ಎಲ್ಲರಿಗೂ ಗೊತ್ತಿರುವ ವಿಷಯ ಏನಂದ್ರೆ ಏರ್‌ಹಾಸ್ಟೇಸ್, ಪೈಲಟ್ ಆಗ್ಬೇಕಂದ್ರೆ ಸುಂದರ ಮುಖ, ಆಕರ್ಷಕ ಮೈಕಟ್ಟು ಹೊಂದಿರಬೇಕು. ಆದ್ರೆ ನಿಮಗೆ ಗೊತ್ತಿರದ ಇನ್ನೂ ಹಲವು ಸಂಗತಿಗಳಿದೆ. ಆ ಸಂಗತಿಗಳಾದ್ರೂ ಏನು..? ಪೈಲಟ್‌ಗಳಿಗಿರುವ ರೂಲ್ಸ್ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ಪೈಲಟ್‌ಗಳು ಕೂಲಿಂಗ್ ಗ್ಲಾಸ್ ಹಾಕುವಂತಿಲ್ಲ. ಗಡ್ಡ ಬಿಡುವಂತಿಲ್ಲ. ಗಡ್ಡ ಬಿಟ್ಟರೂ ಅದನ್ನ ಟ್ರಿಮ್ ಮಾಡಿಸಬೇಕು. ಯಾಕಂದ್ರೆ ಗಡ್ಡ ಇದ್ದರೆ, ಅದರಿಂದ ಕಠಿಣ ಸಮಯದಲ್ಲಿ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಪೈಲಟ್‌ಗಳು ಗಡ್ಡ ಬಿಡುವಂತಿಲ್ಲ. ವಿಮಾನದಲ್ಲಿರುವಾಗ ಇನ್ನು ಟೀ, ಕಾಫಿ, ನೀರು, ಜ್ಯೂಸ್ ಏನೂ ಕುಡಿಯುವಂತಿಲ್ಲ. ಯಾಕಂದ್ರೆ ಆ ದ್ರವ ಪದಾರ್ಥ ಅಲ್ಲಿ ಚೆಲ್ಲಿದರೆ, ವಿಮಾನ ಚಲಿಸಲು ತೊಂದರೆಯುಂಟಾಗುತ್ತದೆ. ಹಾಗಾಗಿ ಏನೇ ಕುಡಿಯುವುದಿದ್ದರೂ ವಿಮಾನ ನಿಲ್ಲಿಸಿದಾಗ, ಹೊರಗೆ ಬಂದೇ ಕುಡಿಯಬೇಕು.
ಇನ್ನು ಇಬ್ಬರು ಪೈಲಟ್‌ಗಳು ಇದ್ದರೂ, ವಿಮಾನ ಚಲಿಸುವಾಗ ಇಬ್ಬರೂ ಮಾತನಾಡುವಂತಿಲ್ಲ. ಅಗತ್ಯದ ವಿಷಯವಿದ್ದರೆ, ಪ್ರಯಾಣಕ್ಕೆ ಸಂಬಂಧಿಸಿದ ವಿಷಯವಿದ್ದರೆ ಮಾತ್ರ ಮಾತನಾಡಬಹುದು. ಇನ್ನು ಇಬ್ಬರೂ ಪೈಲಟ್‌ಗಳಿಗೂ ಬೇರೆ ಬೇರೆ ಆಹಾರವನ್ನು ನೀಡಲಾಗುತ್ತದೆ. ಯಾಕಂದ್ರೆ ಒಬ್ಬರಿಗೆ ಆರೋಗ್ಯ ಕೆಟ್ಟರೆ, ಇನ್ನೊಬ್ಬರು ಇರುತ್ತಾರೆಂದು. ಇನ್ನು ಪೈಲಟ್‌ಗಳು ರಾತ್ರಿ ವೇಳೆ 8 ಗಂಟೆ ಮತ್ತು ದಿನದಲ್ಲಿ 9 ಗಂಟೆ ಅಷ್ಟೇ ಡ್ಯೂಟಿ ಮಾಡಬೇಕು. ಅದಕ್ಕಿಂತ ಹೆಚ್ಚು ಕೆಲಸ ಮಾಡಲು ಬಿಡುವುದಿಲ್ಲ. ಯಾಕಂದ್ರೆ ವಿಮಾನ ಚಲಾಯಿಸಲು ಅವರಿಗೆ ಫ್ರೆಶ್ ಮೂಡ್ ಇರಬೇಕು. ಹಾಗಾಗಿ ಅವರಿಗೆ ಸರಿಯಾಗಿ ನಿದ್ದೆಯಾಗಬೇಕು. ಈ ಕಾರಣಕ್ಕೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕು.
ಇನ್ನು ವಿಮಾನ ಚಲಿಸುವ ವೇಳೆ ಮ್ಯೂಸಿಕ್ ಕೇಳುವಂತಿಲ್ಲ. ಅಲ್ಲದೇ ತಮಗೆ ಬೇಕಾದ ಆಹಾರವನ್ನು ನೀಡಲಾಗುವುದಿಲ್ಲ. ಬದಲಾಗಿ ಅವರು ಕೊಟ್ಟ ಆಹಾರವನ್ನೇ ಪೈಲಟ್‌ಗಳು ತಿನ್ನಬೇಕು. ಅವರು ಯಾರನ್ನು ನಿಮ್ಮ ಜೊತೆಗಾರರನ್ನಾಗಿ ಡ್ಯೂಟಿಗೆ ಹಾಕುತ್ತಾರೋ, ಅವರೊಟ್ಟಿಗೆಯೇ ವಿಮಾನ ಚಲಾಯಿಸಬೇಕು. ಓರ್ವ ಪುರುಷ ಮಮತ್ತು ಓರ್ವ ಮಹಿಳೆ ಹೀಗೆ ಬೇರೆ ಬೇರೆ ಲಿಂಗದವರಿಗೂ ಡ್ಯೂಟಿ ಕೊಡಲಾಗುತ್ತದೆ.
ಇನ್ನು ಪೈಲಟ್‌ಗಳು ಬುಕ್ ಇಟ್ಟುಕೊಳ್ಳುವಂತಿಲ್ಲ. ಮೊಬೈಲ್, ಲ್ಯಾಪ್‌ಟಾಪ್, ಐಪಾಡ್ ಇವೆಲ್ಲ ಇಟ್ಟುಕೊಳ್ಳುವ ಹಾಾಗಿಲ್ಲ. ಕಂಪನಿಯಿಂದಲೇ ಅವರಿಗೆ ಗ್ಯಾಜೆಟ್‌ಗಳನ್ನ ನೀಡಲಾಗುತ್ತದೆ. ಕೆಲಸದಲ್ಲಿ ಅದರ ಅವಶ್ಯಕತೆ ಇದ್ದಲ್ಲಿ ಮಾತ್ರ ಅವುಗಳನ್ನು ಬಳಸಬೇಕು.