Friday, July 4, 2025

Latest Posts

ವೃದ್ಧನ ಪಾಲಿಗೆ ಬೆಳಕಾದ ಸಾಮಾಜಿಕ ಜಾಲತಾಣ: ಬಾಬಾ ಕಾ ಡಾಬಾ ಹೊಟೇಲ್‌ನಲ್ಲೀಗ ಜನಸಾಗರ..!

- Advertisement -

ಸಾಮಾಜಿಕ ಜಾಲತಾಣ ಒಂದು ರೀತಿಯಲ್ಲಿ ಉತ್ತಮವಾದ್ರೆ ಇನ್ನೊಂದು ರೀತಿಯಲ್ಲಿ ಅಪಾಯಕಾರಿ. ಸಾಮಾಜಿಕ ಜಾಲತಾಣದ ಮೂಲಕ ನಾವು ನಮ್ಮ ದೂರದ ಸಂಬಂಧಿಕರನ್ನ, ಗೆಳೆಯ ಗೆಳತಿಯರನ್ನ ತಲುಪುತ್ತೇವೆ. ಒಂದು ದೇಶದಲ್ಲಿ ಕುಳಿತು ಇನ್ನೊಂದು ದೇಶದಲ್ಲಿರುವ ಸಂಬಂಧಿಕರ ಬಳಿ ವೀಡಿಯೋ ಕಾಲ್ ಮೂಲಕ ಮಾತನಾಡುತ್ತೇವೆ.

ಇನ್ನೊಂದು ಬದಿಯಿಂದ ಸಾಮಾಜಿಕ ಜಾಲತಾಣವನ್ನ ನೋಡುವುದಾದರೆ, ಅಶ್ಲೀಲ ಫೋಟೋಗಳನ್ನ ಸಹ ನಾವು ಇಲ್ಲಿ ಕಾಣುತ್ತೇವೆ. ಇದರಿಂದ ಸಮಾಜಕ್ಕೆ ಬೇಡದ ಸಂದೇಶ ತಲುಪಿ ವಿಕೃತ ಮನಸ್ಸು ಜಾಗೃತವಾಗಲು ಅನುವು ಮಾಡಿಕೊಟ್ಟಂತಾಗುತ್ತದೆ. ಒಟ್ಟಿನಲ್ಲಿ ನಾವು ನಮ್ಮ ಹದ್ದು ಬಸ್ತಿನಲ್ಲಿದ್ದರೆ, ಸಾಮಾಜಿಕ ಜಾಲತಾಣ ಸಹಕಾರಿಯಾಗುತ್ತದೆ.

ಈ ಸಾಮಾಜಿಕ ಜಾಲತಾಣದ ಬಗ್ಗೆ ನಾವು ಹೇಳಹೊರಟಿರುವ ವಿಷಯ ಅಂದ್ರೆ, ಕೊರೊನಾ ಮಹಾಮಾರಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳಂತೂ ದಿನದ ಖರ್ಚಿಗೆ ದುಡ್ಡು ಸಿಕ್ಕರೆ ಸಾಕೆಂಬ ಪರಿಸ್ಥಿತಿಯಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿದ್ದ ವದ್ಧನೋರ್ವ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದ್ದರು.

80 ವರ್ಷದ ಈ ವೃದ್ಧ ದಂಪತಿ ದೆಹಲಿಯಲ್ಲಿ ಬಾಬಾ ಕಾ ಡಾಬಾ ಎಂಬ ಹೆಸರಿನ ಚಿಕ್ಕ ಹೊಟೇಲ್ ನಡೆಸುತ್ತಿದ್ದರು. ಕೊರೊನಾ ನಂತರ ಹೊಟೇಲ್‌ಗೆ ಬರುವ ಗ್ರಾಹಕರ ಸಂಖ್ಯೆ ಇಳಿಕೆಯಾಗಿದ್ದು, ವೃದ್ಧ ದಂಪತಿ ಕಣ್ಣೀರಿಟ್ಟಿದ್ದಾರೆ. ಈ ವೀಡಿಯೋವನ್ನ ಟ್ವಿಟರ್‌ನಲ್ಲಿ ಓರ್ವರು ಹರಿಬಿಟ್ಟಿದ್ದು, ಅದು ಶೇರ್ ಆಗಿ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಇದನ್ನ ಬಾಲಿವುಡ್ ನಟ ನಟಿಯರಾದ, ರವೀನಾ ಟಂಡನ್, ರಣ್ದೀಪ್ ಹೂಡಾ, ಸುನೀಲ್ ಶೆಟ್ಟಿ ಕೂಡ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಮೂಕ ದೆಹಲಿ ಜನರಿಗೆ ಸಂದೇಶ ರವಾನೆಯಾಗಿದ್ದು, ಇದೀಗ ವೃದ್ಧ ದಂಪತಿಯ ಹೊಟೇಲ್‌ಗೆ ಹಲವಾರು ಜನ ಊಟಕ್ಕಾಗಿ ಬರುತ್ತಿದ್ದಾರೆ.

- Advertisement -

Latest Posts

Don't Miss