ಫ್ಯಾಕ್ಟ್ ಚೆಕ್: ಇದು ದೆಹಲಿಯು ಸರ್ಕಾರಿ ಶಾಲೆಯಲ್ಲಿನ ಮಕ್ಕಳ ಕಿರು ನಾಟಕವನ್ನು ಮಕ್ಕಳು ಮಾಡುತಿದ್ದರು ಇದನ್ನು ಚಿತ್ರಿಸಿಕೊಂಡ ಟ್ರೋಲರ್ ಗಳು ಇದು ದೆಹಲಿಯ ಕೇಜ್ರಿವಾಲ ಮಾದರಿ ಶಾಲೆ ಎಂಬ ಅಡಿ ಬರಹದೊಂದಿಗೆ ಮಕ್ಕಳ ಕಿರು ನಾಟಕವೊಂದು ಟ್ವಿಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು,ಭಾರತ ಮಾತೆಗೆ ಕಿರಿಟವನ್ನು ತೆಗೆಸಿ ಬಿಳಿ ಬಟ್ಟೆ ತೊಡಿಸಿ ಕಲೀಮಾವನ್ನು ಓದಿಸುತಿದ್ದಾರೆ ಎಂದು ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಸ್ವಾತಂತ್ರ ದಿನಾಚರಣೆ ಅಂಗವಾಗಿ ಉತ್ತರಪ್ರದೇಶದ ಲಖನೌ ಮಾಳ್ವಿಯಾ ಶಿಶು ಮಂದಿರದಲ್ಲಿ ಮಾಡಿದಂತಹ ಕಿರು ನಾಟಕ ಈ ನಾಟಕದ ಕುರಿತು ಪೋಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸೌಹಾರ್ದದ ಸಂದೇಶ ಸಾರುವುದಕ್ಕಾಗಿ ಈ ಕಿರು ನಾಟಕವನ್ನು ಅಭಿನಯಿಸಿದ್ದಾರೆ.ಹಿಂದು ಮುಸ್ಲಿಂ ಕ್ರೈಸ್ತ ಸಿಖ್ ಹೀಗೆ ನಾನಾ ಧರ್ಮದ ಪ್ರಕಾರವಾಗಿ ದೇವರಿಗೆ ಭಕ್ತಿ ತೋರಿಸುವ ವಿಧವನ್ನು ತೋರಿಸಲಾಗಿತ್ತು ಎಂದು ಲಖನೌ ಪೋಲಿಸರು ತಿಳಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕ್ರಮ ಕೈಗೊಳ್ಳಲಅಗುವುದು ಎಂದು ಟ್ವಿಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.