www.karnatakatv.net : ಇಂಡಿಯನ್ ಸ್ಪೇಸ್ ಅಸೋಷಿಯೇಷನ್ ಐಎಸ್ಪಿಎ ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಹೌದು.. ಇಂದು ಭಾರತಿಯ ಬಾಹ್ಯಕಾಶ ಸಂಘವನ್ನು ಉದ್ಘಾಟಿಸಿದ್ರು. ನಂತರ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಾಗಿ ಸಂಘ ಬದ್ಧತೆ ಪ್ರದರ್ಶಿಸುವುದನ್ನು ಒತ್ತಿ ಹೇಳಿದ್ದಲ್ಲದೇ, ಇಂಥ ದೃಢ ನಿರ್ಧಾರಗಳನ್ನು ಕೈಗೊಳ್ಳುವಂತಹ ಸರ್ಕಾರವನ್ನು ದೇಶ ಹಿಂದೆAದೂ ಕಂಡಿರಲಿಲ್ಲ ಎಂದು ತಿಳಿಸಿದ್ರು.
‘ಅಗತ್ಯವಿಲ್ಲದ ಕ್ಷೇತ್ರಗಳನ್ನು ಖಾಸಗಿ ಉದ್ಯಮಿಗಳಿಗೆ ತೆರೆದಿಡಬೇಕು’ ಎನ್ನುವುದು ಸಾರ್ವಜನಿಕ ವಲಯದ ಬಗ್ಗೆ ಸರ್ಕಾರದ ನೀತಿಯಾಗಿದೆ ಎಂದು ಹೇಳಿದರು. ದೇಶದಲ್ಲಿನ ಬಾಹ್ಯಾಕಾಶ ಕ್ಷೇತ್ರದಿಂದ ರಕ್ಷಣಾ ಕ್ಷೇತ್ರವರೆಗಿನ ಹಲವು ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತಿರುವುದನ್ನು ಉಲ್ಲೇಖಿಸಿದ ಮೋದಿ, ‘ನಮ್ಮ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿ ಹಾಗೂ ವಿವಿಧ ಪಾಲುದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ’ ಎಂದು ಹೇಳಿದರು. ಹಾಗೇ ಭಾರತವು ಬೃಹತ್ ಸುಧಾರಣೆಯತ್ತ ಗಮನಹರಿಸಿದೆ ಆತ್ಮನಿರ್ಭರ ಭಾರತ ನಿರ್ಮಾಣದ ಗುರಿ ಹೊಂದಿರುವ ರಾಷ್ಟ್ರದ ದೂರದೃಷ್ಟಿ ಸ್ಪಷ್ಟವಾಗಿದೆ ಎಂದು ಮೋದಿ ಹೇಳಿದರು.