ಕೃಷ್ಣನಿಗೆ ನಾಮಕರಣ ಮಾಡಿದವರು ಯಾರು..?

ಮಕ್ಕಳಿಗೆ ಮಾಡುವ ಸಂಸ್ಕಾರಗಳಲ್ಲಿ ನಾಮಕರಣ ಸಂಸ್ಕಾರ ಕೂಡ ಒಂದು. ತಂದೆ ತಾಯಿಯ ನೇತೃತ್ವದಲ್ಲಿ ಮಕ್ಕಳ ನಾಮಕರಣ ನಡೆಯುತ್ತದೆ. ಆದ್ರೆ ಶ್ರೀಕೃಷ್ಣನ ನಾಮಕರಣ ನಡೆಯುವಾಗ ಆತನ ತಂದೆ ತಾಯಿ ಆತನ ಬಳಿ ಇರುವುದಿಲ್ಲ. ಇದಕ್ಕೆ ಕಾರಣ, ಆತನ ತಂದೆ ತಾಯಿ ಸೆರೆವಾಸದಲ್ಲಿದ್ದು, ವಸುದೇವ ಶ್ರೀಕೃಷ್ಣನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಹಾಗಾದ್ರೆ ಶ್ರೀಕೃಷ್ಣನ ನಾಮಕರಣ ಎಲ್ಲಿ ನಡೆಯಿತು..? ಹೇಗೆ ನಡೆಯಿತು..? ಕೃಷ್ಣನಿಗೆ ನಾಮಕರಣ ಮಾಡಿದವರು ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ನಿನ್ನ ತಂಗಿಯ ಸಂತಾನದಿಂದಲೇ ನಿನ್ನ ನಿರ್ಣಾಮವಾಗುವುದು ಎಂದು ಭವಿಷ್ಯ ಕೇಳಿದ್ದ ಕಂಸ, ತಂಗಿಯ ಮದುವೆಯಾದ ಬಳಿಕವೇ ದೇವಕಿ ಮತ್ತು ವಸುದೇವನನ್ನು ಸೆರೆವಾಸಕ್ಕೆ ಕಳುಹಿಸುತ್ತಾನೆ. ಹೀಗೆ ದೇವಕಿಯ 7 ಸಂತಾನವನ್ನು ಹುಟ್ಟಿದ ತಕ್ಷಣವೇ ಕೊಂದು ಹಾಕುವ ಕಂಸನಿಗೆ ಎಂಟನೇ ಸಂತಾನವಾದ ಕೃಷ್ಣನನ್ನು ಹಿಡಿಯಲು ಆಗುವುದಿಲ್ಲ. ಏಕೆಂದರೆ 7 ಸಂತಾನವನ್ನು ಕಳೆದುಕೊಂಡಿದ್ದ ದೇವಕಿ ಮತ್ತು ವಸುದೇವ ತಮ್ಮ ಎಂಟನೇ ಸಂತಾನವನ್ನಾದರೂ ಉಳಿಸಬೇಕೆಂದು ನಿರ್ಧರಿಸುತ್ತಾರೆ.

ಹಾಗಾಗಿ ವಸುದೇವ ಕೃಷ್ಣ ಹುಟ್ಟಿದ ತಕ್ಷಣವೇ ಮಥುರಾದಿಂದ ಯಮುನಾ ನದಿಯ ಮೂಲಕ ಗೋಕುಲಕ್ಕೆ ಹೋಗಿ, ಆ ಮಗು ನಂದನಿಗೆ ಸೇರುವಂತೆ ಮಾಡುತ್ತಾನೆ. ಹಾಗಾಗಿ ಕೃಷ್ಣ ಕಂಸನ ಕೈಗೆ ಸಿಗುವುದಿಲ್ಲ. ಕಂಸ ತನ್ನ ಸೈನಿಕರನ್ನು ಗೋಕುಲಕ್ಕೆ ಕಳುಹಿಸಿ ಕೃಷ್ಣನನ್ನು ಹುಡುಕಲು ಬಿಟ್ಟಿದ್ದ. ಈ ಕಾರಣಕ್ಕೆ ಗೋಕುಲದಲ್ಲಿ ಹಿಂಸಾಚಾರ ಹೆಚ್ಚಾಗಿತ್ತು.

ಈ ಸಮಯದಲ್ಲಿ ನಂದನ ಮನೆಗೆ ಗರ್ಗಾಚಾರ್ಯರು ಬರುತ್ತಾರೆ. ಆಗ ನಂದ ಮತ್ತು ಯಶೋಧೇ ತನ್ನ ಮಗುವಿಗೆ ಮತ್ತು ಸೋದರಳಿಯನಿಗೆ ನಾಮಕರಣ ಮಾಡಿಕೊಳ್ಳುವಂತೆ ಕೇಳುತ್ತಾರೆ. ಆಗ ಆ ಇಬ್ಬರು ಮಕ್ಕಳನ್ನು ಕರೆದುಕೊಂಡು ಕೊಟ್ಟಿಗೆಗೆ ಬರುವಂತೆ ನಂದ ಮತ್ತು ಯಶೋಧೆಯಲ್ಲಿ ಗರ್ಗಾಚಾರ್ಯರು ಹೇಳುತ್ತಾರೆ.

ನಂದ ಮತ್ತು ಯಶೋಧೆ ದನದ ಹಟ್ಟಿಗೆ ರಹಸ್ಯವಾಗಿ ತಮ್ಮ ಮಕ್ಕಳನ್ನ ಕರೆತರುತ್ತಾರೆ. ಹಿರಿಯನಾದ ಸೋದರಳಿಯನಿಗೆ ಮೊದಲು ನಾಮಕರಣವಾಗುತ್ತದೆ. ಬಲಶಾಲಿಯಾದ, ಎಲ್ಲರಿಗೂ ಪ್ರೀತಿ ಹಂಚುವ ಈ ಬಾಲಕನ ಹೆಸರು ಬಲರಾಮ ಎಂದು ನಾಮಕರಣ ಮಾಡುತ್ತಾರೆ. ನಂತರ ಕೃಷ್ಣನ ಲೀಲೆಗಳನ್ನು ಮೊದಲೇ ಬಲ್ಲವರಾದ ಗರ್ಗಾಚಾರ್ಯರು ಕೃಷ್ಣನ ವರ್ಣ ಕಪ್ಪಾಗಿದ್ದ ಕಾರಣಕ್ಕೆ ಶ್ರೀಕೃಷ್ಣನೆಂದು ನಾಮಕರಣ ಮಾಡುತ್ತಾರೆ. ಅಲ್ಲದೇ ಈತ ಭವಿಷ್ಯದಲ್ಲಿ ತನ್ನ ಚಮತ್ಕಾರಗಳಿಂದ ಪ್ರಸಿದ್ಧಿ ಗಳಿಸುವನೆಂದು ಹೇಳುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author