InterNational News:
ಭಾರತ ದೇಶ ಶತ್ರುವಿಗೂ ಕೆಡುಕು ಬಯಸಲ್ಲ ಅನ್ನೋದು ಮತ್ತೆ ಸಾಭೀತಾಗಿದೆ. ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಸಂಭವಿಸಿ ಸುಮಾರು 992,871 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿದ್ದು, ಲಕ್ಷಾಂತರ ಜನರು ಬೀದಿಗೆ ಬಂದಿದ್ದು, ಪಾಕಿಸ್ತಾನದ ನೆರವಿಗೆ ನೆರೆ ರಾಷ್ಟ್ರ ಭಾರತ ಧಾವಿಸಿದೆ.
ಪಾಕಿಸ್ತಾನಕ್ಕೆ ಅಗತ್ಯ ಮಾನವೀಯ ನೆರವು ಒದಗಿಸಲು, ಪಾಕಿಸ್ತಾನದ ಅಗತ್ಯಗಳನ್ನು ಪೂರೈಸುವ ಉದ್ದೇಶದೊಂದಿಗೆ ಪಾಕ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಮಾಹಿತಿಗಳ ಪ್ರಕಾರ ಭಾರತವು ಪಾಕ್ ಗೆ ಅತ್ಯಗತ್ಯ ವಸ್ತುಗಳನ್ನು ಒದಗಿಸಲು ಅಗತ್ಯ ಸಿದ್ಧತೆ ನಡೆಸಿದೆ.
ಇನ್ನು ಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ದುಃಖವಾಯಿತು. ಸಂತ್ರಸ್ತರ ಕುಟುಂಬಗಳಿಗೆ, ಗಾಯಾಳುಗಳಿಗೆ ಮತ್ತು ಈ ನೈಸರ್ಗಿಕ ವಿಕೋಪದಿಂದ ಸಂತ್ರಸ್ತರಾದ ಎಲ್ಲರಿಗೂ ನಾವು ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಮತ್ತು ಸಹಜ ಸ್ಥಿತಿಯ ಶೀಘ್ರ ಮರುಸ್ಥಾಪನೆಗಾಗಿ ಆಶಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಈ ರೀತಿಯಾಗಿ ಹೇಳಿಕೊಂಡಿದ್ದಾರೆ.
ಅಮೇರಿಕಾದಲ್ಲಿ ಮೆಕ್ಸಿಕಾನ್ ಮಹಿಳೆಯಿಂದ ಭಾರತೀಯರಿಗೆ ಜನಾಂಗೀಯ ನಿಂದನೆ..!
ಭಾರತದ ಪ್ರಮುಖ ಬಿಜೆಪಿ ನಾಯಕನ ಹತ್ಯೆಗೆ ಸ್ಕಚ್…!? ಆತ್ಮಾಹುತಿ ಬಾಂಬರ್ ಅಂದರ್
ಯುಕೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಸುನಾಕ್ ಅವರೇ ಟಾಪ್ ಹುದ್ದೆಗೆ ಸೂಕ್ತ ಅಭ್ಯರ್ಥಿ: ಗೋವ್