ದೇಶದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾಣ ಶುರುವಾಗಿದೆ. ಎಲ್ಲರೂ ತಿರಂಗ ಹಾರಿಸಿ ದೇಶ ಪ್ರೇಮ ಸಾರುತ್ತಿದ್ದಾರೆ. ಆರ್ ಎಸ್ ಎಸ್ [RSS] ಅಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಫೋಟೋವನ್ನು ರಾಷ್ಟ್ರಧ್ವಜಕ್ಕೆ ಬದಲಿಸಿದೆ.
ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಗುರುತಿಸಲು ದೇಶವು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತದೆ., ಆಗಸ್ಟ್ 2 ಮತ್ತು 15 ರ ನಡುವೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರವಾಗಿ ‘ತಿರಂಗ’ವನ್ನು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ನೀಡಿದ್ದರು.
ಶುಕ್ರವಾರ ಆರ್‌ಎಸ್‌ಎಸ್ ಪ್ರಚಾರ ವಿಭಾಗದ ಸಹ-ಪ್ರಭಾರಿ ನರೇಂದ್ರ ಠಾಕೂರ್, ಸಂಘವು ತನ್ನ ಎಲ್ಲಾ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ ಎಂದು ಹೇಳಿದ್ದಾರೆ.. ಸಂಘವು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಪ್ರೊಫೈಲ್ ಚಿತ್ರವನ್ನು ತನ್ನ ಸಾಂಸ್ಥಿಕ ಧ್ವಜದಿಂದ ರಾಷ್ಟ್ರಧ್ವಜಕ್ಕೆ ಬದಲಾಯಿಸಿದೆ.ಆರೆಸ್ಸೆಸ್ ಕಾರ್ಯಕರ್ತರು ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.