- Advertisement -
www.karnatakatv.net: ರಾಷ್ಟ್ರೀಯ: ಬಾಲಸೋರ್(ಒಡಿಶಾ)- ಇಲ್ಲಿನ ಕರಾವಳಿಯ ಸೇನಾ ನೆಲೆಯಲ್ಲಿ ಇಂದು ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ‘ಅಗ್ನಿ ಪ್ರೈಮ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. 2 ಸಾವಿರ ಕಿ.ಮೀ.ದೂರ ಕ್ರಮಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿಯನ್ನು ಒಡಿಶಾ ಕರಾವಳಿ ತೀರದಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಬೆಳಗ್ಗೆ 10.55ಕ್ಕೆ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ಡಿಆರ್ ಡಿಒ ಮೂಲಗಳು ತಿಳಿಸಿವೆ. ಅಣ್ವಸ್ತ್ರ ಹೊತ್ತೊಯ್ಯುವಂತಹ ಸಾಮರ್ಥ್ಯವಿರುವ ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ.
- Advertisement -