ರಾಷ್ಟ್ರೀಯ ಸುದ್ದಿ: ಮನುಷ್ಯನ ಜೀವನ ಯಾವ ಸಮಯದಲ್ಲಿ ಬದಲಾಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ ಆದರೆ ನಮ್ಮ ಕೆಲಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಕೆಲಸದಲ್ಲಿನ ಏಕಾಗ್ರತೆ ಮತ್ತು ತಾಳ್ಮೆ ನಮ್ಮಲ್ಲಿದ್ದರೆ ಒಂದಲ್ಲಾ ಒಂದು ದಿನ ನಾವು ಸಾಧನೆಯ ಗೆರೆಯನ್ನು ಮುಟ್ಟುವ ಕಾಲ ಬಂದೆ ಬರುತ್ತದೆ. ಈಗ ಇಂತಹುದೆ ಒಂದು ಸಾಧನೆ ಇಲ್ಲೊಬ್ಬರು ಮಾಡಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ಬಿಲ್ಡರ್ ಅಂತೆ ಈ ಕುಶಾಲ್ ಪಾಲ್ ಸಿಂಗ್. ಇವರು ೧೯೪೬ ರಲ್ಲಿ ತಮ್ಮ ಮಾವ ಸ್ಥಾಪಿಸಿದ ಡಿಎಲ್ಎಫ್ ಲಿಮಿಟೆಡ್ ಗೆ ಸೇರಿದರು. ನಂತರ, ಸಿಂಗ್ ರೈತರಿಂದ ಭೂಮಿಯನ್ನು ಖರೀದಿಸಿದರು ಮತ್ತು ಅದನ್ನು ದೆಹಲಿ ನಗರದ ಹೊರ ಗಡಿಯಲ್ಲಿ ಪ್ರಸ್ತುತ ಗುರ್‌ಗಾಂವ್ ನಲ್ಲಿರುವ ಡಿಎಲ್ಎಫ್ ಸಿಟಿಯನ್ನು ನಿರ್ಮಿಸಲು ಬಳಸಿದರು. ಇಂದು ಡಿಎಲ್ಎಫ್, ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ಅದರ ಅಧ್ಯಕ್ಷರು ಅವರ ಮಗ ರಾಜೀವ್, ಇದು ಭಾರತದ ಅತಿದೊಡ್ಡ ಸರ‍್ವಜನಿಕವಾಗಿ ವ್ಯಾಪಾರ ಮಾಡುವ ರಿಯಲ್ ಎಸ್ಟೇಟ್ ಕಂಪನಿಯಾಗಿದೆ.
ಬ್ಲೂಮ್ರ‍್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಡಿಎಲ್ಎಫ್ ಸಿಟಿಯನ್ನು ರಚಿಸಿದ ಕೆ ಪಿ ಸಿಂಗ್ ಪ್ರಸ್ತುತ ಸುಮಾರು ೧೧.೧ ಬಿಲಿಯನ್ ಡಾಲರ್ ಎಂದರೆ ೯೦,೦೦೦ ಕೋಟಿ ರೂಪಾಯಿ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಗುರುಗಾಂವ್ ನಲ್ಲಿ ಹಲವಾರು ಭೂಕಂಪ ನಿರೋಧಕ ಕೆಲಸದ ಸ್ಥಳಗಳು, ನಿವಾಸಗಳು, ಮಾಲ್ ಗಳು ಮತ್ತು ಮನರಂಜನಾ ಸೌಲಭ್ಯಗಳನ್ನು ನರ‍್ಮಿಸುವುದು ಸಿಂಗ್ ಅವರ ಕಂಪನಿಯ ಕೆಲಸವಾಗಿದೆ.
ಸ್ನೇಹಿತರೆ ಮಅಡುವ ಕೆಲಸದಲ್ಲಿ ಶ್ರದ್ದೆ ಇದ್ದರೆ ನಾವು ಎಂತಹುದನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇವರೊಬ್ಬ ಸಾಕ್ಷಿ.
Glenn maxwell : ಆಸ್ಟ್ರೇಲಿಯಾದ ಕ್ರಿಕೆಟಿಗನ ಪತ್ನಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ…!
Dollfin : ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸ್ ದಾಖಲು..!