Monday, October 6, 2025

Latest Posts

ಚೀನಾ ನಂಬಂಗಿಲ್ಲ, ಭಾರತೀಯ ಏನ್ ಸೇನೆ ಮಾಡ್ತಿದೆ ಗೊತ್ತಾ..?

- Advertisement -

www.karnatakatv.net : ಇನ್ನು ಭಾರತ ಹಾಗೂ ಚೀನಾ ನಡುವೆ ರಾಜತಾಂತ್ರಿಕ ಹಾಗೂ ಮಿಲಿಟರಿ ಮಾತುಕತೆಯ ನಂತರ ಪರಿಸ್ಥಿತಿ ತಿಳಿಯಾಗ್ತಿದೆ. ಗಾಲ್ವಾನ್ ಕಣಿವೆ, ಗೊಗ್ರಾ ಸೇರಿದಂತೆ ಎರಡ್ಮೂರು ಪ್ರದೇಶದಲ್ಲಿ ಮುಖಾಮುಖಿಯಾಗಿದ್ದ ಪ್ರದೇಶದಿಂದು ಚೀನಾ ಸೇನೆ 2 ಕಿಲೋಮೀಟರ್ ನಷ್ಟು ಹಿಂದೆ ಸರಿದಿದೆ. ಈ ನಡುವೆ ಚೀನಾ ಸದಾ ಭಾರತದ ಜೊತೆ ಶಾಂತಿಯನ್ನ ಬಯಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿದ್ದಾರೆ..

ಈ ನಡುವೆ ಚೀನಾ ಸೇನೆ ಹಿಂದಕ್ಕೆ ಸರಿದಂತೆ ಕಂಡರು ಅವರ ಕುತಂತ್ರವನ್ನ ಅಲ್ಲಗೆಳೆಯುವಂತಿಲ್ಲ.. ಹೀಗಾಗಿ ಭಾರತೀಯ ಸೇನೆ ರಾತ್ರಿ ವೇಳೆ ಮಿಗ್ 29, ಅಪಾಚೆ ಹೆಲಿಕಾಪ್ಟರ್ ಗಳ ಮೂಲಕ ಗಡಿಯಲ್ಲಿ ರಾತ್ರಿ ಗಸ್ತು ಸಹ ನಡೆಸಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.. ಜಗತ್ತಿನಲ್ಲಿ ನಂಬಿಕಸ್ಥವಲ್ಲದ ದೇಶಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತೆ. ಹೀಗಾಗಿ ರಾತ್ರಿ ಗಸ್ತಿಗೆ ಭಾರತೀಯ ಸೇನೆ ಮುಂದಾಗಿದೆ.

ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ,

ನೀವೂ ಚೀನಾ ಆ್ಯಪ್ ಗಳನ್ನ  ಬಹಿಷ್ಕಾರ ಮಾಡಿದ್ದೀರಾ..? ಕಾಮೆಂಟ್ ಮಾಡಿ

- Advertisement -

Latest Posts

Don't Miss