www.karnatakatv.net: ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನವನ್ನು 2022ಕ್ಕೆ ಮುಂದೂಡಲಾಗಿದೆ. 2021ರ ಡಿಸೆಂಬರ್‌ನಲ್ಲಿ ಗಗನಯಾನಕ್ಕೆ ಚಾಲನೆ ದೊರೆಯಬೇಕಿತ್ತು, ಆದರೆ 2022ರ ಜೂನ್ ಒಳಗೆ ಗಗನಯಾನ ಆರಂಭಗೊಳ್ಳಲಿದೆ ಎಂದು ಇಸ್ರೋ ಚೇರ್‌ಮೆನ್ ಕೆ ಶಿವನ್ ತಿಳಿಸಿದ್ದಾರೆ.

ಈ ಯೋಜನೆಗೆ 2020ರ ಡಿಸೆಂಬರ್ ನಲ್ಲೇ ಚಾಲನೆ ನೀಡಬೇಕಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಈ ಯೋಜನೆ ಒಂದು ವರ್ಷ ಮುಂದೂಡಲಾಗಿತ್ತು, ಇದೀಗ ಅದೇ ಕಾರಣ ನೀಡಿ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಗಗನಯಾನವನ್ನು ಮುಂದೂಡಲಾಗಿದೆ.

ಗಗನಯಾನ ಯೋಜನೆಗೆ 10,000 ಕೋಟಿ ರೂಗಳನ್ನು ಮೀಸಲಿಡಲಾಗಿದ್ದು, 2022ರ ವೇಳೆಗೆ ಭಾರತದ ಮೂರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಧ್ಯಯನ ನಡೆಸಲಾಗುತ್ತದೆ .
ಇನ್ನು 2022ಕ್ಕೆ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದು, ಈ ಮಹತ್ವದ ವರ್ಷದಲ್ಲೇ ಭಾರತದ ಮಹತ್ವಾಕಾಂಕ್ಷಿ ಗಗನಯಾನ ಕೂಡ ಆರಂಭವಾಗಲಿದೆ. ಈಗಾಗಲೇ ಇದೇ ವಿಚಾರವಾಗಿ ಇಸ್ರೋ ಕೂಡ ಕಾರ್ಯನಿರತವಾಗಿದೆ.




