ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯ, ರೋಚಕ ಮುಕ್ತಾಯ ಕಂಡಿದೆ. ಕ್ರಿಕೆಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆಗಳಿಗೆ ಸಾಕ್ಷಿಯಾಗಿದೆ. ಭಾರತದ 9ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬದ್ಧವೈರಿ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ, ಟ್ರೋಫಿ ಸ್ವೀಕರಿಸಲು ಭಾರತದ ಆಟಗಾರರು ನಿರಾಕರಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ, ಪಾಕ್‌ನ ಆಂತರಿಕ ವ್ಯವಹಾರಗಳ ಸಚಿವರೂ ಆಗಿರುವ, ಏಷ್ಯಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹಿನ್ ನಖ್ವಿಯಿಂದ, ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ರು. ಮೊಹ್ಸಿನ್ ನಖ್ವಿ ಹಾಗೂ ಇನ್ನಿತರ ಗಣ್ಯರು ವೇದಿಕೆ ಮೇಲೆ ಬಂದು ಕಾಯುತ್ತಾ ನಿಂತಿದ್ದರು. ಆದರೆ. ಭಾರತೀಯ ಆಟಗಾರರು ವೇದಿಕೆಯಿಂದ 15ರಿಂದ 20 ಅಡಿ ದೂರದಲ್ಲಿ ನಿಂತು ಪ್ರತಿರೋಧ ವ್ಯಕ್ತಪಡಿಸಿದರು. ಕೊನೆಗೆ ಪಂದ್ಯದ ಮುಗಿದ 55 ನಿಮಿಷಗಳ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ಆರಂಭಗೊಂಡಿತ್ತು. ಆದರೆ, ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲಿಲ್ಲ. ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು, ಇತರೆ ಗಣ್ಯರಿಂದ ಸ್ವೀಕರಿಸಿದ್ರು.
ಇನ್ನು, ಪಾಕ್ ಆಟಗಾರರು ಡ್ರೆಸ್ಸಿಂಗ್ ರೂಮ್ ಬಿಟ್ಟು ಹೊರಗೆ ಬರಲೇ ಇಲ್ಲ. ಸ್ವಲ್ಪ ಹೊತ್ತಿನ ಬಳಿಕ ರನ್ನರ್ ಅಪ್ ಬಹುಮಾನ ಪಡೆಯಲು, ವೇದಿಕೆ ಮೇಲೆ ಕರೆತರಲಾಯ್ತು. ಬಾಂಗ್ಲಾ ಕ್ರಿಕೆಟ್ ಮುಖ್ಯಸ್ಥರಿಂದ ಬಹುಮಾನ ಸ್ವೀಕರಿಸಿದ್ರು. ನಾಕಯ ಸಲ್ಮಾನ್ ಚೆಕ್ ಸ್ವೀಕರಿಸಿದ ಬಳಿಕ ಅದನ್ನು ವೇದಿಕೆ ಮೇಲೆಯೇ ಎಸೆದು ಹೊರ ನಡೆದ್ರು. ಈ ಮಧ್ಯೆ ಭಾರತೀಯ ಅಭಿಮಾನಿಗಳು, ಮೋದಿ ಮೋದಿ ಎಂದು ಕೂಗುತ್ತಾ, ಪಾಕ್ ಆಟಗಾರರನ್ನು ಕಿಚಾಯಿಸಿದ್ರು.
ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬರುತ್ತಿದ್ದಂತೆ, ಟ್ರೋಫಿಯನ್ನು ವೇದಿಕೆಯಿಂದ ಡ್ರೆಸ್ಸಿಂಗ್ ರೂಮ್‌ಗೆ ತೆಗೆದುಕೊಂಡು ಹೋಗಲಾಯ್ತು.
ಮತ್ತೊಂದೆಡೆ, ಭಾರತ ತಂಡ ಪಾಕಿಸ್ತಾವನ್ನು ಬಗ್ಗು ಬಡಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಗೆಲುವನ್ನು ಆಟದ ಕ್ಷೇತ್ರದಲ್ಲಿ ಆಪರೇಷನ್ ಸಿಂಧೂರ್ ಎಂದು ಕರೆದಿದ್ದಾರೆ. ಗೇಮ್ ಫೀಲ್ಡ್‌ನಲ್ಲೂ ಆಪರೇಷನ್ ಸಿಂಧೂರ್. ಫಲಿತಾಂಶ ಎರಡರಲ್ಲೂ ಒಂದೇ . ಭಾರತಕ್ಕೆ ಗೆಲುವು ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.