www.karnatakatv.net: ಹವಾಮಾನ ಬದಲಾವಣೆ ಎದುರಿಸುವಲ್ಲಿ ಭಾರತ ಪ್ರಮುಖ ಪಾಲುದಾರ ಎಂದು ಯುರೋಪಿನ್ ಆಯೋಗದ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಬಣ್ಣಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಸ್ಥಿರ ಅಭಿವೃದ್ಧಿ ಸಾಧಿಸುವ ಯಾವುದೇ ಪ್ರಯತ್ನವನ್ನು ಭಾರತ ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
ಸೋಮವಾರ ನಡೆದ COP26 ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಲೇಯನ್ ರನ್ನು ಭೇಟಿಯಾದರು. ಹಾಗೇಯೇ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಲೇಯೆನ್ ಶುಕ್ರವಾರ ರೋಮ್‌ನಲ್ಲಿ ಜಿ- 20 ಶೃಂಗಸಭೆ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು. “ಪ್ರಧಾನಿ ನರೇಂದ್ರ ಮೋದಿ COP26 ಜೊತೆಗೆ ನಿಕಟ ಸಹಯೋಗವನ್ನು ಮುಂದುವರಿಸುವುದು ಒಳ್ಳೆಯದು. ಜಾಗತಿಕ ಹವಾಮಾನದ ವಿರುದ್ಧ ಹೋರಾಡುವಲ್ಲಿ ಭಾರತವು ಪ್ರಮುಖ ಪಾಲುದಾರ. ಪ್ರಧಾನಿ ಮೋದಿ ನಾಯಕತ್ವವನ್ನು ನಾನು ಬಹಳವಾಗಿ ಪ್ರಶಂಸಿಸುತ್ತೇನೆ” ಎಂದು ಲೇಯೆನ್ ಸೋಮವಾರದಂದು ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವೀಟ್ ಮಾಡಿರುವ ಮೋದಿ, ರೋಮ್‌ನಲ್ಲಿ ಸಂವಾದದ ನಂತರ ಗ್ಲಾಸ್ಗೋದಲ್ಲಿ ನಿಮ್ಮನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ನಿನ್ನೆ ನನ್ನ ಭಾಷಣದಲ್ಲಿ ನಾನು ಹೈಲೈಟ್ ಮಾಡಿದಂತೆ, ಭಾರತವು ಸುಸ್ಥಿರ ಅಭಿವೃದ್ಧಿಗಾಗಿ ಯಾವುದೇ ಪ್ರಯತ್ನವನ್ನು ಸದಾ ಬಲಪಡಿಸುತ್ತದೆ ಎಂದಿದ್ದಾರೆ.