https://www.youtube.com/watch?v=ThqctS5YoXE
ಕರ್ನಾಟಕ ಟಿವಿ : ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನ್ ನ ಇಬ್ಬರು ಅಧಿಕಾರಿಗಳು ಗೂಢಾಚಾರಿಕೆ ಆರೋಪದ ಮೇಲೆ ಭಾರತದಿಂದ ಗಡಿಪಾರಾದ ಬೆನ್ನಲ್ಲೇ ಇದೀಗ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿರು ಭಾರತೀಯ ಪಾಕಿಸ್ತಾನ ಐಎಸ್ ಎ ನಿಂದ ಕಿರುಕುಳ ಶುರುವಾಗಿದೆ. ಈ ಸಂಬಂಧ ಪಟ್ಟಹಾಗೆ ಭಾರತ ತನ್ನ ಪ್ರತಿಭಟನೆಯನ್ನ ಸಲ್ಲಿಸಿದ್ದು ಭಾರತೀಯ ಹೈಕಮಿಷನ್ ಅಧಿಕಾರಿಗಳ ಹಾಗೂ ಕುಟುಂಬದವರ ರಕ್ಷಣೆ ಪಾಕಿಸ್ತಾನದ ಹೊಣೆ ಎಂದು ಹೇಳಿದೆ. ಯಾವುದೇ ಕಾರಣಕ್ಕೂ ನಮ್ಮ ಪ್ರಜೆಗಳಿಗೆ ತೊಂದರೆಯಾದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ. ಇನ್ನು ಪಾಕಿಸ್ತಾನ ಐಎಸ್ ಐ ಅಂದ್ರೆ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರಲ್ಲ.. ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ ಅಂತ.. ಇಸ್ಲಾಮಿಕ್ ಉಗ್ರರನ್ನ ಐಎಸ್ ಐಎಸ್ ಅಂತ ಕರೀತಾರೆ. ಇದು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ ಇದರ ಪೂರ್ತಿ ಹೆಸರು..
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ,





