- Advertisement -
ಜೂನ್ 21ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಈ ಬಗ್ಗೆ ಪಂಡಿತ್ ಕೆ.ಎಂ.ರಾವ್ ಕೆಲ ರಾಶಿಗಳ ಫಲಾಫಲದ ಬಗ್ಗೆ ತಿಳಿಸಿದ್ದಾರೆ.

ಭಾನುವಾರ ದಿನಾಂಕ 20ರಂದು 10 ಗಂಟೆ 6 ನಿಮಿಷಕ್ಕೆ ಸ್ಪರ್ಶ ಕಾಲ, 11 ಗಂಟೆ 43 ನಿಮಿಷದಿಂದ ಮಧ್ಯಕಾಲ. ಒಂದು ಗಂಟೆ 28 ನಿಮಿಷಕ್ಕೆ ಮೋಕ್ಷ ಕಾಲವಾಗುತ್ತದೆ. ಹೀಗೆ 3ಗಂಟೆ 30 ನಿಮಿಷದ ಕಾಲ ಗ್ರಹಣವಿರುತ್ತದೆ.
ಭಾರತವಷ್ಟೇ ಅಲ್ಲದೇ, ಪಾಕಿಸ್ತಾನ, ಚೀನಾದಲ್ಲೂ ಕೂಡ ಗ್ರಹಣ ಸಂಭವಿಸುತ್ತದೆ. ಬೆಳಗ್ಗಿನ ಜಾವ 4.30ರ ಒಳಗೇ ನೀವು ಆಹಾರ ಸೇವಿಸಬೇಕು. ಗ್ರಹಣ ಕಾಲದಲ್ಲಿ ಜಪತಪ ಇತ್ಯಾದಿ ಮಾಡಬೇಕು.
ಇನ್ನು ಸೂರ್ಯಗ್ರಹಣದಂದು ವೃದ್ಧರು, ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಜಾಗೃತರಾಗಿರಬೇಕು.

- Advertisement -