ಕೃಷ್ಣಾರಾಜ ಪುರಂ : ನಗರದಲ್ಲಿ ಕರ್ನಾಟಕ ಬಂದ್ ಗೆ ಉತ್ತಮ ಬೆಂಬಲ ದೊರೆತಿದ್ದು ಮಾರುಕಟ್ಟೆ ಯಲ್ಲಿ ಹೂ ಮಳಿಗೆ ಹೊರತುಪಡಿಸಿ ಬಹುತೇಕ ಅಂಗಡಿಗಳು ಬಂದ್ ಮಾಡಿ ವ್ಯಾಪಾರಸ್ತರು ಬಂದ್ ಗೆ ಬೆಂಬಲ ಸೂಚಿಸಿದರು. ರಸ್ತೆಯಲ್ಲಿ ಬೆರಳೆಣಿಕೆಯಷ್ಟು ವಾಹನಗಳ ಸಂಚಾರ ಕಂಡುಬಂತು ಇನ್ನುಳಿದವರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.
ಭಾರತೀಯರ ಸೇವಾ ಸಮಿತಿ(ಬಿಎಸ್ಎಸ್), ಕರವೇ ಸೇರಿದಂತೆ ಹಲವು ಸಂಘಟನೆಗಳ ಒಟ್ಟಾಗಿ ಪ್ರತಿಭಟನೆ ನಡೆಸಿದರು. ಡಾ. ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನದ ಅರ್ಟಿಕಲ್ 262 ಪರ ದನಿ ಎತ್ತುತ್ತಿರುವ ಬಿಎಸ್ಎಸ್ ಸಂಘ ಅರ್ಟಿಕಲ್ 262 ಪ್ರಕಾರ ಅಂತರ್ ರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೆ ನ್ಯಾಯಾಲಯಗಳಿಗೆ ತೀರ್ಪು ನೀಡುವ ಅಧಿಕಾರವಿಲ್ಲವೆಂದು ಹೋರಾಟ
ಬಿಎಸ್ಎಸ್ ರಾಜ್ಯಾದ್ಯಕ್ಷ ಡಾ. ರಾಮಚಂದ್ರ (ಹೂಡಿ ಚಿನ್ನಿ) ರವರಿಂದ ಸಂವಿಧಾನದ ಪುಸ್ತಕ ಹಿಡಿದು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಬಂದ್ ಗೆ ಸಿಕ್ಕಿಲ್ಲ ಬೆಂಬಲ; ಯಥಾಸ್ಥಿತಿ ಕಾರ್ಯಚರಣೆ..!