Wednesday, January 15, 2025

Latest Posts

ನೇಪಾಳದ ಪಶುಪತಿನಾಥ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು..?

- Advertisement -

ಪ್ರಪಂಚದಲ್ಲಿರುವ ಏಕೈಕ ಹಿಂದೂ ರಾಷ್ಟ್ರ ಯಾವುದೆಂದು ಕೇಳಿದರೆ ಹೆಚ್ಚಿನವರು ಹೇಳೋದು ಭಾರತ ಅಂತ. ಆದ್ರೆ ನಿಜವಾದ ಉತ್ತರ ನೇಪಾಳ. ಹೌದು ಇಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪೂಜೆ ಪುನಸ್ಕಾರವನ್ನ ಅನುಸರಿಸುವ ಹಿಂದೂಗಳ ರಾಷ್ಟ್ರ ನೇಪಾಳವಾಗಿದೆ.

ಇನ್ನು ಪುಟ್ಟ ರಾಷ್ಟ್ರವಾಗಿರುವ ನೇಪಾಳಕ್ಕೆ ಯಾರಾದರೂ ಪ್ರವಾಸಕ್ಕೆ ಹೋದರೆ, ಪಶುಪತಿನಾಥ ದೇವಸ್ಥಾನ ನೋಡದೇ ಯಾರು ಹಿಂದಿರುಗಲಾರರು. ಹಾಗೆ ಹಿಂದಿರುಗಿದರೂ ಕೂಡ ನೇಪಾಳ ಪ್ರವಾಸ ಪೂರ್ಣಗೊಳ್ಳುವುದಿಲ್ಲ.

ಇನ್ನು ಈ ಪಶುಪತಿನಾಥ ದೇಗುಲದ ಇತಿಹಾಸ ನೋಡುವುದಾದರೆ, ನೇಪಾಳದ ಕಠ್ಮಂಡು ಕಣಿವೆಯಲ್ಲಿ, ಭಾಗಮತಿ ನದಿ ತೀರದಲ್ಲಿರುವ ಪಶುಪತಿನಾಥ ದೇವಾಲಯವು ವಿಶ್ವದಲ್ಲೇ ಬಹುಪ್ರಸಿದ್ಧ ದೇವಾಲಯ. ಜೀವನದಲ್ಲಿ ಒಮ್ಮೆಯಾದರೂ ಪಶುಪತಿನಾಥನ ದರ್ಶನ ಮಾಡಬೇಕೆಂಬುದು ಹಲವರ ಆಸೆಯಾಗಿರುತ್ತದೆ. ಇದು ಅಷ್ಟು ಶಕ್ತಿಶಾಲಿ ಮತ್ತು ಸುಂದರವಾದ ದೇವಸ್ಥಾನವಾಗಿದೆ.

ಪಶುಪತಿನಾಥ ಎಂದರೆ ಶಿವ. ಪಶುಪತಿನಾಥನೆಂದರೆ ಪಶುಗಳ ಒಡೆಯ ಎಂದರ್ಥ. ಒಮ್ಮೆ ಶಿವ ಪಾರ್ವತಿ ಭೂಮಿಯ ಮೇಲೆ ವಿಹರಿಸುವಾಗ ಭಾಗಮತಿ ನದಿ ತೀರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಈ ವೇಳೆ ಅಲ್ಲಿನ ನಿಸರ್ಗದ ಸೌಂದರ್ಯ ಕಂಡ ಶಿವ ಮತ್ತು ಪಾರ್ವತಿ ಕೃಷ್ಣಮೃಗ ಮತ್ತು ಜಿಂಕೆಯಾಗಿ ನಿಸರ್ಗದ ಸವಿ ಸವಿಯುತ್ತಿರುತ್ತಾರೆ. ಈ ವೇಳೆ ಕೃಷ್ಣಮೃಗನಾಗಿ ಓಡುತ್ತಿದ್ದ ಶಿವನ ಒಂದು ಕೋಡು ಕಳಚಿ ಬೀಳುತ್ತದೆ.

ತದನಂತರ ಗೋಪಾಲಕನೊಬ್ಬ ಇದೇ ಜಾಗದಲ್ಲಿ ತನ್ನ ಗೋವುಗಳನ್ನು ಮೇಯಿಸಲು ಬಂದಾಗ, ಗೋವು ಕೃಷ್ಣಮೃಗದ ಕೊಂಬು ಬಿದ್ದ ಜಾಗದಲ್ಲೇ ಹಾಲು ಕೊಡುತ್ತದೆ. ಹಾಲು ಸುರಿಯುತ್ತಿರುವ ದೃಶ್ಯವನ್ನು ಕಂಡ ಗೋಪಾಲಕ ಆ ಸ್ಥಳವನ್ನು ಅಗಿದಾಗ ಕೊಂಬು ಲಿಂಗವಾಗಿ ಮಾರ್ಪಟ್ಟಿರುತ್ತದೆ. ಮುಂದೆ ಇದೇ ಸ್ಥಳದಲ್ಲಿ ಪಶುಪತಿನಾಥ ದೇಗುಲ ನಿರ್ಮಾಣವಾಗುತ್ತದೆ.

ಭಾಗಮತಿ ನದಿ ಹರಿದು ಗಂಗೆಯನ್ನು ಸೇರುವುದರಿಂದ ಈ ನದಿಯನ್ನು ಗಂಗೆಯ ಸ್ವರೂಪವೆಂದು ಭಾವಿಸಲಾಗುತ್ತದೆ. ಅಲ್ಲದೇ ವೃದ್ಧರು ಕಾಶಿಯಲ್ಲಿ ಹೇಗೆ ತಮ್ಮ ಕೊನೆಯ ದಿನಗಳನ್ನು ಕಳೆಯಲು ಇಚ್ಛಿಸುತ್ತಾರೋ ಅಂತೆಯೇ ಪಶುಪತಿನಾಥ ದೇವಸ್ಥಾನದಲ್ಲಿಯೂ ಕೂಡ ವೃದ್ಧರು ತಮ್ಮ ಕೊನೆಯ ದಿನಗಳನ್ನು ಕಳೆಯಲು ಬರುತ್ತಾರೆ. ಅವರ ನಿಧನದ ನಂತರ ಈ ದೇವಸ್ಥಾನದ ಬಳಿಯೇ ಅವರ ಅಂತ್ಯ ಸಂಸ್ಕಾರ ಮಾಡಿ, ಅಸ್ತಿಯನ್ನು ಭಾಗಮತಿ ನೀರಿನಲ್ಲಿ ಹರಿಬಿಡಲಾಗುತ್ತದೆ.

ಇನ್ನು ಪಶುಪತಿ ನಾಥ ದೇಗುಲದ ಪ್ರಧಾನ ಅರ್ಚಕರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುರೋಹಿತರು ಎಂಬುದು ನಮ್ಮ ಹೆಮ್ಮೆ. ಶಂಕರಾಚಾರ್ಯರು ಬರೆದ ಗ್ರಂಥದಲ್ಲಿ ದಕ್ಷಿಣ ಕನ್ನಡದ ಪಂಚದ್ರಾವಿಡ ಬ್ರಾಹ್ಮಣರಿಂದ ಪಶುಪತಿನಾಥನ ಪೂಜೆಯಾಗಬೇಕೆಂದು ಬರೆದಿದ್ದು, ಹಲವು ವರ್ಷಗಳಿಂದಲೂ ಇಲ್ಲಿ ದಕ್ಷಿಣ ಕನ್ನಡ ಅರ್ಚಕರೇ ಪಶುಪತಿನಾಥನ ಪೂಜೆ ಮಾಡುತ್ತ ಬಂದಿದ್ದಾರೆ.

ನೇಪಾಲದಲ್ಲಿ ಎಷ್ಟೋ ಬಾರಿ, ಪ್ರವಾಹ, ಭೂಕಂಪ ಸಂಭವಿಸಿದರೂ, ಪಶುಪತಿನಾಥ ದೇವಾಲಯಕ್ಕೆ ಮಾತ್ರ ಕಿಂಚಿತ್ತು ಕುತ್ತು ಬರಲಿಲ್ಲವಂತೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss