೇರ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಈ ವಲಯದಿಂದ ಲಕ್ಷಾಂತರ ಹಳ್ಳಿಗಳಲ್ಲಿ ಜನರು ಜೀವನೋಪಾಯ ಪಡುತ್ತಿದ್ದಾರೆ. ಇದನ್ನು ಅಮೆರಿಕಾದ ಕಂಪನಿಗಳಿಗೆ ತೆರೆದರೆ, ಈ ದೇಶೀಯ ಉದ್ಯಮಕ್ಕೆ ಭಾರಿ ಪೆಟ್ಟು ಬೀಳಲಿದೆ. ಅಂದಾಜು ಪ್ರಕಾರ, ಅಮೆರಿಕಾದ ಹಾಲು ಉತ್ಪನ್ನಗಳು ಭಾರತಕ್ಕೆ ಪ್ರವೇಶ ಮಾಡಿದರೆ, ಭಾರತಕ್ಕೆ ವರ್ಷಕ್ಕೆ ₹1.03 ಲಕ್ಷ ಕೋಟಿ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಅಮೆರಿಕಾದ ಹಾಲು ಉತ್ಪನ್ನಗಳು ಭಾರತಕ್ಕೆ ರಫ್ತು ಆಗಬೇಕಾದರೆ, ಅವು ನಾನ್ ವೆಜ್ ಹಸುಗಳಿಂದ ಬರುವುದಿಲ್ಲ ಎಂಬ ಪ್ರಮಾಣಪತ್ರ ನೀಡಬೇಕೆಂದು ಭಾರತ ಪಟ್ಟು ಹಿಡಿದಿದೆ. ಅಮೆರಿಕಾ ಈ ನಿಯಮಗಳ ಬಗ್ಗೆ ಡಬ್ಲ್ಯುಟಿಓನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಭಾರತವು ತನ್ನ ಜನರ ನಂಬಿಕೆ, ಕುಟುಂಬ ಆಧಾರಿತ ಹೈನುಗಾರಿಕೆ ಮತ್ತು ಆರ್ಥಿಕ ಭದ್ರತೆಗಾಗಿ ಈ ನಿಯಮಗಳನ್ನು ಕಡ್ಡಾಯವಾಗಿ ಕಾಯ್ದುಕೊಂಡಿದೆ.

- Advertisement -

Latest Posts

Don't Miss