ಕರ್ನಾಟಕ ಟಿವಿಗೆ ಸ್ವಾಗತ. ಮಂತ್ರಾಲಯಾಧೀಶ, ಕಲಿಯುಗದ ಕಲ್ಪವೃಕ್ಷ, ಗುರು ಸಾರ್ವಭೌಮರಾದ ರಾಯ ರಾಘವೇಂದ್ರರು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಇದರಂತೆ ರಾಯರ ಭಕ್ತರು ತಮಗೆ ಕಷ್ಟ ಬಂದಾಗ ಹೇಳುವ ಮಾತೇ, ರಾಯರಿದ್ದಾರೆ ಕಾಪಾಡುತ್ತಾರೆ ಎಂದು. ಯಾಕಂದ್ರೆ ರಾಯರನ್ನು ನಂಬಿ, ಕಷ್ಟಕಾಲದಲ್ಲಿ ಅವರನ್ನು ಪ್ರಾರ್ಥಿಸಿದವರಿಗಷ್ಟೇ ರಾಯರ ಪವಾಡದ ಬಗ್ಗೆ ಗೊತ್ತಿರುತ್ತದೆ. ಅಂಥ ಭಕ್ತರಿಗಾಗಿ ನಾವಿವತ್ತು ಒಂದು ಮಂತ್ರವನ್ನು ಹೇಳಲಿದ್ದೇವೆ. ಈ ಮಂತ್ರವನ್ನು ನೀವು, ಪ್ರತಿದಿನ ಹೇಳಿದರೆ, ನಿಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗಿ, ಸುಖ ಶಾಂತಿ ನಿಮ್ಮ ಬಾಳಿನಲ್ಲಿ ನೆಲೆಸುತ್ತದೆ.
ನಾವಿವತ್ತು ರಾಯರ ಗಾಯತ್ರಿ ಮಂತ್ರವನ್ನು ನಿಮಗೆ ಹೇಳಲಿದ್ದೇವೆ. ಈ ಮಂತ್ರ ಹೇಳಲು ಕೆಲವು ವಿಧಾನವನ್ನು ನೀವು ಅನುಸರಿಸಬೇಕಾಗುತ್ತದೆ. ಗುರುವಾರದ ದಿನ ಈ ಮಂತ್ರ ಹೇಳಲು ಶುರು ಮಾಡಿದರೆ ಉತ್ತಮ. ಗುರುವಾರದ ದಿನ ಸ್ನಾನ ಮಾಡಿ ಶುಚಿರ್ಭೂತರಾಗಿ ಈ ಮಂತ್ರವನ್ನು ಹೇಳಬೇಕು. ಈ ಮಂತ್ರವನ್ನು ಹೇಳುವಾಗ ನಿಮ್ಮ ಬಳಿ ರಾಯರ ಮೂರ್ತಿಯೋ, ಅಥವಾ ರಾಯರ ಫೋಟೋ ಇರಲೇಬೇಕು. ಅದಕ್ಕೆ ಪೂಜೆ ಮಾಡಲೇಬೇಕು ಅಂತೇನಿಲ್ಲ. ಬದಲಾಗಿ ನೀವು ಭಕ್ತಿಯಿಂದ ಈ ಮಂತ್ರವನ್ನು ಹೇಳಿದರೆ ಸಾಕು.
ಈ ಮಂತ್ರವನ್ನು ದಿನಕ್ಕೆ ಒಂದು ಬಾರಿ, ಮೂರು ಬಾರಿ, ಒಂಬತ್ತು ಬಾರಿ, ಹನ್ನೊಂದು ಬಾರಿ, 108 ಬಾರಿ, ಅಥವಾ 1008 ಬಾರಿ ಹೇಳಬೇಕು. ನಿಮಗೆ ಎಷ್ಟು ಬಾರಿ ಹೇಳಲು ಸಾಧ್ಯವೋ, ಅಷ್ಟು ಬಾರಿ ನೀವು ಹೇಳಬಹುದು. ಆದರೆ ಈ ಮಂತ್ರವನ್ನು ಹೇಳುವಾಗ ಕೆಲ ನಿಯಮಗಳಿದೆ. ಹೆಣ್ಣು ಮಕ್ಕಳು ಮುಟ್ಟಾದಾಗ ಈ ಮಂತ್ರವನ್ನು ಹೇಳಬೇಡಿ. ಸೂತಕದ ಸಮಯದಲ್ಲಿ ಈ ಮಂತ್ರ ಹೇಳದಿರುವುದು ಉತ್ತಮ. ಹಾಗಾಗಿ ಈ ಮಮಂತ್ರವನ್ನು ಹೇಳುವಾಗ ಶುದ್ಧವಾಗಿ ಇರಬೇಕು. ರಾಯರ ಗಾಯತ್ರಿ ಮಂತ್ರ ಹೀಗಿದೆ ನೋಡಿ..
ಓಂ ವೆಂಕಟನಾಥಾಯ ವಿದ್ಮಹೇ
ಸಚ್ಚಿದಾನಂದಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ವೆಂಕಟನಾಥಾಯ ವಿದ್ಮಹೇ
ತಿಮ್ಮಣ್ಣ ಪುತ್ರಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ಪ್ರಹಲಾದಾಯ ವಿದ್ಮಹೇ
ವ್ಯಾಸ ರಾಜಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್
ಈ ಗಾಯತ್ರಿ ಮಂತ್ರವನ್ನು ಪ್ರತಿದಿನ ಹೇಳಿದರೆ ಉತ್ತಮ. ರಾಯರ ದಿನವಾದ ಗುರುವಾರದಂದು ಈ ಮಂತ್ರ ಹೇಳಲು ಪ್ರಾರಂಭಿಸಿ. ಈ ಮಂತ್ರ ಹೇಳುವುದರಿಂದ, ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಸಿಗುತ್ತದೆ. ರಾಯರ ಗಾಯತ್ರಿ ಮಂತ್ರ ಪಠಣೆಯಿಂದ ಸಕಲ ಕಾರ್ಯಗಳೂ ಪೂರ್ಣಗೊಳ್ಳುತ್ತದೆ.