Sunday, September 8, 2024

Latest Posts

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನ ಆರಾಧಿಸಿ.. ಈಕೆ ಯಾರು ಗೊತ್ತಾ..?

- Advertisement -

ನವರಾತ್ರಿಯ ಮೂರನೇ ದಿನ ಶುರುವಾಗಿದೆ. ಚಂದ್ರಘಂಟಾ ಮಾತೆಯ ಪೂಜೆಯನ್ನ ಇಂದು ಮಾಡಲಾಗುತ್ತದೆ. ಚಂದ್ರಘಂಟಾ ದೇವಿ ದುರ್ಗೆಯ ಪ್ರತಿರೂಪವಾಗಿದ್ದಾಳೆ. ಈಕೆಗೆ ಚಂದ್ರಿಕಾ, ರಣಚಂಡಿ ಎಂಬ ಹೆಸರು ಕೂಡಾ ಇದೆ. ಈಕೆ ಚಂದ್ರನಷ್ಟು ಕಾಂತಿಯುತಳಾಗಿರುವುದರಿಂದ ಈಕೆಯನ್ನ ಚಂದ್ರಘಂಟಾ ಎಂದು ಹೇಳಲಾಗುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಸಿಂಹವಾಹಿನಿಯಾಗಿರುವ ಚಂದ್ರಘಂಟಾ ದೇವಿ ಹತ್ತು ಕೈಯನ್ನು ಹೊಂದಿದ್ದು, ಎಂಟು ಕೈಯಲ್ಲಿ ಒಂದೊಂದು ಆಯುಧವನ್ನ ಹಿಡಿದಿದ್ದಾರೆ. ಬಲಭಾಗದ ಮೊದಲ ಕೈಯಲ್ಲಿ ಕಮಲ, ಎರಡನೇ ಕೈಯಲ್ಲಿ ಬಾಣ, ಮೂರನೇ ಕೈಯಲ್ಲಿ ಬಿಲ್ಲು, ನಾಲ್ಕನೇ ಕೈಯಲ್ಲಿ ಆಶೀರ್ವದಿಸುತ್ತಾಳೆ. ಮತ್ತು ಐದನೇ ಕೈಯಲ್ಲಿ ಜಪಮಾಲೆ ಹಿಡಿದಿದ್ದಾಳೆ. ಎಡಭಾಗದ ಮೊದಲ ಕೈಯಲ್ಲಿ ತ್ರಿಶೂಲ, ಎರಡನೇಯ ಕೈಯಲ್ಲಿ ಗಧೆ , ಮೂರನೇಯ ಕೈಯಲ್ಲಿ ಖಡ್ಗ, ನಾಲ್ಕನೇಯ ಕೈಯನ್ನ ಯೋಗ ಮುದ್ರೆಯ ರೂಪದಲ್ಲಿ, ಐದನೇಯ ಕೈಯಲ್ಲಿ ಕಮಂಡಲವನ್ನ ಹಿಡಿದಿದ್ದಾಳೆ.

ಇನ್ನು ದುರ್ಗೆ, ಪಾರ್ವತಿ, ಚಂದ್ರಘಂಟತಿ ಎಲ್ಲರೂ ಒಂದೇ ಆಗಿದ್ದಾರೆ. ಶಿವ ಪಾರ್ವತಿಯ ವಿವಾಹ ಸಂದರ್ಭದಲ್ಲಿ ಶಿವ ತನ್ನ ಗಣಗಳೊಂದಿಗೆ ಪಾರ್ವತಿ ಇರುವಲ್ಲಿಗೆ ಬರುತ್ತಾನೆ. ಶಿವನ ಅವತಾರವನ್ನ ಕಂಡ ಪಾರ್ವತಿ ತಲೆತಿರುಗಿ ಬೀಳುತ್ತಾಳೆ. ಈ ವೇಳೆ ಪಾರ್ವತಿಯ ಪ್ರತಿರೂಪವಾಗಿ ಸಿಂಹರೂಪಿಣಿ, ಆಯುಧಯುತ ಚಂದ್ರಘಂಟಾ ದೇವಿ ಬಂದು, ಶಿವನು ವಿಕಾರ ರೂಪವನ್ನ ತ್ಯಜಿಸಿ, ಸುಂದರ ರೂಪನಾಗಿ ಬರುವಂತೆ ಮನವಿ ಮಾಡುತ್ತಾಳೆ. ಆಗ ಶಿವ ತನ್ನ ಸುಂದರ ರೂಪದೊಂದಿಗೆ ಬಂದು, ಪಾರ್ವತಿಯನ್ನು ವರಿಸುತ್ತಾನೆ.
ಚಂದ್ರಘಂಟಾ ದೇವಿಯನ್ನ ಆರಾಧಿಸಿದರೆ, ಹಣದ ಸಮಸ್ಯೆ, ಧನ- ಧಾನ್ಯ ಕೊರತೆ, ಕಲಹವಾಗುವುದು ಇತ್ಯಾದಿ ಸಮಸ್ಯೆ ಬಗೆಹರಿಯುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss